Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೊಹ್ಲಿಯ ಚಾಂಪಿಯನ್‌ ಆಟ, ಭಾರತ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ

ದುಬೈ: ವಿರಾಟ್‌ ಕೊಹ್ಲಿ (84) ಅವರ ಅನುಭವದ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡದ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 4 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಭಾರತ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಎರಡನೇ ಸೆಮಿಫೈನಲ್‌ನಲ್ಲಿ ಗೆಲ್ಲುವ ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. India defeat Australia by 4 wickets and reached the final of ICC Champions Trophy.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 264 ರನ್‌ ಗಳಿಸಿ ಸರ್ವ ಪತನ ಕಂಡಿತ್ತು. ಸಾಧಾರಣ ಮೊತ್ತವನ್ನು ಬೆಂಬತ್ತಿದ ಭಾರತ ಇನ್ನೂ 11 ಎಸೆತ ಬಾಕಿ ಇರುವಾಗಲೇ 6 ವಿಕೆಟ್‌ ಕಳೆದುಕೊಂಡು 267 ರನ್‌ ಗಳಿಸಿತು. ವಿರಾಟ್‌ ಕೊಹ್ಲಿ ಅತ್ಯಂತ ತಾಳ್ಮೆಯ ಆಟವಾಡಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಹ್ಲಿ ಗಳಿಸಿದ್ದ 84 ರನ್‌ ಗಳಲ್ಲಿ 56 ಸಿಂಗಲ್ಸ್‌ ಇದೆ ಎಂದರೆ ಪಿಚ್‌ ಹಾಗೂ ಗಳಿಸಬೇಕಾದ ಮೊತ್ತವನ್ನು ಗಮನದಲ್ಲಿರಿಸಿಕೊಂಡು ಅವರು ಆಡಿದ್ದಾರೆ ಎಂಬುದು ಸ್ಪಷ್ಟ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಇದೇ ರೀತಿಯ ತಾಳ್ಮೆಯ ಆಟವಾಡಿದ್ದರು. ಕೆ ಎಲ್‌ ರಾಹುಲ್‌ ಅಜೇಯ 42 ರನ್‌ ಗಳಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಭಾರತದ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಶಮಿ 48 ರನ್‌ಗೆ 3 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು. ಎರಡು ಕ್ಯಾಚ್‌ ಕೈಚಲ್ಲಿದುದರ ಪರಿಣಾಮ ಶಮಿ ಐದು ವಿಕೆಟ್‌ ಸಾಧನೆಯ ಅವಕಾಶವನ್ನೂ ಕೈಚೆಲ್ಲಬೇಕಾಯಿತು. ವರುಣ್‌ ಚಕ್ರವರ್ಥಿ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್‌ ಗಳಿಸಿದರು. ಆಸ್ಟ್ರೇಲಿಯಾದ ಪರ ನಾಯಕ ಸ್ಟೀವನ್‌ ಸ್ಮಿತ್‌ (73) ಹಾಗೂ ಅಲೆಕ್ಸ್‌ ಕ್ಯಾರಿ (61) ತಂಡದ ಸಾಧಾರಣ ಮೊತ್ತಕ್ಕೆ ನೆರವಾದರು. ವಿರಾಟ್‌ ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.


administrator