Friday, November 22, 2024

ಆರಂಭದಲ್ಲೇ ದಾಖಲೆ ಬರೆದ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ ಮೂಡಬಿದಿರೆ

ಇಲ್ಲಿನ ಸ್ವರಾಜ್ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಮೂಡಬಿದಿರೆಯ ನಾಲ್ವರು ಸ್ಪರ್ಧಿಗಳು ಆರಂಭದ ದಿದನ ಪೂರ್ವಾನ್ಹ ವೇ  ನಾಲ್ಕು ದಾಖಲೆಗಳನ್ನು ಬರೆದರು.

20 ವರ್ಷದೊಳಗಿನ ಬಾಲಕರ 800 ಮೀ. ಓಟದಲ್ಲಿ ಆಳ್ವಾಸ್ ಕ್ರೀಡಾ ಸಂಸ್ಥೆಯ ಶಶಿಧರ್, 19 ವರ್ಷದೊಳಗಿನವರ ಬಾಲಕರ ಡಿಸ್ಕಸ್ ಎಸೆತದಲ್ಲಿ ನಾಗೇಂದ್ರ, ಮುಕ್ತ ವಿಭಾಗದ ಟ್ರಿಪಲ್ ಜಂಪನ್‌ನಲ್ಲಿ ಆಳ್ವಾಸ್‌ನ ಸಂದೇಶ್ ಶೆಟ್ಟಿ ಹಾಗೂ 18 ವರ್ಷದೊಳಗಿನವರ ಬಾಲಕಿಯರ ಹೈಜಂಪ್‌ನಲ್ಲಿ ಆಳ್ವಾಸ್‌ನ ಎಸ್‌ಬಿ ಸುಪ್ರಿಯಾ ನೂತನ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಒಂದಾದ ಡಿವೈಎಸ್‌ಎಸ್

ರಾಜ್ಯ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ಪದಕ ಗೆದ್ದ ಕ್ರೀಡಾಪಟುಗಳಿಗೆ ಸೋಮವಾರ ಅಚ್ಚರಿ ಕಾದಿತ್ತು. ತಮಗೆ ನೀಡಿದ ಪ್ರಶಸ್ತಿ ಪತ್ರದಲ್ಲಿ ತಾವು ಯಾವ ಜಿಲ್ಲೆಯ ಪ್ರತಿನಿಧಿಸುತ್ತಿದ್ದೇವೋ ಆ ಜಿಲ್ಲೆಯ ಹೆಸರೇ ಇಲ್ಲದಂತಾಗಿ ಡಿವೈಎಸ್‌ಎಸ್ ಬೆಂಗಳೂರು ಹೆಸರು ದಾಖಲಾಗಿರುವುದು ಅಚ್ಚರಿಯನ್ನುಂಟು ಮಾಡಿತ್ತು. ಕೇಂದ್ರೀಕೃತ ಫಲಿತಾಂಶಕ್ಕಾಗಿ ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆ ಈ ರೀತಿಯ ಯೋಜನೆ ಹಾಕಿಕೊಂಡಿದೆ. ಇದು ಒಂದು ರೀತಿಯಲ್ಲಿ ಉತ್ತಮವಾಗಿದೆ. ಏಕೆಂದರೆ ಜಿಲ್ಲಾ ಮಟ್ಟದಲ್ಲಿದ್ದ ಕ್ರೀಡಾಪಟುಗಳು ರಾಜ್ಯಮಟ್ಟದ ಸಾಧನೆ ಮಾಡಿರುವುದು ನೇರವಾಗಿ ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆಯ ಗಮನಕ್ಕೂ ಬರುತ್ತದೆ. ಪದಕಗಳ ಒಟ್ಟು ಸಂಖ್ಯೆಯನ್ನು ಆಧರಿಸಿ ಸಮಗ್ರ ಚಾಂಪಿಯನ್ ಪಟ್ಟ ನೀಡುವಾಗಲೂ ಇದು ನೆರವಾಗುತ್ತದೆ.
ದಿನದ ಪ್ರಮುಖ ಲಿತಾಂಶಗಳು

