ಸ್ಪೋರ್ಟ್ಸ್ ಮೇಲ್ ವರದಿ
ಶಾಟ್ ಪುಟ್ ನಲ್ಲಿ ತೇಜಿಂದರ್ ಪಾಲ್ ಸಿಂಗ್ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ೨೦.೭೫ ಮೀ. ದೂರಕ್ಕೆ ಗುಂಡನ್ನು ಎಸೆಯುವ ಮೂಲಕ ಸಿಂಗ್ ನೂತನ ದಾಖಾಲೆ ಬರೆದರು. ಮೊದಲ ಯತ್ನದಲ್ಲಿ ೧೯.೯೬ ಮೀ. ನಂತರ ೧೯.೯೬ ಮೀ. ಬಳಿಕ ೨೦.೦೦ ಮೀ. ಹಾಗೂ ಕೊನೆಯಲ್ಲಿ ೨೦.೭೫ ಮೀ ದೂರಕ್ಕೆ ಎಸೆದು ದಾಖಲೆಯೊಂದಿಗೆ ಚಿನ್ನ ಗೆದ್ದರು.
ಹೊಸಕೋಟೆಯ ಕೃಷಿಕ ಬಾಲಸುಬ್ರಹ್ಮಣ್ಯ ಅವರ ಮಗ ಚೆತನ್ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಹೈಜಂಪ್ನಲ್ಲಿ ಫೈನಲ್ ತಲುಪಿ ಸಾಧನೆ ಮಾಡಿದ್ದಾರೆ. ಎರಡನೇ ಪ್ರಯತ್ನದಲ್ಲಿ ೨.೧೫ ಮೀ. ಎತ್ತರಕ್ಕೆ ಜಿಗಿಯುವುೂಲಕ ಬಹಳ ವರ್ಷಗಳ ನಂತರ ಭಾರತದ ಸ್ಪರ್ಧಿಯೊಬ್ಬರು ಹೈಜಂಪ್ನಲ್ಲಿ ಫೈನಲ್ಗೆ ತಲುಪಿದಂತಾಗಿದೆ.
ವೈಯಕ್ತಿಕ ಉತ್ತಮ ಹಾಗೂ ಋತುವಿನ ಉತ್ತಮ ಸಾಧನೆಯನ್ನು ತೋರಿದರೆ ಕನಿಷ್ಠ ಕಂಚಿನ ಪದಕ ಗೆಲ್ಲಬಹುದು. ೨.೨೫ ಮೀ. ಚೇತನ್ ಅವರ ಋತುವಿನ ಉತ್ತಮ ಜಿಗಿತವಾಗಿದೆ. ಜಕಾರ್ತದಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಚೇತನ್, ‘೨.೧೬ ಮೀ. ಫೈನಲ್ ಅರ್ಹತೆಯ ಗುರಿಯಾಗಿತ್ತು. ನಂತರ ೨.೧೫ ಮೀ. ಎಂದು ತೀರ್ಮಾನಿಸಲಾಯಿತು. ಎರಡು ಗುಂಪುಗಳಲ್ಲಿ ಸುಮಾರು ೧೩ ಸ್ಪರ್ಧಿಗಳು ಈಗ ಫೈನಲ್ ತಲುಪಿದ್ದಾರೆ. ಅವರಲ್ಲಿ ಉತ್ತಮ ನಾಲ್ಕರಲ್ಲಿ ನಾನಿದ್ದೇನೆ. ೨.೨೫ ಮೀ. ಜಿಗಿದರೆ ಪದಕ ಖಚಿತ ಎನ್ನಬಹುದು. ಆ ಪ್ರಯತ್ನವನ್ನು ಮಾಡುವೆ. ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂಬುದು ನನ್ನ ಗುರಿ,‘ ಎಂದರು.