Thursday, November 21, 2024

ಮೈಸೂರು ವಾರಿಯರ್ಸ್ ಕಾಳಜಿಯ ಆಟ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನಲ್ಲಿ ತಂಡಗಳು ಗೆಲ್ಲುವುದಕ್ಕಾಗಿಯೇ ಆಡುತ್ತವೆ. ಗೆಲ್ಲುವುದೇ ಪ್ರತಿಯೊಂದು ತಂಡದ ಉದ್ದೇಶವಾಗಿರುತ್ತದೆ. ಮಾಜಿ ಚಾಂಪಿಯನ್ ಮೈಸೂರು ವಾರಿಯರ್ಸ್ ಕೂಡ ಅದೇ ಉದ್ದೇಶವಿರಿಸಿಕೊಂಡು ಅಂಗಣಕ್ಕಿಳಿಯುತ್ತಿದೆ. ಆದರೆ ಆಟದ ಜತೆಯಲ್ಲೇ ಸಾಮಾಜಿಕ ಕಾಳಜಿಯನ್ನು ಉದ್ದೇಶವಿರಿಸಿಕೊಂಡು ಈ ತಂಡದ ಆಟಗಾರರು ಆಡಲಿದ್ದಾರೆ.

ಈ ಬಾರಿಯ ಕೆಪಿಎಲ್‌ನಲ್ಲಿ ಬರುವ ಹಣವನ್ನು ರಿಫಾರೆಸ್ಟ್ ಇಂಡಿಯಾ, ಕಲಿಸು ಫೌಂಡೇಷನ್, ಡಾಯ್ಷೆ ಕ್ಲೈಫ್ಟ್ ಕಿಂಡರ್ ಲೈಫ್ ಹಾಗೂ ಉಷಾಕಿರಿಣ ಕಣ್ಣಿನ ಆಸ್ಪತ್ರೆ ಸಂಸ್ಥೆಗಳಿಗೆ ಸಮಾನವಾಗಿ ಹಂಚಲಾಗುತ್ತದೆ.

ಪಂದ್ಯದ ವೇಳೆ ಮೈಸೂರು ವಾರಿಯರ್ಸ್ ಆಟಗಾರರು ಸಿಡಿಸುವ ಸಿಕ್ಸರ್, ಬೌಂಡರಿ ಹಾಗೂ ಕ್ಯಾಚ್‌ಗಳಿಂದ ೧೦೦೦ ರೂ. ಸಂಗ್ರಹವಾಗುತ್ತದೆ. ಸೈಕಲ್ ಪ್ಯೂರ್ ಅಗರಬತ್ತೀಸ್ ಈ ಮೊತ್ತವನ್ನು ದ್ವಿಗುಣಗೊಳಿಸಿ ಪ್ರತಿಯೊಂದು ಸಂಸ್ಥೆಗೂ ಸಮಾನವಾಗಿ ಹಂಚಲಾಗುತ್ತದೆ. ಇದು ಎನ್.ಆರ್. ಸಮೂಹ ಸಂಸ್ಥೆಗಳ ಸಾಮಾಜಿಕ ಬದ್ಧತೆಗೆ ಉದಾಹರಣೆಯಾಗಿದೆ.
ರಿಫಾರೆಸ್ಟ್ ಗಿಡಗಳನ್ನು ನೆಟ್ಟು ವಾತಾರವಣವನ್ನು ಹಸಿರುಗೊಳಿಸುವ, ನೆಟ್ಟ ಗಿಡಗಳನ್ನು ಕಾಯ್ದು ಅರಣ್ಯವನ್ನು ಬೆಳೆಸುವ ಕೆಲಸದಲ್ಲಿ ನಿರತವಾಗಿದೆ. ಈ ಸಂಸ್ಥೆಗೆ ಮೈಸೂರು ವಾರಿಯರ್ಸ್ ಉತ್ತಮ ರೀತಿಯಲ್ಲಿ ನೆರವು ನೀಡಲಿದೆ. ಇಲ್ಲಿ ಮೈಸೂರು ವಾರಿಯರ್ಸ್‌ನ ಉದ್ದೇಶ ಕೇವಲ ಕ್ರಿಕೆಟ್ ಆಡುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಕಲಿಸು ಫೌಂಡಶನ್ ಮೈಸೂರಿನ ಕುವೆಂಪು ನಗರದಲ್ಲಿರುವ ಸರಕಾರಿ ಶಾಲೆಗಳಿಗೆ ೫ ಗ್ರಂಥಾಲಯಗಳ ಕೊಡುಗೆ ನೀಡಲಿದೆ. ವೆಸ್ಟೋ ಪ್ರೊ ಸೈನ್ಸ್ ಲ್ಯಾಬ್ ನಿರ್ಮಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ನೆರವು ನೀಡಲಿದೆ. ಇದು ಮೈಸೂರಿನ ಮೊದಲ ಜ್ಞಾನದ ಪ್ರಯೋಗಾಲವಾಗಿದೆ. ಉಷಾಕಿರಣ ಕಣ್ಣಿನ ಆಸ್ಪತ್ರೆಯು ಈಗಾಗಲೇ ಮೆಳ್ಳೆಗಣ್ಣನ್ನು ಹೊಂದಿರುವ ೫೦ ಯುವತಿಯರಿಗೆ ಉಚಿತ ಚಿಕಿತ್ಸೆ ನೀಡಿದೆ. ಅಲ್ಲದೆ ೩೦ ಯುವತಿಯರಿಗೆ ಸೀಳುತುಟಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ.
ಮೈಸೂರು ವಾರಿಯರ್ಸ್‌ನ ಮಾಲೀಕ ಹಾಗೂ ಸೈಕಲ್ ಪ್ಯೂರ್ ಅಗರ್‌ಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜನ್ ರಂಗರಾವ್, ತಮ್ಮ ಪಾಲುದಾರಿಕೆಗೆ ಸೇರಿರುವ ಸಂಸ್ಥೆಗಳ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಸಾಮಾಜಿಕ ಕಾಳಜಿಯುಳ್ಳ ಸಂಸ್ಥೆಗಳನ್ನು ತಮ್ಮ ತಂಡದ ಪಾಲುದಾರಿಕೆಯಲ್ಲಿ ಸೇರಿಸಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.

Related Articles