Sunday, November 24, 2024

ಚೆನ್ನೈ ಸ್ಪಾರ್ಟಾನ್ಸ್ ಪ್ರೊ ವಾಲಿಬಾಲ್ ಚಾಂಪಿಯನ್ಸ್

ಸ್ಪೋರ್ಟ್ಸ್ ಮೇಲ್ ವರದಿ

ಚೆನ್ನೈನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಪ್ರೊ ವಾಲಿಬಾಲ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಕ್ಯಾಲಿಕಟ್ ಹೀರೋಸ್ ವಿರುದ್ಧ ನೇರ ಸೆಟ್‌ಗಳಿಂದ ಜಯ ಗಳಿಸಿದ ಚೆನ್ನೈ  ಸ್ಪಾರ್ಟಾನ್ಸ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ  ಸ್ಪಾರ್ಟಾನ್ಸ್ 15-11, 15-12, 16-14 ಅಂತರದಲ್ಲಿ ಜಯ ಗಳಿಸಿ ದೇಶದ ಮೊದಲ ಪ್ರೊ ವಾಲಿಬಾಲ್ ಲೀಗ್ ಪ್ರಶಸ್ತಿ ಗೆದ್ದು ಇತಿಹಾಸ ಬರೆಯಿತು.
ಲೀಗ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ಪ್ರತ್ವ ಸಾಧಿಸಿದ್ದ ಕೇರಳದ ತಂಡ ಕ್ಯಾಲಿಕಟ್ ಹೀರೋಸ್ ಅಂತಿಮವಾಗಿ ಫೈನಲ್‌ನಲ್ಲಿ ಸೋಲನುಭವಿಸಿತು,. ಈ ಹಿಂದೆ ಲೀಗ್ ಪಂದ್ಯದಲ್ಲಿ ಚೆನ್ನೈ ತಂಡ ಕ್ಯಾಲಿಕಟ್ ವಿರುದ್ಧ ಸೋಲನುಭವಿಸಿತ್ತು. ಕೇವಲ ಎರಡು ಜಯದೊಂದಿಗೆ ಪ್ಲೇ ಆ್ ಹಂತ ತಲುಪಿದ್ದ ಸ್ಪಾರ್ಟಾನ್ಸ್ ತಂಡ ಸೆಮಿಫೈನಲ್‌ನಲ್ಲಿ  ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ 1-2 ಅಂತರದಲ್ಲಿ ಹಿನ್ನಡೆ ಕಂಡಿದ್ದರೂ, ನಂತರ  3-2 ಸೆಟ್‌ಗಳ ಜಯ ಗಳಿಸಿ ಫೈನಲ್ ಪ್ರವೇಶಿಸಿತ್ತು.  ಶುಕ್ರವಾರದ ಫೈನಲ್‌ನಲ್ಲಿ ಹೀರೋಸ್ ತಂಡಕ್ಕೆ ಸ್ಪಾರ್ಟಾನ್ಸ್ ಅಂಗಣದಲ್ಲಿ ಯೋಚನೆ ಮಾಡಲೂ ಅವಕಾಶ ನೀಡಲಿಲ್ಲ. ರೂಡಿ ವೆರ್‌ಹಾಯ್ಫ್ ಹಾಗೂ ನವೀನ್ ರಾಜಾ ಜಾಕೋಬ್ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ತಲಾ ನಾಲ್ಕು ಅಂಕ ಗಳಿಸಿರುವ ಮೂಲಕ ಈ ಇಬ್ಬರು ಆಟಗಾರರು  ಚೆನ್ನೈ  ಮೊದಲ ಸೆಟ್ ಗೆಲ್ಲಲು ನೆರವಾದರು.
ಎರಡನೇ ಸೆಟ್‌ನಲ್ಲಿ ಕೆನಡಾದ ಆಟಗಾರ ವೆರ್‌ಹಾಯ್ಫ್  ಏಳು ಅಂಕ ಗಳಿಸಿ ಜಯದ ರೂವಾರಿ ಎನಿಸಿದರು. ನವೀನ್ ರಾಜಾ  ಹಾಗೂ ವೆರ್‌ಹಾಯ್ಫ್ ಅವರ ನೆರವಿನಿಂದ ಚೆನ್ನೈ ಮೂರನೇ ಸೆಟ್‌ನಲ್ಲಿ 8-4 ಅಂತರದಲ್ಲಿ ಮುನ್ನಡೆ ಕಂಡಿತ್ತು, ಆದರೆ ಹೀರೋಸ್ ಒಂದು ಹಂತದಲ್ಲಿ ಉತ್ತಮ ಪೈಪೋಟಿ ನೀಡಿfnl 11-8ರಲ್ಲಿ ಮೇಲುಗೈ ಸಾಧಿಸಿತು. ಆದರೆ ನವೀನ್ ರಾಜಾ  ಹಾಗೂ ಆಖಿನ್ ಜಿಎಸ್ ಅವರ ಸ್ಫೋಟಕ ಸ್ಮ್ಯಾಶ್ ಮುಂದೆ ಹೀರೋಸ್ ಆಟ ನಡೆಯಲಿಲ್ಲ.

Related Articles