ಕರಾವಳಿಯಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಕಲರವ
ಮಂಗಳೂರು: ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಈವೆಂಟ್ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ನಾಳೆಯಿಂದ ಕರಾವಳಿಯ ಸುಂದರವಾದ ಸಸಿಹಿತ್ಲು ಬೀಚ್ ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಆವೃತ್ತಿಯಾಗಿರುವ ಈ ಉತ್ಸವದಲ್ಲಿ ಪ್ರಖ್ಯಾತ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ (SUP) ಸ್ಪರ್ಧೆಗಳು, ಸಾಂಸ್ಕೃತಿಕ ಹಬ್ಬಗಳು ಇರಲಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರಾ ಸರ್ಫ್ ಕ್ಲಬ್ ಅವರಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು WrkWrk ಸಹಯೋಗದಲ್ಲಿ ನಡೆಸಲಾಗುತ್ತಿದ್ದು, ಇನ್ಕ್ರೆಡಿಬಲ್ ಇಂಡಿಯಾ, ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ಕರ್ನಾಟಕ ಪ್ರವಾಸೋದ್ಯಮ ಅವರಿಂದ ಪ್ರಾಯೋಜಿಸಲಾಗಿದೆ. World’s top Stand-Up Paddlers ready to make waves as India Paddle Festival kicks of tomorrow
ಬಾಲಿವುಡ್ ನಟ ಹಾಗೂ ಫಿಟ್ನೆಸ್ ಐಕಾನ್ ಸುನೀಲ್ ಶೆಟ್ಟಿ ಅವರು ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಅಧಿಕೃತ ಅಂಬಾಸಿಡರ್ ಆಗಿ ಸೇರಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸುನೀಲ್ ಶೆಟ್ಟಿ “ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಮತ್ತೊಮ್ಮೆ ಭಾರಿ ಉತ್ಸಾಹಭರಿತ ಸ್ಪರ್ಧೆಗಳಿಗೆ ವೇದಿಕೆಯಾಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವುದು ನಿಜಕ್ಕೂ ಪ್ರೇರಣಾದಾಯಕ ಎಂದಿದ್ದಾರೆ.
ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ಜಾಗತಿಕ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದು, ಪ್ರಪಂಚದ ಅತ್ಯುತ್ತಮ ಪ್ಯಾಡ್ಲರ್ ಗಳು ಭಾಗವಹಿಸಲಿದ್ದಾರೆ. ಕ್ರಿಸ್ಟಿಯನ್ ಆಂಡರ್ಸನ್ (ಡೆನ್ಮಾರ್ಕ್), ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೋ (ಹಂಗೇರಿ), ಮತ್ತು ಪ್ರಸ್ತುತ ಮಹಿಳಾ ಚಾಂಪಿಯನ್ ಹಾಗೂ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಎಸ್ಪೆರಾಂಜಾ ಬರೇರಾಸ್ (ಸ್ಪೇನ್) ಅವರು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಭಾರತ ತಂಡವನ್ನು 25 ಬಾರಿ ನ್ಯಾಷನಲ್ SUP ಚಾಂಪಿಯನ್ ಪಟ್ಟ ಪಡೆದುಕೊಂಡ ಸೆಕರ್ ಪಚ್ಚೈ ಮುನ್ನಡೆಸಲಿದ್ದಾರೆ. ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಕೊರಿಯಾನ ಕ್ರೀಡಾಪಟುಗಳ ಈ ಈವೆಂಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಈವೆಂಟ್ ನಲ್ಲಿ ಮಂತ್ರಾ ಅಡ್ವೆಂಚರ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಈ ಉತ್ಸವದಲ್ಲಿ ಭಾರತದ ವಿಭಿನ್ನ ಪ್ರದೇಶಗಳಲ್ಲಿ ಅಭ್ಯಾಸವಾಗುವ ಸಾಹಸ ಮತ್ತು ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಜಗತ್ತನ್ನು ತೊಡಗಿಸುವ ರೋಚಕ ಭಾರತೀಯ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಲಾಗುತ್ತದೆ. 5 ರಿಂದ 40 ನಿಮಿಷಗಳ ನಡುವಿನ ಚಿಕ್ಕ ಚಲನಚಿತ್ರಗಳು, ಅಲ್ಟ್ರಾಮ್ಯಾರಥಾನ್ ಓಟ, ರಾಕ್ ಕ್ಲೈಂಬಿಂಗ್, ಸರ್ಫಿಂಗ್, ಸ್ಕೇಟ್‌ಬೋರ್ಡಿಂಗ್ ಮತ್ತು ಸ್ನೋಬೋರ್ಡಿಂಗ್ ಮುಂತಾದ ಸಾಹಸ ಕ್ರೀಡೆಗಳನ್ನು ಒತ್ತಿಹೇಳಲಿದೆ.
ಗಂಗಾ ಗರ್ಲ್ಸ್, ಲೈಫ್ ಅಪ್‌ಹಿಲ್ , ಮೇಘಾಲಯ ಅಡ್ವೆಂಚರ್ ಟೂರಿಸಂ ಫಿಲ್ಮ್ ಡ್ರ್ಯಾಗನ್’ಸ್ ಲೇರ್ , ಅಬುಸ್ ಮೊಡ್ರೋಪ್ ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಆಳ್ವ ಕೂಟೋ ಅವರ ವಿಶೇಷ ಲೈವ್ ಪರಫಾರ್ಮೆನ್ಸ್ ಕೂಡ ಇರಲಿದೆ. ಮಾರ್ಚ್ 9 ಭಾನುವಾರದಂದು ಅದ್ದೂರಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಇದರಲ್ಲಿ ಅಂತಿಮ ಪೈಪೋಟಿ ರೇಸ್‌ಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜೊತೆಗೆ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025 ನ ವಿಜೇತರನ್ನು ಘೋಷಿಸಲಾಗುತ್ತದೆ.