Friday, November 22, 2024

ಅಜ್ಲಾನ್ ಶಾ ಹಾಕಿ: ಕೊರಿಯಾ ವಿರುದ್ಧ ಭಾರತ ಡ್ರಾ

ಏಜೆನ್ಸೀಸ್ ಮಲೇಷ್ಯಾ

ಅಂತಿಮ ಕ್ಷಣದಲ್ಲಿ ಎಡವಿದ ‘ಭಾರತ ಹಾಕಿ ತಂಡ ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಕೊರಿಯಾ ವಿರುದ್ಧ 1-1 ಗೋಲಿನ ಡ್ರಾ ಕಂಡಿದೆ. ಪಂದ್ಯಕ್ಕೆ ಮಳೆಯ ಅಡ್ಡಿಯಾಗಿತ್ತು.

28ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಗಳಿಸಿದ ಗೋಲಿನಿಂದ ಭಾರತ ಮೇಲುಗೈ ಸಾಧಿಸಿತ್ತು. ಆದರೆ 60ನೇ ನಿಮಿಷದಲ್ಲಿ ಮಾಡಿದ ಪ್ರಮಾದದಿಂದಾಗಿ ಕೊರಿಯಾದ ಜಾಂಗ್‌ಹ್ಯೂನ್ ಜಾಂಗ್ ಪೆನಾಲ್ಟಿ ಕಾರ್ನರ್ ಮೂಲದ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಕೊರಿಯಾ ವಿರುದ್ಧ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತದ ಪರ ವಿವೇಕ್ ಸಾಗರ್‌ಗೆ ಗೋಲು ಗಳಿಸುವ ಅವಕಾಶ ಮೊದಲ ನಿಮಿಷದಲ್ಲೇ ಸಿಕ್ಕಿತ್ತು. ಆದರೆ ಕೊರಿಯಾದ ಡಿೆನ್ಸ್ ವಿಭಾಗ ಆ ಅವಕಾಶವನ್ನು ಕಸಿದುಕೊಂಡಿತು.  ಆ ನಂತರ ಭಾರತಕ್ಕೆ ಎರಡು ಬಾರಿ ಫೀಲ್ಡ್ ಗೋಲ್ ಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ಗುರಿಯನ್ನು ತಲಪುವಲ್ಲಿ ‘ಭಾರತದ ಆಟಗಾರರು ವಿಲರಾದರು. ಬೇಸ್‌ಲೇನ್‌ನಲ್ಲಿ ಉತ್ತಮ ರೀತಿಯ ಟ್ಯಾಕಲ್ ಮಾಡಿದ ಸುರೇಂದರ್ ಕುಮಾರ್ ಪೆನಾಲ್ಟಿ ಅವಕಾಶವನ್ನು ಒದಗಿಸಿಕೊಟ್ಟರು.
ಆದರೆ ಅದು ಗೋಲಾಗಿ ರೂಪುಗೊಳ್ಳಲಿಲ್ಲ. ದ್ವಿತೀಯ ಕ್ವಾರ್ಟರ್‌ನ 28ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ‘ಭಾರತಕ್ಕೆ. ಕೊರಿಯಾದ ಮೂವರು ಆಟಗಾರರಾದ ಕಿಮ್ ಹಿಯೋನ್ಜಿನ್, ಜಿಹ್ಯೂನ್ ಯಾಂಗ್ ಮತ್ತು ಲೀ ನಮ್ಯೋಂಗ್ ಹಸಿರು ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದ ಕಾರಣ ಕೊರಿಯಾದ ತಂಡದಲ್ಲಿ ಕೇವಲ ಎಂಟು ಆಟಗಾರರು ಆಡಬೇಕಾಯಿತು. ಇದರ ಸದುಪಯೋಗ ಪಡೆದ ‘ಭಾರತ ಮೊದಲ ಗೋಲು ಗಳಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಮಳೆ ಕಾಣಿಸಿಕೊಂಡ ಕಾರಣ ‘ಭಾರತ ನಿರೀಕ್ಷಿತ ಮಟ್ಟದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲವಾಯಿತು. ಪರಿಣಾಮ ಕೊರಿಯಾಕ್ಕೆ ಪೆನಾಲ್ಟಿ ಅವಕಾಶ. ಅಮಿತ್ ರೋಹಿದಾಸ್ ಚೆಂಡನ್ನು ತಡೆದ ಕಾರಣ ಕೊರಿಯಾಕ್ಕೆ ಸಮಬಲದ ಅವಕಾಶ ಸಿಗಲಿಲ್ಲ.  ಪಂದ್ಯ ಮುಗಿಯಲು ಎಂಟು ನಿಮಿಷ ಬಾಕಿ ಇರುವಾಗ ಅತಿಯಾಗಿ ಸುರಿದ ಮಳೆಯಿಂದಾಗಿ ಪಂದ್ಯಕ್ಕೆ ವಿರಾಮ ನೀಡಲಾಯಿತು. ಮತ್ತೆ ಆರಂ‘ಗೊಂಡಾಗ ಕೊರಿಯಾಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ‘ಭಾರತ ಅದಕ್ಕೆ ತಡೆಯೊಡ್ಡಿತ್ತು. ಪಂದ್ಯ ಮುಗಿಯಲು 53 ಸೆಕೆಂಡು ಬಾಕಿ ಇರುವಾಗ ಸಿಕ್ಕ ಪೆನಾಲ್ಟಿ ಕಾರ್ನರ್‌ಗಗೆ ಜಾಂಗ್ ಗೋಲು ಗಳಿಸಿ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿದರು.

Related Articles