Thursday, October 31, 2024

ಹಳಿ ತಪ್ಪಿದ ರೈಲ್ವೆ, ಜಯದತ್ತ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ

ಶಿವಮೊಗ್ಗದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೆ ವಿರುದ್ಧ ಜಯದ ಹಾದಿ ಹಿಡಿದಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ 362 ರನ್ ಜಯದ ಗುರಿ ಹೊತ್ತ ರೈಲ್ವೆ ತಂಡ ಮೂರನೇ  ದಿನದಾಟದ ಮುಕ್ತಾಯಕ್ಕೆ 44 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ 71 ರನ್ ಮುನ್ನಡೆ ಸಾಧಿಸಿದ ಕರ್ನಾಟಕ ತಂಡ ಡಿ, ನಿಶ್ಚಲ್ (101) , ದೇವದತ್ತ ಪಡಿಕ್ಕಲ್ (75), ಹಾಗೂ ಕೆ ವಿ ಸಿದ್ದಾರ್ಥ್ (84*)ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕೇವಲ ೨ ವಿಕೆಟ್ ಕಳೆದುಕೊಂಡು 290 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ವಿದ‘ರ್ ವಿರುದ್ಧ ನಡೆದ ಋತುವಿನ ಮೊದಲ ಪಂದ್ಯದಲ್ಲಿ 113 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದ ನಿಶ್ಚಲ್, ರೈಲ್ವೆ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲೂ 52 ರನ್ ಗಳಿಸಿ ಅಲ್ಪ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ  232 ಎಸೆತಗಳನ್ನೆದುರಿಸಿ 7 ಬೌಂಡರಿ ನೆರವಿನಿಂದ ಅಮೂಲ್ಯ 101ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಕೆವಿ ಸಿದ್ಧಾರ್ಥ್ ಕೂಡ ಮೊದಲ ಇನಿಂಗ್ಸ್‌ನಲ್ಲಿ 69 ರನ್ ಗಳಿಸಿದ್ದು, ದ್ವಿತೀಯ ಇನಿಂಗ್ಸ್‌ನಲ್ಲಿ  ಕೇವಲ 86 ಎಸೆತಗಳಲ್ಲಿ  6 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 84 ರನ್ ಸಿಡಿಸಿದರು. ಪರಿಣಾಮ ಕರ್ನಾಟಕ ದ್ವಿತೀಯ ಇನಿಂಗ್ಸ್‌ನಲ್ಲಿ  290 ರನ್ ಗಳಿಸಿ ಡಿಕ್ಲೇರ್ ಘೋಷಿಸಿ ರೈಲ್ವೆಗೆ ಕಠಿಣವೆನಿಸಬಹುದಾದ 362 ರನ್‌ಗಳ ಸವಾಲು ನೀಡಿತು.
ಕರ್ನಾಟಕ ಪ್ರಥಮ ಇನಿಂಗ್ಸ್ – 214 ರನ್‌ಗೆ ಆಲೌಟ್ (ನಿಶ್ಚಲ್ 52, ಕೆವಿಸಿದ್ಧಾರ್ಥ್  69, ಎಸ್. ಶರತ್ ಔಟಾಗದೆ 31)
ರೈಲ್ವೆ ಪ್ರಥಮ ಇನಿಂಗ್ಸ್- 143 ರನ್‌ಗೆ ಆಲೌಟ್, (ಎಂ.ಎನ್. ರಾವ್ ಔಟಾಗದೆ 52, ರೋನಿತ್ ಮೋರೆ 45ಕ್ಕೆ 5)
ಕರ್ನಾಟಕ ದ್ವಿತೀಯ ಇನಿಂಗ್ಸ್- 2 ವಿಕೆಟ್ ನಷ್ಟಕ್ಕೆ  290 ರನ್‌ ಡಿಕ್ಲೇರ್ (ನಿಶ್ಚಲ್ 101, ಪಡಿಕ್ಕಲ್ 75,  ಕೆ.ವಿ. ಸಿದ್ಧಾರ್ಥ್ ಔಟಾಗದೆ 84)
ರೈಲ್ವೆ ದ್ವಿತೀಯ ಇನಿಂಗ್ಸ್-ಜಯಕ್ಕೆ 362 ರನ್ ಗುರಿ, ಮೂರನೇ  ದಿನದಾಟದ ಅಂತ್ಯಕ್ಕೆ , 1 ವಿಕೆಟ್ ನಷ್ಟಕ್ಕೆ 44 ರನ್.

Related Articles