Wednesday, January 15, 2025

ಸೆಪ್ಟಂಬರ್ 2 ರಂದು ಕುಸ್ತಿ ಆಯ್ಕೆ ಟ್ರಯಲ್ಸ್

ಸ್ಪೋರ್ಟ್ಸ್ ಮೇಲ್ ವರದಿ 

ರಾಜಸ್ಥಾನದಲ್ಲಿ  ಸೆ. 27 ರಿಂದ 30 ರವರೆಗೆ ನಡೆಯಲಿರುವ ಅಂಡರ್ 23 ಫ್ರೀ ಸ್ಟೈಲ್ ಗ್ರೀಕೋ ರೋಮನ್ ಸ್ಟೈಲ್  ಮಹಿಳಾ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆಯನ್ನು  ರಾಜ್ಯ ಕುಸ್ತಿ ಸಂಸ್ಥೆಯು   ನಡೆಸಲಿದೆ.

ದಾವಣೆಗೆರೆ ಕ್ರೀಡಾ ಹಾಸ್ಟೆಲ್‌ನಲ್ಲಿ ಸೆ. 2ರಂದು  ಬೆಳಿಗ್ಗೆ 8-30ಕ್ಕೆ ಆಯ್ಕೆ ಟ್ರಯಲ್ಸ್ ನಡೆಯಲಿದೆ.  ಫ್ರೀ ಸ್ಟೈಲ್  ವಿಭಾಗದಲ್ಲಿ 57, 61, 65, 70, 74, 79, 86, 92 ಹಾಗೂ 125೫ ಕೆಜಿಗಾಗಿ ನಡೆಯಲಿದೆ. ಗ್ರೀಕೋ ರೋಮನ್ ಶೈಲಿಯಲ್ಲಿ  55, 60, 63, 67, 72, 77, 82, 87, 97, 130 ಕೆಜಿ ವಿಭಾಗದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಶಿವಾನಂದ 9945252240 ಅಥವಾ ವಿನೋದ್ 8971388143, ಶರಣ ಗೌಡ 9632052765 ಅಥವಾ ಎಂ.ಆರ್. ಶರ್ಮಾ 6360242462 ಅವರನ್ನು ಸಂಪರ್ಕಿಸಬಹುದು.

Related Articles