Thursday, December 26, 2024

ಆಳ್ವಾಸ್‌ಗೆ ಬಾಲ್ ಬ್ಯಾಡ್ಮಿಂಟನ್ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ತುಮಕೂರಿನ ಕ್ರಿಯೇಟಿವ್ ಕ್ಲಬ್ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಹೊನಲುಬೆಳಕಿನ ಆಹ್ವಾನಿತ ತಂಡಗಳ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪುರುಷರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ರಾಜ್ಯದ ಆಹ್ವಾನಿತ 15 ತಂಡಗಳು ಪಾಲ್ಗೊಂಡಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಕೆನರಾ ಬ್ಯಾಂಕ್ ತಂಡವನ್ನು 35-26, 35-29 ಅಂತರದ ನೇರ್ ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಆಳ್ವಾಸ್ ತಂಡ ವಿಜಯನಗರ ಕ್ಲಬ್ ತಂಡವನ್ನು ಹಾಗೂ ಕೆನರಾ ಬ್ಯಾಂಕ್ ತಂಡವು ಬನಶಂಕರಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿ ಫೈನಲ್ ಹಂತ ತಲುಪಿದ್ದವು.
ಅನುಭವಿ ಆಟಗಾರರಿಂದ ಕೂಡಿದ್ದ ಕೆನರಾ ಬ್ಯಾಂಕ್ ತಂಡ ಫೈನಲ್‌ನಲ್ಲಿ ಆಳ್ವಾಸ್‌ನ ಯುವ ತಂಡದ ವಿರುದ್ಧ ಉತ್ತಮ ಪೈಪೋಟಿ ನೀಡಿದರೂ ಅಂತಿಮವಾಗಿ ಸೋಲಿಗೆ ಶರಣಾಯಿತು. ಕೆನರಾ ಬ್ಯಾಂಕ್ ತಂಡದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅನುಭವಿ ಆಟಗಾರ ಸುದರ್ಶನ್ ಮತ್ತು ಮಹಾದೇವ್, ಹಾಗೂ ಸ್ಟಾರ್ ಆಫ್  ಇಂಡಿಯಾ ಆಟಗಾರ ಗಿರಿಪ್ರಸಾದ್ ಅವರಿಂದ ಕೂಡಿತ್ತು.

Related Articles