25 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜನಾಂಗದ ರಾಷ್ಟ್ರ ಮಟ್ಟದ ಕುಸ್ತಿ
ಧಾರವಾಡ: ಇಲ್ಲಿನ ಐ ಐ ಟಿ ಕಾಲೇಜಿನ ಹತ್ತಿರದ ತಡಸಿನಕೊಪ್ಪ ಗ್ರಾಮದಲ್ಲಿ ಇದೇ ತಿಂಗಳ 25 ರಂದು ಶ್ರೀ ಮಹರ್ಷಿ ಜನಾಂಗದ ವತಿಯಿಂದ ತಡಸಿನಕೊಪ್ಪ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. April 25th National wrestling Championship at Dharwad Organized by Shri Maharshi Valmiki Community.
ಎಕ್ಸೀಸ್ ಡೆವಲಪ್ಪರ್ಸ್ ಹಾಗೂ ಬಿಲ್ಡರ್ಸ್‌ನ ಮಾಲೀಕರಾದ ಪ್ರಕಾಶ್ ಯ. ಪಾಟೀಲ ಅವರು ಈ ಚಾಂಪಿಯನ್‌ಷಿಪ್‌ನ ಪ್ರಮುಖ ಪ್ರಾಯೋಜಕರಾಗಿರುತ್ತಾರೆ. ಅರುಣ್ ಕುಮಾರ್ ಚವ್ಹಾಣ, ಭರತ್ ಕುಮಾರ್, ಎಂ.ಡಿ ಭಟ್ಟೂರ, ಮಹೇಶ ರಂಗಣ್ಣವರ, ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೊಲೀಸ್ ಐಜಿಪಿ ಎನ್ ಶಶಿ ಕುಮಾರ್ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಕಟ ಕುಸ್ತಿ ಸಂಘಟದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಗೌರಿ, ಅಪೊಲೋ ಬಿಲ್ಡನರ್ಸ್ & ಡೆವಲಪ್ಪರ್ಸ್‌ನ ಹುಬ್ಬಳಿಯ ಶ್ರೀಕಾಂತ ಜಯರಾಮ ಭಟ್ಟ, ಹಬ್ಬಳ್ಳಿಯ ಪ್ರೀತಿ ಸಿಲ್ಕ್‌ನ ಮಾಲೀಕರಾದ ಶಾಂತಿ ಲಾಲ ಭಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕರಾದ ಮೊಹಮ್ಮದ್ ರಫೀಕ್ ಎಚ್. ಸಾವಂತನವರ, ಖುಷಿ ಡೆವಲಪ್ಪರ್ಸ್ & ಬಿಲ್ಡರ್ಸ್‌ನ ಆನಂದ ಕಾಲವಾಡ, ವಿಭಾ ಡೆವಲಪ್ಪರ್ಸ್ ಹಾಗೂ ಬಿಲ್ಡರ್ಸ್‌ನ ಸಂಗಮೇಶ ಹಂಪಣ್ಣವರ, ಸಮಾಜ ಸೇವಕ ಕಲ್ಲಪ್ಪ ವಾಲೀಕಾರ ಉಣಕಲ್ಲ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಲಕ್ಷ್ಮೀ ಮಾ, ಹಿಂಡಸಗೇರಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ಕೇಸರಿ ಗಂಗಾವೇಷ ತಾಲೀಮು ಕೊಲ್ಲಾಪುರದ ಸಿಕಂದರ ಶೇಖ, ಉಪಮಾನ್ ಭಾರತ ಕೇಸರಿ ಯುನಿವರ್ಸಿಟಿ ಚಾಂಪಿಯನ್ ವೀಕ್ರಾಂತ ದೆಹಲಿ, ತಾಲೀಮು ಪೂನಾದ ಸೌರಭ ಪಾಟೀಲ, ರೋಹನ ಹಬ್ಬಾಳ, ಪ್ರಥಮೇಶ ಮುರಗೋಡ, ರೋಷನ್ ಮಾಸೂರ, ನೀಲೇಶ ಮುರಗೋಡ, ಸಾಯಿ ಹಾಸ್ಟೆಲ್ ಧಾರವಾಡದ ಪರಮಾನಂದ ಇಂಗಳಗಿ, ತಾಲೀಮು ಮಾರುತಿ ಧಾರವಾಡದ ಶಶಾಂಕ ತಡಸಿನಕೊಪ್ಪ, ತಾಲೀಮು ಜ್ಯೋತಿ ಧಾರವಾಡದ ಅಶೋಕ ಯಾದವಾಡ, ಜ್ಯೋತಿ ತಾಲೀಮು ಧಾರವಾಡದ ಸಿದ್ಧಾರೂಢ ಕುಡಕಲಕಟ್ಟಿ, ಸಾಯಿ ಹಾಸ್ಟೆಲ್ ಧಾರವಾಡದ ಭೀಮು ಕಾಟೆ, ಸೇರಿದಂತೆ 60 ಜೋಡಿ ಶ್ರೇಷ್ಠ ಕುಸ್ತಿಪಟುಗಳು ಸೆಣಸಾಟ ನಡೆಸಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಪುಷ್ಪಾ ನಾಯಕ ಧಾರವಾಡ-ಸಪ್ನಾ ಹಾವೇರಿ, ಜ್ಞಾನವೀ ಧಾರವಾಡ-ಚೈತನ್ಯ ಮೈಸೂರು, ಗಂಗಮ್ಮ ಮುರಗೋಡ-ಪ್ರಭಾವತಿ ಧಾರವಾಡ, ವನಿತಾ ಕಲ್ಲೂರ- ಸನ್ನಿಧಿ ಜಮಖಂಡಿ ನಡುವೆ ಸ್ಪರ್ಧೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880729877, 9731694734, 9845282673, 7338595534, 7019816148, 9900681393, 9900364452