Saturday, January 18, 2025

ಬೆಂಗಳೂರಿನಲ್ಲಿ ಜಿಎಂ, ರೇ ಈಜು ಕೇಂದ್ರ

ಸ್ಪೋರ್ಟ್ಸ್ ಮೇಲ್ ವರದಿ 

 

ಗ್ಲೆನ್ ಮಾರ್ಕ್ ಅಕ್ವೆಟಿಕ್ ಫೌಂಡೇಷನ್ ಹಾಗೂ ರೇ ಸೆಂಟರ್ ಬೆಂಗಳೂರಿನಲ್ಲಿ  ಸ್ಥಾಪಿಸಿರುವ ರೇ ಕೇಂದ್ರದಲ್ಲಿ  ಜಾಗತಿಕ ಮಟ್ಟದ ಈಜು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ  ಲಕ್ಕಸಂದ್ರ ರೇ ಕೇಂದ್ರದಲ್ಲಿ ಈ ಹೊಸ ಈಜು ಕೇಂದ್ರ ಕಾರ್ಯ ನಿರ್ವಹಿಸಲಿದೆ.

ಗ್ಲೆನ್ ಮಾರ್ಕ್ ಫಾರ್ಮಾ ಕಂಪೆನಿಯ ಸಿಎಸ್‌ಆರ್ ಯೋಜನೆಯಡಿ ಈ ಫೌಂಡೇಷನ್ ಸ್ಥಾಪನೆಗೊಂಡಿದೆ. ಹೊಸದಿಲ್ಲಿ, ಮುಂಬೈಯಲ್ಲಿ ಸ್ಥಾಪನೆಯಾದ ನಂತರ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದು ದೇಶದ ಮೂರನೇ ಈಜು ಕೇಂದ್ರವಾಗಿದೆ.  ರೇ ಕೇಂದ್ರ ಜೆಪಿ ನಗರದಲ್ಲಿ ಈಗಾಗಲೇ ಈಜು ಕಲಿಕಾ ಕೇಂದ್ರವನ್ನು ಸ್ಥಾಪಿಸಿದೆ.
ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಈಜು ತರಬೇತುದಾರ ಕಾರ್ಲಸ್ ಸುಬಿರಾನಾ ಜಿಎಎ್‌ನ ತಾಂತ್ರಿಕ ನಿರ್ದೇಶಕರಾಗಿರುತ್ತಾರೆ. ಎಎಸ್‌ಸಿಎ ಲೆವೆಲ್ 5 ಕೋಚ್ ಭೂಷಣ್ ಕುಮಾರ್ ಇಲ್ಲಿ ಪ್ರಧಾನ ಕೋಚ್ ಆಗಿರುತ್ತಾರೆ.
ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲಲು ಇಲ್ಲಿಯ ಈಜುಪಟುಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಜಿಎಎಫ್ ರೇ  ಅಕಾಡೆಮಿಯಲ್ಲಿ ಪ್ರಾಮಥಮಿಕ ಹಂತದ ಈಜಿನಿಂದ ಪದಕ ಗೆಲ್ಲುವ ಸ್ಪರ್ಧಾತ್ಮಕ ಈಜು ಕುರಿತು ತರಬೇತಿ ನೀಡಲಾಗುತ್ತದೆ. ಕೇಂದ್ರದಲ್ಲಿ ತರಬೇತಿ ಪಡೆಯುವ ಇಬ್ಬರು ಈಜುಪಟುಗಳಿಗೆ ಜಿಎಎಫ್  ಪ್ರಾಯೋಜಕತ್ವ ನೀಡಲಿದೆ.
ಕೇಂದ್ರದಲ್ಲಿ 50 ಮೀ. ಉದ್ದದ ಈಜುಕೊಳ ಹಾಗೂ 18 ಮೀ. ಉದ್ದದ ಅಭ್ಯಾಸದ ಕೊಳ ಅಲ್ಲದೆ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್ ಸೌಲಭ್ಯ  ಇರುತ್ತದೆ. ಇದೇ ಕೇಂದ್ರದಲ್ಲಿ ಬಿಸಿ ನೀರಿನ ಈಜುಕೊಳ  ಈ ವರ್ಷದ ಅಂತ್ಯದೊಳಗೆ ಸಜ್ಜುಗೊಳ್ಳಲಿದೆ. ಸಾರ್ವಜನಿಕರು ಹಾಗೂ ಕಾರ್ಪೋರೇಟ್ ವಲಯದವರಿಗೂ ವಿಶೇಷ ತರಬೇತಿ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕ ವಲಯದಿಂದ ಪಾಲ್ಗೊಳ್ಳುವವರು ಈಜುಕೊಳಕ್ಕೆ  ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಈಜಿನಲ್ಲಿ ತರಬೇತಿ ಪಡೆಯಲು ಬಯಸುವವರು www.glenmarkaquatic.org   ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಸೆಪ್ಟಂಬರ್ ೩ರಿಂದ ಸ್ಪ ರ್ಧಾತ್ಮಕ ಹಾಗೂ ಸಾರ್ವಜನಿಕ ವಿಭಾಗದ ತರಗತಿಗಳು ಆರಂಭಗೊಳ್ಳಲಿವೆ. ಹೆಚ್ಚಿನ ವಿವರಗಳಿಗೆ www.raycenter.in ವೆಬ್ ಸೈಟ್ ನೋಡಬಹುದು.
೧೯ರಂದು ಉದ್ಘಾಟನೆ
ಬೆಂಗಳೂರಿನ ವಿಲನ್ಸ್ ಗಾರ್ಡನ್‌ನ ಲಕ್ಕಸಂದ್ರದಲ್ಲಿರುವ ರೇ ಸೆಂಟರ್ ಉದ್ಘಾಟನೆಯು ಆಗಸ್ಟ್ 19ರಂದು ಭಾನುವಾರ 11 ಗಂಟೆಗೆ ನಡೆಯಲಿದೆ.  ಸ್ಥಳೀಯ ಕಾರ್ಪೋರೇಟರ್  ಡಿ. ಚಂದ್ರಪ್ಪ, ಚಿಕ್ಕಪೇಟೆ ಶಾಸಕ ಉದಯ ಬಿ. ಗರುಡಾಚಾರ್, ಬಿಟಿಎಂ ಲೇಔಟ್‌ನ ಶಾಸಕ ರಾಮಲಿಂಗ ರೆಡ್ಡಿ, ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ.ದೇವರಾಜ್ ಹಾಗೂ ಜಿಎಎಫ್  ತಾಂತ್ರಿಕ ನಿರ್ದೇಶಕ ಕಾರ್ಲಸ್ ಸುಬಿರಾನಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ವಿಳಾಸ
Ray center Willson Garden Swimming Pool
9th Main  Lakkasandra Extension
Wilson Garden, Bangalore 560030
Contact- +91 9820466255

Related Articles