Friday, November 22, 2024

ಯುಎಸ್ ಓಪನ್ ಫೈನಲ್ ಸೆರೆನಾ ಎದುರಾಳಿ ಒಸಾಕಾ

ಏಜೆನ್ಸೀಸ್ ನ್ಯೂಯಾರ್ಕ್

19ನೇ ಶ್ರೇಯಾಂಕಿತೆ ಲಾಟ್ವಿಯಾದ ಅನಸ್ತಾಸಿಜ ಸೆವತ್ಸೋವ ವಿರುದ್ಧ  6-3, 6-0 ಸೆಟ್‌ಗಳಿಂದ ಜಯ ಗಳಿಸಿದ  ಸೆರೆನಾ ವಿವಿಯಮ್ಸ್ ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದ್ದಾರೆ.

ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್  ಫೈನಲ್ ತಲುಪಿರುವ ಜಪಾನಿನ ನವೊಮಿ ಒಸಾಕ ಅವರನ್ನು ಎದುರಿಸಲಿದ್ದಾರೆ. ಸೆರೆನಾ ವಿವಿಯಮ್ಸ್ ಗೆ ಇದು 9ನೇ ಯುಎಸ್ ಓಪನ್ ಫೈನಲ್, 31ನೇ ಗ್ರ್ಯಾನ್ ಸ್ಲಾಮ್ ಟೂರ್ನಿ ಫೈನಲ್. ಒಂದು ವೇಳೆ ಜಯ ಗಳಿಸಿದರೆ ವಿಲಿಯಮ್ಸ್ ಏಳನೇ ಯುಎಸ್ ಓಪನ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೆ ೨೪ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದು ಟೆನಿಸ್ ಇತಿಹಾಸದಲ್ಲೇ ಅತಿ ಹೆಚ್ಚು ಪದಕಗಳನ್ನು ಗೆದ್ದ ಮಾರ್ಗರೆಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ  ವಿಲಿಯಮ್ಸ್  20ನೇ ಶ್ರೇಯಾಂಕಿತೆ 20 ವರ್ಷದ ನವೊಮಿ ಒಸಾಕ ವಿರುದ್ಧ ಸೆಣಸಲಿದ್ದಾರೆ. ಒಸಾಕ ಗ್ರ್ಯಾನ್ ಸ್ಲಾಮ್  ಫೈನಲ್ ತಲುಪಿದ ಜಪಾನಿನ ಮೊದಲ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕಿಗೆ  ಪಾತ್ರರಾಗಿದ್ದಾರೆ. ಕಳೆದ  ಬಾರಿಯ ರನ್ನರ್ ಅಪ್ ಮೆಡಿಸನ್ ಕಿಯ್ಸ್ ವಿರುದ್ಧ  6-2, 6-4 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರರು.  ಸೆರೆನಾ ವಿಲಿಯಮ್ಸ್ ವಿರುದ್ಧ ಆಡಲು ಉತ್ಸುಕಳಾಗಿದ್ದೇನೆ, ಈ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಪಂದ್ಯದ ನಂತರ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಒಸಾಕ ನುಡಿದರು.  ವಿವಿಯಮ್ಸ್ 2015 ಹಾಗೂ 2016ರ ಯುಎಸ್ ಓಪನ್‌ನ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ್ದರು.
ಕಳೆದ ವರ್ಷ ಮಗಳು ಒಲಿಂಪಿಯಾ ಜನಿಸಿದ ಕಾರಣ ಯುಎಸ್ ಓಪನ್‌ನಿಂದ ವಂಚಿತರಾಗಿದ್ದರು. ಇನ್ನು ಕೆಲವೇ ತಿಂಗಳಲ್ಲಿ 37ನೇ ವಸಂತಕ್ಕೆ ಕಾಲಿಡಲಿರುವ ಸೆರೆನಾ ವಿಲಿಯಮ್ಸ್  ಗ್ರ್ಯಾನ್ ಸ್ಲಾಮ್ ಗೆದ್ದು ಅತ್ಯಂತ ಹಿರಿಯ ಆಟಗಾರ್ತಿ ಎನಿಸಲಿದ್ದಾರೆ. ಪಂದ್ಯದ ಲಿತಾಂಶ ಏನಾಗುತ್ತದೆ ಎಂಬುದು ಮುಖ್ಯವಲ್ಲ, ಹೆರಿಗೆಯ ನಂತರ ಮತ್ತೆ ಆಡುತ್ತಿದ್ದೇನೆ ಎಂಬುದೇ ಮುಖ್ಯ ಎಂದು ಸೆರೆನಾ ಪಂದ್ಯದ ನಂತರ ಹೇಳಿದ್ದಾರೆ.  28 ವಯಸ್ಸಿನ ಸೆವಾತ್ಸೋವ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿದರು. ಆರಂಭ ದಲ್ಲೇ 2-0 ಅಂತರದಲ್ಲಿ ಮುನ್ನಡೆ ಕಂಡು ಆತ್ಮವಿಶ್ವಾಸ ತೋರಿಸಿದರು.  ಆದರೆ ನಂತರ ಆಟದ ಗತಿಯೇ ಬದಲಾಗಿ ಸೆರೆನಾ ಪ್ತ್ವಭು ಸಾಧಿಸಿ ಸುಲಭವಾಗಿ ಗೆದ್ದರು.

Related Articles