Friday, November 22, 2024

ಇತಿಹಾಸ ಬರೆದ ಜೋತ್ಸ್ನಾ ಚಿನ್ನಪ್ಪ

ಚೆನ್ನೈ:

  ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ ಅವರು ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 16ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್  ವಿಭಾಗದ ಅಂತಿಮ ಸುತ್ತಿನಲ್ಲಿ ಜೋತ್ಸ್ನಾ , ಉರ್ವಶಿ ಜೋಶಿ ಅವರನ್ನು 9-11, 11-1, 11-6, 11-5 ಅಂತರಗಳಿಂದ ಮಣಿಸುವಲ್ಲಿ ಸಫಲರಾದರು. ವಿಶ್ವಾಸದಿಂದಲೇ ಮೈದಾನಕ್ಕೆೆ ಆಗಮಿಸಿದ ಜೋಷ್ನಾ  ಮೊದಲ ಸೆಟ್‌ನಲ್ಲಿ ನೀರಸ ಆಟದೊಂದಿಗೆ ಎರಡು ಅಂಕ ಹಿನ್ನಡೆಯಾದರೆ, ಎರಡು, ಮೂರು ಹಾಗೂ ನಾಲ್ಕನೇ ಸೆಟ್‌ಗಳಲ್ಲಿ ಕ್ರಮವಾಗಿ 10, 7 ಮತ್ತು 6 ಪಾಯಿಂಟ್‌ಗಳ ಮುನ್ನಡೆಯಾಗಿ ಗೆಲುವಿನ ನಗೆ ಬೀರಿದರು.
ಇದಕ್ಕೂ ಮೊದಲು ಭಾರತದ ಭುವನೇಶ್ವರಿ ಕುಮಾರಿ ಅವರು 16 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಜೋಷ್ನಾ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅವರ ದಾಖಲೆಗೆ ಸಮನಾದರು. ಅವರು 2014ನೇ ಕಾಮನ್‌ವೆಲ್ತ್  ನ ಡಬಲ್ಸ್  ನಲ್ಲಿ ಚಿನ್ನ ಹಾಗೂ 2018ರಲ್ಲಿ ಬೆಳ್ಳಿ ಪದಕ ಗೆದ್ದರೆ, 2018ನೇ ಏಷ್ಯನ್ ಕ್ರೀಡಾಕೂಟದ ಸಿಂಗಲ್ಸ್   ಮತ್ತು ತಂಡ ವಿಭಾಗದಲ್ಲಿ ಕಂಚು ಹಾಗೂ ಬೆಳ್ಳಿ ತಮ್ಮದಾಗಿಸಿಕೊಂಡಿದ್ದರು. ಪುರುಷರ ಸಿಂಗಲ್ಸ್  ನ ಫೈನಲ್‌ನಲ್ಲಿ ಮಹೇಶ್ ಮಂಗೋನ್ಕರ್ ಅವರು ವಿಕ್ರಮ್ ಮಲ್ಹೋತ್ರಾ ಅವರು 3-2 (11-4, 13-15, 11-2, 5-11, 15-13) ಅಂತರಗಳಿಂದ ಜಯ ಸಾಧಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು

Related Articles