ಸ್ಪೋರ್ಟ್ಸ್ ಮೇಲ್ ವರದಿ
ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ದಕ್ಷಿಣ ಆಫ್ರಿಕಾದ ಕೋಚ್ ಗ್ಯಾರಿ ಕರ್ಸ್ಟನ್ ಅವರು ಮುಂದಿನ ಋತುವಿನ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಹಾಗೂ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಎಂಟು ವರ್ಷಗಳಿಂದ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡೇನಿಯಲ್ ವೆಟೋರಿ ಈ ಹುದ್ದೆಯಲ್ಲಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಇದುವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಏಕದಿನ, ಟೆಸ್ಟ್ ಹಾಗೂ ಪ್ರಥಮದರ್ಜೆ ಕ್ರಿಕೆಟ್ ಸೇರಿ ಸುಮಾರು ೭೦೦ ಪಂದ್ಯಗಳನ್ನಾಡಿರು ಗ್ಯಾರಿ ತಂಡದ ಅದೃಷ್ಟವನ್ನು ಬದಲಾಯಿಸುವ ಸಾಧ್ಯತೆ ಇದೆ ಎಂಬುದು ಆರ್‌ಸಿಬಿಯ ಮುಖ್ಯಸ್ಥ ಸಂಜೀವ್ ಚುರಿವಾಲಾ ಅವರ ನಿಲುವು.
’ಕಳೆದ ಎಂಟು ವರ್ಷಗಳಿಂದ ಡೇನಿಯಲ್ ವೆಟೋರಿ ತಂಡಕ್ಕೆ ವಿವಿಧ ಹಂತದಲ್ಲಿ ತರಬೇತಿ ನೀಡಿರುತ್ತಾರೆ. ಅವರ ಭವಿಷ್ಯಕ್ಕೆ ನಾವು ಶಭ ಹಾರೈಸುತ್ತೇವೆ. ಗ್ಯಾರಿ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ಹೆಮ್ಮೆ ಅನಿಸುತ್ತಿದೆ. ಕಳೆದ ಋತುವಿನಲ್ಲಿ ಗ್ಯಾರಿ ಸಲಹೆಗಾರರಾಗಿ ಯುವ ಆಟಗಾರರಲ್ಲಿ ಸ್ಫೂರ್ತಿ ತುಂಬಿದ್ದಾರೆ. ಈ ಬಾರಿ ತಂಡ ಹೊಸ ಉತ್ಸಾಹದೊಂದಿಗೆ ಋತುವಿಗೆ ಹೆಜ್ಜೆ ಇಡಲಿದೆ,’ ಎಂದು ತಂಡದ ಆರ್‌ಸಿಬಿಯ ಅಧ್ಯಕ್ಷ ಸಂಜೀವ್ ಚುರಿವಾಲಾ ಹೇಳಿದ್ದಾರೆ.