Friday, November 22, 2024

ಮಂಗಳೂರಿನ ಸ್ಟಾರ್ ಲಿಫ್ಟರ್ ಇಸ್ರಾರ್

ಸೋಮಶೇಖರ್ ಪಡುಕರೆ ಬೆಂಗಳೂರು

ಪವರ್‌ಲಿಫ್ಟಿಂಗ್‌ನಲ್ಲಿ ಯಶಸ್ಸು, ವೇಟ್‌ಲಿಫ್ಟಿಂಗ್‌ನಲ್ಲೂ ಎತ್ತಿದ ಕೈ. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಇಸ್ರಾರ್ ಪಾಶಾ ಗುರಿ ಇಟ್ಟಿರುವುದು 2024ರ ಒಲಿಂಪಿಕ್ಸ್ ಕಡೆಗೆ.

ಇತ್ತೀಚಿಗೆ ದುಬೈಯಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಇಸ್ರಾರ್  ಪಾಶಾ , ಈಗ ವೇಟ್‌ಲಿಫ್ಟಿಂಗ್‌ನಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವೇಟ್‌ಲಿಫ್ಟಿಂಗ್‌ನಲ್ಲಿ  ಇಸ್ರಾರ್ ಸೇಂಟ್ ಅಲೋಶಿಯಸ್ ಕಾಲೇಜನ್ನು ಪ್ರತಿನಿಧಿಸಲಿದ್ದಾರೆ.
ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಜೂನಿಯರ್ ವಿಭಾಗದಲ್ಲಿ  ಚಿನ್ನದ ಪದಕ ಗೆಲ್ಲುವ ಮೂಲಕ ಇಸ್ರಾನ್ ತಾನೊಬ್ಬ ಭವಿಷ್ಯದ ಉತ್ತಮ ಲ್ಟಿರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಸ್ರಾರ್ ಯಶಸ್ಸಿನಲ್ಲಿ ರಾಜ್ಯ ಪವರ್‌ಲಿಫ್ಟಿಂಗ್ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ ಹಾಗೂ ಮಂಗಳೂರಿನ ಖ್ಯಾತ ಫಿಟ್ನೆಸ್  ಹಾಗೂ ವೇಟ್‌ಲಿಫ್ಟಿಂಗ್ ಗುರು ಪ್ರಚೇತ್ ಕುಮಾರ್ ಕೋದಂಡರಾಮ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಕದ್ರಿಯಲ್ಲಿರುವ ಪ್ರಚೇತ್ ಕುಮಾರ್ ಅವರ ಐರನ್ ಡೆನ್‌ನಲ್ಲಿ ಪಳಗಿರುವ ಇಸ್ರಾರ್ ಇದುವರೆಗೂ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ 8 ಪದಕಗಳನ್ನು ಗೆದ್ದಿರುತ್ತಾರೆ.

2024ರ ಒಲಿಂಪಿಕ್ಸ್ ಗುರಿ!

19 ವರ್ಷ ಪ್ರಾಯದ ಇಸ್ರಾರ್ ಈಗ ಪವರ್‌ಲಿಫ್ಟಿಂಗ್‌ನಿಂದ ವೇಟ್‌ಲಿಫ್ಟಿಂಗ್ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ದುಬೈಯಲ್ಲಿ ನಡೆದ ಏಷ್ಯನ್ ಬೆಂಚ್‌ಬ್ರೆಸ್ ಚಾಂಪಿಯನ್‌ಷಿಪ್ ಮುಗಿಯುತ್ತಿದ್ದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ನಡೆಯುವ ವೇಟ್‌ಲಿಫ್ಟಿಂಗ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಅದಕ್ಕೆ ಸಿದ್ಧತೆ ನಡೆಸಿದ್ದಾರೆ. 90 ಕೆಜಿ ಭಾರವೆತ್ತುವ ಮೂಲಕ ತಾನೊಬ್ಬ ಭವಿಷ್ಯದ ವೇಟ್ ಲಿಫ್ಟರ್  ಕೂಡ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ.  2024ರಲ್ಲಿ  ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಮುಂದಿನ ಗುರಿ ಎಂದು ಅಸ್ರಾರ್ ಹೇಳಿದ್ದಾರೆ.
‘ಕ್ರೀಡೆ ಮೂಲಕ ಬದುಕನ್ನು ರೂಪಿಸಿಕೊಳ್ಳುವುದು ಗುರಿ. ಅದಕ್ಕಾಗಿ ಕಠಿಣ ಶ್ರಮ ವಹಿಸುತ್ತಿದ್ದೇನೆ. ವಿಶ್ವಚಾಂಪಿಯನ್ ಮೀರಾಬಾಯಿ ಚಾನು ಅವರ ಕೋಚ್ ಜತೆ ಮಾತುಕತೆ  ನಡೆಸಿದ್ದೇನೆ. ನನ್ನ ಗುರಿ 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದು. ಅದಕ್ಕಾಗಿ ಎಲ್ಲ ರೀತಿಯ ಶ್ರಮ ವಹಿಸುವೆ, ಭಾರವೆತ್ತುವುದರಲ್ಲೇ ಬದುಕನ್ನು ಕಂಡುಕೊಳ್ಳುವೆ,‘ ಇಸ್ರಾರ್ ನುಡಿದರು.
ತನ್ನ ಯಶಸ್ಸಿನಲ್ಲಿ ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ್ ಮಾಟೀಸ್, ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್ ಹಾಗೂ ಡೊನರ್ಟ್ ಹಾಗೂ ಎಲ್ಲ ಶಿಕ್ಷಕ ವೃಂದ ನೆರವು ನೀಡಿದೆ ಎಂದು ಹೇಳಿದ್ದಾರೆ. ಕಾಮನ್‌ವೆಲ್ತ್ ಚಾಂಪಿಯನ್   ಸದ್ಗುರ ಜಿಮ್‌ನ ಪ್ರದೀಪ್ ಕುಮಾರ್ ಕೂಡ ಇಸ್ರಾರ್ ಅವರ ಯಶಸ್ಸಿನ ಮೇಲೆ ಪರಿಣಾಮ ಬೀರಿದ್ದಾರೆ.

ಹೆತ್ತವರ ಪ್ರೋತ್ಸಾಹ 

ಇಸ್ರಾರ್ ಪಾಶಾ ಅವರ ತಂದೆ ಅಬ್ದುಲ್ಲಾ ಹಾಗೂ ತಾಯಿ ಖತೀಜಾ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಕಷ್ಟದ ನಡುವೆಯೂ ತಮ್ಮ ಮಗ ಕ್ರೀಡೆಯಲ್ಲಿ ಯಶಸ್ಸು ಕಾಣಲಿ ಎಂಬುದು ಅವರ ಆಶಯ. ಇಸ್ರಾರ್ ಅವರ ಸಹೋದರ ಇರ್ಶಾದ್ ಉತ್ತಮ ಡಾನ್ಸರ್.

Related Articles