Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

3 Overs 100 Run ಮೂರು ಓವರ್‌ಗಳಲ್ಲೇ 100 ರನ್‌

ಕ್ರಿಕೆಟ್‌ನಲ್ಲಿ ಈಗ ದಾಖಲೆಗಳ ಮುರಿಯುವ ಕಾಲ. ಹಿಂದಿದ್ದ ದಾಖಲೆಗಳಲ್ಲಿ ಹೆಚ್ಚಿನವು ಮುರಿಯಲ್ಪಟ್ಟು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಗ್ಯಾರಿ ಸೋಬರ್ಸ್‌ ಆರು ಎಸೆತಗಳಿಗೆ ಆರು ಸಿಕ್ಸರ್‌ ಸಿಡಿಸಿದ್ದನ್ನು ಕೇಳಿದ್ದೆವು, ಆದರೆ ಯುವರಾಜ್‌ ಸಿಂಗ್‌ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಸಿಡಿಸಿದ್ದನ್ನು ನೋಡಿದೆವು. ಆದರೆ ಮೂರು ಓವರ್‌ಗಳಲ್ಲಿ ಶತಕ ಸಿಡಿಸಿದ್ದನ್ನು ನಾವು ಕೇಳಿದ್ದೇವೆ, ಆದರೆ ನೋಡಿಲ್ಲ. ಮುಂದೆಯೂ ನೋಡುವುದು ಕಷ್ಟ ಎಂದು ಹೇಳಲಾಗದು. ಕ್ರಿಕೆಟ್‌ ಇದೇ ರೀತಿ ಬರೇ ಅಬ್ಬರದ ಆಟವಾಗಿ ಮುಂದುವರಿದರೆ ಆ ದಾಖಲೆಯೂ ಮುರಿಯಲ್ಪಟ್ಟೀತು. 3 overs 100 run in cricket world this record unable to break by anyone.

3 ಓವರ್‌ಗಳಲ್ಲಿ 100 ಇದು 1931ರ ದಾಖಲೆ. ಆಸ್ಟ್ರೇಲಿಯಾದ ಡಾನ್‌ ಬ್ರಾಡ್ಮನ್‌ ಸಿಡಿಸಿದ ದಾಖಲೆ. 1931 ನವೆಂಬರ್‌ 2 ರಂದು ಡಾನ್‌ ಬ್ರಾಡ್ಮನ್‌ ಅವರು ಬ್ಲಾಕ್‌ಹ್ಯಾತ್‌ XI ಹಾಗೂ ಲಿತ್‌ಗೋ ವಿರುದ್ಧದ ಪಂದ್ಯದ ನಡುವೆ ಈ ದಾಖಲೆ ಬರೆದಿದ್ದಾರೆ. ಬ್ರಾಡ್ಮನ್‌ ಬ್ಲಾಕ್‌ಹ್ಯಾತ್‌ ಪರ ಆಡಿದ್ದರು.

ನೆನಪಿರಲಿ ಆಗ ಓವರ್‌ ಒಂದಕ್ಕೆ 8 ಎಸೆತಗಳು.  ಬಿಲ್‌ ಬ್ಲ್ಯಾಕ್‌ ಎಸೆದ ಮೊದಲ ಓವರ್‌ನಲ್ಲಿ ಬ್ರಾಡ್ಮನ್‌ 33 ರನ್‌ ಗಳಿಸಿದರು. (6,6,4,2,4,4,6,1), ಹೊರಿ ಬಾಕರ್‌ ಎಸೆದ ಎರನೇ ಓವರ್‌ನಲ್ಲಿ  ಬ್ರಾಡ್ಮನ್‌ 40 ರನ್‌ ಗಳಿಸಿದರು. (6,4,4,6,6,4,6,4,), ಬ್ಲ್ಯಾಕ್‌ ಎಸೆದ ಮೂರನೇ ಓವರ್‌ನಲ್ಲಿ ಬ್ರಾಡ್ಮನ್‌ ಗಳಿಸಿದ್ದು 29 ರನ್‌. (1,6,6,1,1,4,4,6).

ಬ್ರಾಡ್ಮನ್‌ ಆ ಪಂದ್ಯದಲ್ಲಿ 256 ರನ್‌ ಗಳಿಸಿದ್ದರು. ಆಗ ಬ್ರಾಡ್ಮನ್‌ ಆಟ ಹೇಗಿತ್ತೆಂದರೆ ಪ್ರೇಕ್ಷಕರಲ್ಲಿ ಯಾರಾದರೂ ಈ ಕಡೆ ಒಂದು ಸಿಕ್ಸರ್‌ ಬರಲಿ” ಎಂದರೆ ಆ ಕಡೆ ಹೊಡೆಯುತ್ತಿದ್ದರಂತೆ.


administrator