ಏಜೆನ್ಸೀಸ್ ಮುಂಬೈ
ಇಂಗ್ಲೆಂಡ್ ಪ್ರವಾಸದ ವೇಳೆ ದನದ ಮಾಂಸ (ಬೀಫ್ )ದ ಪಾಸ್ತಾ ಇರುವುದನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವುದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪ್ರವಾಸದ ವೇಳೆ ತಂಡಕ್ಕೆ ದನದ ಮಾಂಸದಿಂದ ಮಾಡಿದ ಯಾವುದೇ ತಿನಿಸು ಬೇಡವೆಂದು ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತಿಳಿಸಿದೆ.
‘ಭಾರತದ ತಂಡಕ್ಕೆ ನೀಡಿರುವ ಆಹಾರದ ಪಟ್ಟಿಯಲ್ಲಿ ಬೀಫ್ ತೆಗೆದುಹಾಕುವಂತೆ ಮನವಿ ಮಾಡಿಕೊಂಡಿದೆ. ನವೆಂಬರ್ ೨೧ ರಿಂದ ಜನವರಿ ೧೮ರವರೆಗೆ ಭಾರತ ತಂಡ ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸ ಕೈಗೊಳ್ಳಲಿದೆ. ಇತ್ತೀಚಿಗೆ ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ಆಸ್ಟ್ರೇಲಿಯಾ ಪ್ರವಾಸಕೈಗೊಂಡ ಸಿದ್ಧತೆಯ ಬಗ್ಗೆ ವೀಕ್ಷಣೆ ನಡೆಸಿತ್ತು. ಈ ಸಂದರ್ಭ ತಂಡಕ್ಕೆ ನೀಡುವ ಆಹಾರದ ಪಟ್ಟಿಯಲ್ಲಿ ಬೀಫ್ ಇರುವುದು ಗಮನಕ್ಕೆ ಬಂದಿತ್ತು. ಆ ಬಳಿಕ ನೀಡುವ ಆಹಾರದಲ್ಲಿ ಬೀಫ್ ಇರಬಾರದು ಎನ್ನುವುದರ ಬಗ್ಗೆ ಎರಡು ದೇಶಗಳ ಕ್ರಿಕೆಟ್ ಮಂಡಳಿ ನಡುವೆಯ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳಲಾಗಿದೆ.
ಇಂಗ್ಲೆಂಡ್ ಪ್ರವಾಸದ ವೇಳೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನೀಡಿದ ಆಹಾರದ ಪಟ್ಟಿಯಲ್ಲಿ ಬ್ರೈಸ್ಡ್ ಬೀಫ್ ಪಾಸ್ತಾ ಇರುವುದು ಕಂಡು ಬಂದಿತ್ತು, ಅದನ್ನು ಬಿಸಿಸಿಐ ಟ್ವಿಟರ್‌ನಲ್ಲಿ ಪ್ರಕಟಿಸಿ ಟೀಕೆಗೆ ಗುರಿಯಾಗಿತ್ತು. ಆಸ್ಟ್ರೇಲಿಯಾದಲ್ಲಿ ನೀಡುವ ಆಹಾರ ರುಚಿಯಾಗಿರುವುದಿಲ್ಲ ಎಂದು ಕೆಲವು ಆಟಗಾರರು ಆರೋಪಿಸಿರುವುದನ್ನು ಹೆಸರು ಹೇಳಬಯಸದ ಬಿಸಿಸಿಐ ಅಧಿಕಾರಿಯೊಬ್ಬತು ತಿಳಿಸಿದ್ದಾರೆ. ತಂಡದಲ್ಲಿ ಕೆಲವು ಸಸ್ಯಾಹಾರಿಗಳು ಇದ್ದಾರೆ. ಅವರಿಗೆ ಬಹಳ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕಾಗಿ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ಹೊಟೇಲ್‌ನಲ್ಲಿ ಈ ಆಟಗಾರರಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.