Sunday, December 22, 2024

ವಿಶ್ವಕಪ್: ಭಾರತದ ಕನಸು ಭಗ್ನ

ಭುವನೇಶ್ವರ:

 

43 ವರ್ಷಗಳ ಬಳಿಕ ಭಾರತ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸುವ ಕನಸನ್ನು ನೆದರ್‌ಲೆಂಡ್ ಭಗ್ನಗೊಳಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ 14ನೇ ಹಾಕಿ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ 1-2 ಗೋಲುಗಳಿಂದ ಪರಾಭವಗೊಂಡಿತು.

ವಿಶ್ವಾಸದಿಂದಲೇ ಮೈದಾನಕ್ಕೆೆ ಆಗಮಿಸಿ ಮನ್‌ಪ್ರೀತ್ ಬಳಗ ಆರಂಭದಲ್ಲಿ ಉತ್ತಮ ಆಟವಾಡುವಲ್ಲಿ ಯಶಸ್ವಿಯಾದರೆ, ಬಳಿಕ ನೀರಸ ಪ್ರದರ್ಶನ ತೋರಿತು. ಪಂದ್ಯ ಆರಂಭದ 12ನೇ ನಿಮಿಷದಲ್ಲಿ ಆಕಾಶ್‌ದೀಪ್ ಸಿಂಗ್ ಅವರು ಗೋಲು ಬಾರಿಸುವ ಮೂಲಕ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳ ಮನ ಗೆದ್ದರು. ಇದಾದ ಮೂರನೇ ನಿಮಿಷದಲ್ಲಿ ನೆದರ್‌ಲೆಂಡ್‌ನ ಥಿಯೆರಿ ಬ್ರಂಕ್‌ಮನ್ ಅವರು ತಂಡಕ್ಕೆೆ ಮೊದಲ ಗೋಲನ್ನು ನೀಡಿದರು. ಈ ಮೂಲಕ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದವು.

ಈ ವೇಳೆ ಭಾರತದ ಆಟಗಾರರಿಗೆ ಸಿಕ್ಕ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು. ಮೂರನೇ ಕ್ವಾಾರ್ಟರ್‌ನಲ್ಲಿ ನೆದರ್‌ಲೆಂಡ್‌ನ ಮಿಂಕ್ ವಾರ್ಡೆನ್ ವಾನ್ ಡೆರ್ ಅವರು 50ನೇ ನಿಮಿಷದಲ್ಲಿ ತಂಡಕ್ಕೆೆ ಎರಡನೇ ಗೋಲನ್ನು ನೀಡುವಲ್ಲಿ ಯಶಸ್ವಿಿಯಾಗಿ ತಂಡ ಗೆಲುವಿನ ರೂವಾರಿಗಳಾಗಿ ಮಿಂಚಿದರು. ನೆದರ್‌ಲೆಂಡ್ ಎದುರು ಭಾರತದ ಆಟಗಾರರು ತೀವ್ರ ಪ್ರತಿರೋಧ ತೋರಿದರೂ ಯಶಸ್ಸು ಕಾಣದೇ ಕೊನೆಗೆ ಒಂದು ಗೋಲಿನಿಂದ ಸೋಲಿಗೆ ಶರಣಾದರು. ನೆದರ್‌ಲೆಂಡ್ ಉಪಾಂತ್ಯದಲ್ಲಿ ಆಸ್ಟ್ರೇಲಿಯಾದೊಂದಿಗೆ ಹೋರಾಟ ನಡೆಸಲಿದೆ.

ಟೂರ್ನಿಯ ಆರಂಭದಿಂದಲೂ ಅಮೋಘ ಪ್ರದರ್ಶನ ನೀಡುವ ಮೂಲಕ ಎದುರಾಳಿ ತಂಡಗಳನ್ನುಮಣಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಮನ್‌ಪ್ರೀತ್ ಬಳಗ ನೆದರ್‌ಲೆಂಡ್ ಎದುರಿನ ಎಂಟರ ಘಟ್ಟದಲ್ಲಿ ಕಳಪೆ ಆಟವಾಡುವ ಮೂಲಕ ಪರಾಭವಗೊಂಡಿದೆ. ಭಾರತ ತಂಡ 1971ರಲ್ಲಿ ಮೂರನೇ ಸ್ಥಾಾನ, 1973ರಲ್ಲಿ ರನ್ನರ್ ಅಪ್ ಹಾಗೂ 1975ನೇ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Related Articles