Saturday, December 21, 2024

ವಾಲಿಬಾಲ್: ಸುರಾನಾ ಕಾಲೇಜಿಗೆ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಅಗ್ರಗಾಮಿ ಪದವಿಪೂರ್ವ ಕಾಲೇಜು ತಂಡವನ್ನು ಫೈನಲ್ ಪಂದ್ಯದಲ್ಲಿ ಮಣಿಸಿದ ಸುರಾನಾ ಕಾಲೇಜು ತಂಡ  ಅಂತರ್ ಕಾಲೇಜು ಪದವಿ ಪೂರ್ವ ವಾಲಿಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ 21-25, 25-23, 25-17 ಅಂತರದಲ್ಲಿ ಜಯ ಗಳಿಸಿದ ಸುರಾನಾ ಕಾಲೇಜು ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸುರಾನಾ ಕಾಲೇಜು ತಂಡ  ಆದಿತ್ಯ ಪಿಯು ಕಾಲೇಜು ತಂಡದ ವಿರುದ್ಧ 23-25, 25-21, 15-13 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಸುರಾನಾ ತಂಡ ಸಿಂಧಿ ಪಿಯು ಕಾಲೇಜು ವಿರುದ್ಧ  15-25, 25-22, 15-12 ಅಂತರದಲ್ಲಿ ಜಯ ಗಳಿಸಿತ್ತು.

Related Articles