ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್ಸಿ
ಕೋಲ್ಕೊತಾ: ಸುನೀಲ್ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್ ಸಿ ತಂಡ ಈಸ್ಟ್ ಬೆಂಗಾಲ್ ತಂಡದ ಪ್ಲೇ ಆಫ್ ಹಂತ ತಲಪುವ ಪ್ರಯತ್ನಕ್ಕೆ ತಡೆಯೊಡ್ಡಿದೆ. Sunil Chhetri’s late equalizer ends East Bengal FC’s playoffs charge after their 1-1 draw with Bengaluru FC
ಈಸ್ಟ್ ಬೆಂಗಾಲ್ ತಂಡಕ್ಕೆ ಇನ್ನು ಉಳಿದಿರುವುದು ಒಂದು ಪಂದ್ಯ ಮಾತ್ರ. ಅದು ಕೂಡ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ. ಅಲ್ಲಿ ಮೂರು ಅಂಕ ಗಳಿಸಿದರೂ 31 ಅಂಕವಾಗುತ್ತದೆ. ನಾರ್ಥ್ ಈಸ್ಟ್ ಯುನೈಟೆಡ್ ಈಗಾಗಲೇ 32 ಅಂಕಗಳನ್ನು ಹೊಂದಿದ್ದು ಸುಸ್ಥಿತಿಯಲ್ಲಿದೆ.
11ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡದ ಸೌಲ್ ಕ್ರೆಸ್ಪೋ ಪೆನಾಲ್ಟಿ ವಲಯದಲ್ಲಿ ಚೆಂಡನ್ನು ನಿಯಂತ್ರಿಸಿ ಗೋಲು ಗಳಿಸುವವರಿದ್ದರು, ಆದರೆ ಎಡವಿದ ಕಾರಣ ಚೆಂಡನ್ನು ರಾಫೇಲ್ ಮೆಸ್ಸಿ ಬೌಲಿಗೆ ನೀಡಿದರು. ಮೆಸ್ಸಿ ಬೌಲಿ ಕೇಂದ್ರ ಭಾಗದಿಂದ ತುಳಿದ ಚೆಂಡು ಬೆಂಗಳೂರಿನ ಗೋಲ್ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿ ನೆಟ್ಗೆ ಬಡಿಯಿತು. ಈಸ್ಟ್ ಬೆಂಗಾಲ್ ಆರಂಭದಲ್ಲೇ ಗೋಲು ಗಳಿಸಿತು. ಪ್ರಥಮಾರ್ಧದ ಅಂಚಿನಲ್ಲಿ ಈಸ್ಟ್ ಬೆಂಗಾಲ್ನ ಡೊಮಿಟ್ರಿಯೋಸ್ ಡಿಯಾಮಾಂಟಕೋಸ್ ರೆಡ್ ಕಾರ್ಡ್ ಪಡೆದ ಕಾರಣ ತಂಡ 10 ಆಟಗಾರರಲ್ಲೇ ಪಂದ್ಯವನ್ನು ಮುನ್ನಡೆಸಬೇಕಾಯಿತು.
90 ನಿಮಿಷಗಳ ಆಟದ ಬಳಿಕ ಇಂಜರಿ ಟೈಮ್ನ ಆರಂಭದಲ್ಲಿ ಬೆಂಗಳೂರಿಗೆ ಪೆನಾಲ್ಟಿ ಕಿಕ್ಗೆ ಅವಕಾಶ ಸಿಕ್ಕಿತು. ಪೆನಾಲ್ಟಿ ಸ್ಪೆಶಾಲಿಸ್ಟ್ ಸುನಿಲ್ ಛೆಟ್ರಿ ಯಾವುದೇ ಪ್ರಮಾದ ಎಸಗದೆ ಗೋಲು ಗಳಿಸಿದರು. ಇದರಿಂದ ಪಂದ್ಯ 1-1 ರಲ್ಲಿ ಸಮಬಲಗೊಂಡಿತು. ಮಾರ್ಚ್ 11 ರಂದು ಬೆಂಗಳೂರು ಎಫ್ಸಿ ಮುಂಬೈ ಸಿಟಿ ಎಫ್ಸಿ ವಿರುದ್ಧ ಆಡಲಿದೆ. ಈಸ್ಟ್ ಬೆಂಗಾಲ್ ಮಾರ್ಚ್ 8 ರಂದು ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ.