ಏಜೆನ್ಸೀಸ್ ಜೈಪುರ
ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 7 ವಿಕೆಟ್‌ಗಳ ಜಯ ಗಳಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಆರ್‌ಸಿಬಿ ಸತತ ನಾಲ್ಕನೇ ಸೋಲುಂಡು ಆತಂಕದ ಹಾದಿಯಲ್ಲಿ ಮುನ್ನಡೆದಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಅಜಿಂಕ್ಯ ರಹಾನೆ ಪಡೆ ಕೊಹ್ಲಿ ತಂಡವನ್ನು 158 ರನ್‌ಗೆ ಕಟ್ಟಿ ಹಾಕಿತು. ಪಾರ್ಥೀವ್ ಪಟೇಲ್ 67 ರನ್ ಗಳಿಸಿ ಆರ್‌ಸಿಬಿಯ ಸವಾಲಿನ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಗೋಪಾಲ್ ಸ್ಪಿನ್ ಮಂತ್ರದ ಮೂಲಕ ಆರ್‌ಸಿಬಿಯ ಪ್ರಮುಖ ಮೂರು ವಿಕೆಟ್ ಗಳಿಸಿ ರನ್ ಗಳಿಕೆಗೆ ಕಡಿವಾಣ ಹಾಕಿದರು. ನಿರೀಕ್ಷೆಯಂತೆ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
159 ರನ್ ಜಯದ ಗುರಿಹೊತ್ತ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಸ್ಫೋಟಕ 59 ರನ್ ಗಳಿಸಿ ಉತ್ತಮ ಆರಂ‘ ಕಲ್ಪಿಸಿದರು. ನಂತರ ಸ್ಟೀವನ್ ಸ್ಮಿತ್ (31) ಹಾಗೂ ರಾಹುಲ್ ತ್ರಿಪಾಠಿ ಅಜೇಯ (34) ರನ್ ಗಳಿಸಿ ಜಯ ತಂದಿತ್ತರು. ಆರ್‌ಸಿಬಿ ಈ ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿದರೂ ಐದು ಬಾರಿ ಕ್ಯಾಚ್ ಕೈ ಚೆಲ್ಲಿದ ಕಾರಣ ಸೋಲಿಗೆ ಶರಣಾಗಬೇಕಾಯಿತು. ಹಿಂದೆ ಸತತ ನಾಲ್ಕು ಪಂದ್ಯಗಳಲ್ಲಿ ಸೋತರೂ ಆರ್‌ಸಿಬಿ ಪ್ಲೇ ಆ್ ಹಂತವನ್ನು ತಲುಪಿತ್ತು. ಉಳಿದಿರುವ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೆ ಬೆಂಗಳೂರು ತಂಡ ಯಶಸ್ಸಿನ ಹಾದಿ ತುಳಿಯಬಹುದು.