ಬಾಲಕಿಯರ ಶಾಟ್‌ಪುಟ್ 

1.ಮೈಸೂರಿನ ಮೇಘನಾ ದೇವಾಂಗ್, 2. ಆಳ್ವಾಸ್‌ನ ಚಿನ್ನವ್ವ ಎಸ್. ಗುಲ್ಬಾಲ್, 3. ಉಡುಪಿಯ ಪ್ರತೀಕ್ಷಾ.
800 ಮೀ. ಓಟ
1.ಆದಾಯ ತೆರಿಗೆ ಸ್ಪೋರ್ಟ್ಸ್ ಕ್ಲಬ್‌ನ ಎಂ.ಗೋಮತಿ 2. ಆಳ್ವಾಸ್‌ನ ದೀಕ್ಷಾ ಬಿ. 3, ಹಾಸನ ಜಿಲ್ಲೆಯ ಸಹನಾ ಎಚ್.ಎಂ. 
ಹೈಜಂಪ್
1.ಆಳ್ವಾಸ್‌ನ ಎಸ್. ಬಿ ಸುಪ್ರಿಯಾ, 2. ಬೆಂಗಳೂರು ಡಿವೈಇಎಸ್‌ನ ಕವನಾ ಎಚ್.ಜಿ. 3. ಗೋಣಿಕೊಪ್ಪದ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್‌ನನ ಲೋಚನಾ ಬೋಪಣ್ಣ.
800 ಮೀ. ಓಟ 
1.ಡಿವೈಇಎಸ್ ಬೆಂಗಳೂರಿನ ಅರ್ಪಿತಾ ಇ.ಬಿ. 2. ಡಿವೈಇಎಸ್‌ನ ಶೈಲಾ ಸಿ.ಎಂ. 3. ಡಿವೈಇಎಸ್‌ನ ನಾಗಶ್ರೀ ಎಚ್.ಎಂ. 
10 ಕಿ.ಮೀ. ನಡಿಗೆ
1.ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ  ಅರ್ಪಿತಾ ಎಚ್.ಎಸ್. 2. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರೇಶ್ಮಾ ಪಿ.ವಿ. 3. ಶಿವಮೊಗ್ಗ ಅಥ್ಲೆಟಿಕ್ಸ್ ಸಂಸ್ಥೆಯ ಧನಲಕ್ಷ್ಮೀ. 
800 ಮೀ. ಓಟ
1.ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ದೀಪಶ್ರೀ, 2. ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಪ್ರಿಯಾಂಕ ಸಿ. 3. ನಿಟ್ಟೆ ಸ್ಪೋರ್ಟ್ಸ್ ಕ್ಲಬ್‌ನ ಪ್ರತೀಕ್ಷಾ.
100 ಮೀ.
1.ಡಿವೈಇಎಸ್ ಬೆಂಗಳೂರಿನ ಧಾನೇಶ್ವರಿ ಎ.ಟಿ., 2. ಬೆಂಗಳೂರು ಭಾರತೀಯ ಕ್ರೀಡಾ ಪ್ರಾಧಿಕಾರದ ಕಾವೇರಿ ಎ. ಪಾಟೀಲ್, 3. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ದೇಚಮ್ಮ ಸಿ.ಎಸ್.
ಬಾಲಕರ 800 ಮೀ. ಓಟ
1.ಇಂಡಿಯನ್ ಅಥ್ಲೆಟಿಕ್ಸ್ ಸಂಸ್ಥೆಯ ವಿನೋದ್ ಕುಮಾರ್, 2. ಬೆಳಗಾವಿ ಅಥ್ಲೆಟಿಕ್ಸ್ ಸಂಸ್ಥೆಯ ತುಷಾರ್ ಭೆಕಾನೆ, 3. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ರಾಜ್ ಎಸ್.ಡಿ.
ಡಿಸ್ಕಸ್ ಥ್ರೋ
1.ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ನಾಗೇಂದ್ರ ಅಂಜಪ್ಪ ನಾಯಕ್, 2. ಡಿವೈಇಎಸ್ ಬೆಂಗಳೂರಿನ ಸುನಿತ್ ಕುಮಾರ್ ಎಸ್. 3. ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಮೋಹಿತ್ ಎನ್. ರಾಜ್.
800 ಮೀ.
1.ಆಳ್ವಾಸ್‌ನ ಮಿಲನ್ ಎಂ.ಸಿ., 2. ಡಿವೈಇಎಸ್‌ನ ಯಶ್ವಂತ್ ಬಿಜಿ, 3. ಭಾರತೀಯ ಕ್ರೀಡಾಪ್ರಾದಿಕಾರ ಬೆಂಗಳೂರಿನ ಶ್ರೇಯಸ್ ಜಿ.
ಟ್ರಿಪಲ್‌ಜಂಪ್
1.ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಡೌಗ್ಲಾಸ್, 2. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ರವಿ ಮಠ್, 3. ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಸನ್ನಿ ಅಂಥೋನಿ ಡಿ ಸಿಲ್ವಾ.
10000 ಮೀ. ಓಟ
1.ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಜೆನಿತ್ ಸಿಪಿ. 2. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಸತ್ಯ ನಾರಾಯಣ, 3. ಆಳ್ವಾಸ್ ಸ್ಪೋರ್ಟ್ಸ್‌ನ ರಿತಿಕ್ ಭಾರಧ್ವಾಜ್ . 
100 ಮೀ. ಓಟ
1.ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರಿನ ಕುಶಾಲ್ ಎಂಬೋರೆ, 2. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಅಮನ್ ಅರುಣ್,  3. ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಸ್ವಸ್ತಿಕ್.

Related Articles