Friday, November 22, 2024

ಕೋಟ್ಲಾದಲ್ಲಿ ಭಾರತಕ್ಕೆ ಸೋಲು, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ

ಏಜೆನ್ಸೀಸ್ ಹೊಸದಿಲ್ಲಿ

ಉಸ್ಮಾನ್ ಖವಾಜ (100) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತಿನ ಬೌಲಿಂಗ್ ನೆರವಿನಿಂದ ‘ಭಾರತ ತಂಡವನ್ನು 35 ರನ್‌ಗಳ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಬೌಲರ್‌ಗಳಿಗೆ ನೆರವಾದ ಪಿಚ್‌ನಲ್ಲಿ ಖವಾಜ ಅವರ ಶತಕದ ನೆರವಿನಿಂದ ಸವಾಲಿನ 272 ರನ್ ಗಳಿಸಿತು. ಆಸೀಸ್ ಪರ ಹ್ಯಾಂಡ್ಸ್‌ಕಾಂಬ್  52 ರನ್ ಗಳಿಸಿ ಸವಾಲಿನ ಮೊತ್ತದಲ್ಲಿ ನೆರವಾದರರು. 273 ರನ್ ಗುರಿಯನ್ನು ಬೆಂಬತ್ತಿದ ‘ಭಾರತದ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ (56) ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ (44) ಹಾಗೂ ‘ಭುವನೇಶ್ವರ್ ಕುಮಾರ್ (46) ಅವರನ್ನು ಹೊರತುಪಡಿಸಿದರೆ ಉಳಿದ ದಾಂಡಿಗರು ಆಸೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. 50 ಓವರ್‌ಗಳಲ್ಲಿ 237 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. 2009ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ‘ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದುಕೊಂಡಿತು. 0-2 ಅಂತರದಲ್ಲಿ ಹಿನ್ನಡೆ ಕಂಡಿದ್ದ ತಂಡವೊಂದು ಐದು ಪಂದ್ಯಗಳ ಸರಣಿಯನ್ನು ಗೆದ್ದುಕೊಂಡಿರುವುದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ನಾಲ್ಕನೇ ಬಾರಿ. ವಿಶ್ವಕಪ್‌ಗೆ ಸಜ್ಜಾಗುತ್ತಿರುವ ‘ಭಾರತಕ್ಕೆ ಇದು ಕೊನೆಯ ಏಕದಿನ ಸರಣಿ. ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಯನ್ನಾಡಲು ಯುಎಇಗೆ ಪ್ರಯಾಣಿಸಲಿದೆ.
ಉಸ್ಮಾನ್ ಖವಾಜ ಪ್ರಸಕ್ತ ಸರಣಿಯಲ್ಲಿ ಎರಡನೇ ಶತಕ ಗಳಿಸಿದರು. ಎರಡು ಬಾರಿಯೂ ಅವರು ಗಳಿಸಿದ ಶತಕದಿಂದ ಆಸ್ಟ್ರೇಲಿಯಾ ತಂಡ ಜಯ ಗಳಿಸಿರುವುದು ವಿಶೇಷ.

Related Articles