ಏಜೆನ್ಸಿಸ್ ಹೈದರಾಬಾದ್
ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ಭಾರತಕ್ಕೆ ಸ್ವಲ್ಪಮಟ್ಟಿನ ಸವಾಲು ನೀಡಲು ಯತ್ನಿಸಿತು. ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311 ರನ್ ಗೆ ಎಲ್ಲ ಔಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಸುಸ್ಥಿತಿಯಲ್ಲಿದೆ.
ಕೆ ಎಲ್ ರಾಹುಲ್ ಟೆಸ್ಟ್ ನಲ್ಲಿ ಮತ್ತೆ ವಿಫಲರಾಗಿರುವುದು ಆಯ್ಕೆ ಸಮಿತಿಗೆ ಯೋಚಿಸುವಂತೆ ಮಾಡಿದೆ. 25 ಎಸೆತಗಳ್ಳನ್ನೆದುರಿಸಿ ಕೇವಲ 4 ರನ್ ಗಳಿಸಿದ ರಾಹುಲ್ ಪೆವಿಲಿಯನ್ ಸೇರಿದರು.
ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದ ಪೃಥ್ವಿ ಶಾ ಮತ್ತೊಮ್ಮೆ ವಿಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ 70 ರನ್ ಕೊಡುಗೆ ನೀಡಿದರು. 53 ಎಸೆತಗಳನ್ನೆದುರಿಸಿದ ಶಾ ಅವರ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು. ಚೇತೇಶ್ವರ ಪೂಜಾರ ಕೇವಲ 10 ರನ್ ಗೆ ತೃಪ್ತಿಪಟ್ಟರು. ಮೊದಲ ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದ ನಾಯಕ ವಿರಾಟ್ ಕೊಹ್ಲಿ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದಾಗ ಭಾರತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಟೆಸ್ಟ್ ನಲ್ಲಿ 92 ರನ್ ಗಳಿಸಿ ಶತಕದಿಂದ ವಂಚಿತರಾಗಿದ್ದ ರಿಷಭ್ ಪಂತ್ 75* ಹಾಗೂ ಅಜಿಂಕ್ಯ ರಹಾನೆ 45* ಕುಸಿದ ತಂಡಕ್ಕೆ ನೆರವಾದರು.ವಿಂಡೀಸ್ ಪರ ಹೋಲ್ಡರ್ 45 ರನ್ ಗೆ 2 ವಿಕೆಟ್ ಗಳಿಸಿದರು.