ಜೈಪುರ:
ಕ್ಯಾನನ್ ಚೆನಾಯ್ ಅವರು ಇಲ್ಲಿ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ ಪುರುಷರ ಟ್ರ್ಯಾಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸಿದ ಕ್ಯಾನನ್ ಅವರು ಫೈನಲ್ ಸುತ್ತಿನಲ್ಲಿ 50 ಶೂಟ್ಗಳಲ್ಲಿ 43 ಶಾಟ್ಗಳು ಪರಿಪೂರ್ಣವಾಗಿದ್ದವು. ಆ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು. ಹರಿಯಾಣದ ಲಕ್ಷ್ಯ ಅವರು 42 ಶಾಟ್ಗಳು ಪರಿಪೂರ್ಣವಾಗಿದ್ದರಿಂದ ಅವರು ಬೆಳ್ಳಿ ಪದಕ ಪಡೆದರು. ತಮಿಳುನಾಡಿನ ಪೃಥ್ವಿರಾಜ್ ತೊಂಡೈಮನ್ 33 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತರಾದರು.