Friday, December 27, 2024

ಅಂಧರ ಕ್ರಿಕೆಟ್: ಭಾರತಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಶ್ರೀಲಂಕಾ ತಂಡದ ಸವಾಲನ್ನು ದಿಟ್ಟವಾಗಿ ಎದುರಿಸಿದ ಭಾರತ ತಂಡ ಅಂಧರ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ  39 ರನ್‌ಗಳ ಜಯ ಗಳಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 190 ರನ್‌ಗಳ ಬೃಹತ್ ಮೊತ್ತ ಗಳಿಸಿತು. ವೆಂಕಟೇಶ್ವರ ಅವರರು ಅರ್ಧ  ಶತಕ ಗಳಿಸಿ ತಂಡದ ಮೊತ್ತಕ್ಕೆ ನೆರವಾದರು.
ಬೃಹತ್ ಮೊತ್ತವನ್ನು ಬೆಂಬತ್ತಿದ ಶ್ರೀಲಂಕಾ  ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತ ಸೋಲಿನ ಅಂಚಿಗೆ ಸಿಲುಕಿತು. ಅಜಿತ್ ಸಿಲ್ವಾ ಅರ್ಧ  ಶತಕ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. 20 ಓವರ್‌ಗಳಲ್ಲಿ ಕೇವಲ 151 ರನ್ ಗಳಿಸಿ ಸೋಲೊಪ್ಪಿಕೊಂಡಿತು.  ಭಾರತ 39 ರನ್‌ಗಳ ಅಂತರದಲ್ಲಿ ಜಯ ಗಳಿಸಿತು. ಎರಡನೇ ಪಂದ್ಯ ಮುಂಬೈಯಲ್ಲಿ ನಡೆಯಲಿದೆ. ಭಾರತದ ದುರ್ಗಾ ರಾವ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles