Friday, November 22, 2024

ಓಟದಲ್ಲಿ ಮಂಜೀತ್‌ಗೆ ಚಿನ್ನ, ಜಾನ್ಸನ್‌ಗೆ ಬೆಳ್ಳಿ

ಏಜೆನ್ಸೀಸ್ ಜಕಾರ್ತ

ಏಷ್ಯನ್ ಗೇಮ್ಸ್‌ನ ೧೦ನೇ ದಿನದಲ್ಲಿ ಭಾರತದ ಸ್ಪರ್ಧಿಗಳು ತೃಪ್ತಿಕರ ಪ್ರದರ್ಶನ ನೀಡಿದ್ದಾರೆ. ೮೦೦ ಮೀ. ಓಟದಲ್ಲಿ ಮಂಜೀತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಎರಡನೇ ಸ್ಥಾನ ಗಳಿಸಿ  ಬೆಳ್ಳಿ ಗೆದ್ದಿರುವುದ ೧೦ನೇ ದಿನದ ಸಂಭ್ರಮ.

ಮಂಜೀತ್ ೧ ನಿಮಿಷ ೪೬.೧೫ ಸೆಕೆಂಡುಗಳಲ್ಲಿ  ಗುರಿ ತಲುಪಿದರೆ, ಜಿನ್ಸನ್ ಜಾನ್ಸನ್ ೧ ನಿಮಿಷ ೪೬.೩೫ ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನಿಯಾದರು.
೧೦ನೇ ದಿನದ ಕೊನೆಯಲ್ಲಿ ಭಾರತ  ೯ ಚಿನ್ನ, ೧೭ ಬೆಳ್ಳಿ ಹಾಗೂ ೨೨ ಕಂಚಿನ ಪದಕ ಸಹಿತ ಒಟ್ಟು ೪೯ ಪದಕಗಳನ್ನು ಗೆದ್ದುಕೊಂಡಿದೆ.  ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಳವಡಿಸಲಾದ ಮಿಶ್ರ ರಿಲೇಯಲ್ಲಿ ಭಾರತ ಬೆಳ್ಳಿ ಪದಕ ಗೆದ್ದು ಪ್ರಭುತ್ವ ಸಾಧಿಸಿದೆ. ಮೊಹಮ್ಮದ್ ಅನಾಸ್, ಹಿಮಾ ದಾಸ್, ಅರೋಕಿಯಾ ಮತ್ತು ಕರ್ನಾಟಕದ ಪೂವಮ್ಮ  ಅವರು ಮಿಶ್ರ ರಿಲೇಯಲ್ಲಿ ಸೇರಿದ್ದಾರೆ.
ವನಿತೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ  ಪಿವಿ ಸಿಂ‘ೂ ೧೩-೨೧, ೧೬-೨೧ ಅಂತರದಲ್ಲಿ  ಸೋಲನಭವಿಸುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು.  ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಭಾರತ ಮಹಿಳಾ ಹಾಗೂ ಪುರುಷರ ತಂಡ  ಫೈನಲ್‌ನಲ್ಲಿ ಸೋಲನುಭವಿಸುವುದರೊಂದಿಗೆ ಭಾರತಕ್ಕೆ ಮತ್ತೆರಡು ಕಂಚಿನ ಪದಕ ದಕ್ಕಿತು. ಕುರಾಶ್‌ನಲ್ಲಿ ಭಾರತಕ್ಕೊಂದು ಅಚ್ಚರಿಯ ಪದಕ. ಪಿಂಕಿ ಬಲ್ಹರಾ ಕುರಾಶ್‌ನಲ್ಲಿ ಕಂಚಿನ ಪದಕ ಗೆದ್ದು ಕೀರ್ತಿ ತಂದರು,
ಟೇಬಲ್ ಟೆನಿಸ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಸೋತರೂ ಭಾರತ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ, ಹಾಕಿಯಲ್ಲಿ ಪುರುಷ ಹಾಗೂ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಪುರುಷರ ತಂಡ ೨೦-೦ ಅಂತರದಲ್ಲಿ ಶ್ರೀಲಂಕಾ ವಿರುದ್ಧ ಜಯ ಗಳಿಸಿತು.

Related Articles