ನವದೆಹಲಿ: ಮುಂಬರುವ ಮಹಿಳಾ ಟಿ-20 ಪ್ರದರ್ಶನ ಪಂದ್ಯಗಳಿಗೆ ಸೂಪರ್‌ನೊವಾಸ್, ಟ್ರಯಲ್‌ಬ್ಲೇಜರ್ಸ್ ಹಾಗೂ ವೆಲೊಸಿಟಿ ತಂಡಗಳನ್ನು ಕ್ರಮವಾಗಿ ಭಾರತ ತಂಡದ ಮಿಥಾಲಿ ರಾಜ್, ಹರ್ಮಾನ್ ಪ್ರೀತ್ ಕೌರ್ ಹಾಗೂ ಸ್ಮೃತಿ ಮಂಧಾನ ಅವರು ಮುನ್ನಡೆಸಲಿದ್ದಾರೆ.
ಐಪಿಎಲ್ ಪ್ಲೇ ಆಫ್ ಹೊರನೋಟ ಅಂಗವಾಗಿ ನಾಲ್ಕು ಟಿ-20 ಪ್ರದರ್ಶನ ಪಂದ್ಯಗಳನ್ನು ಜೈಪುರ ಆಯೋಜಿಸಿದೆ. ಎಲ್ಲ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಮೇ.6, 8 ಹಾಗೂ 9 ರಂದು ಮೂರು ಪಂದ್ಯಗಳು ನಡೆಯಲಿವೆ. ನಂತರ, ಮೇ. 11 ರಂದು ಫೈನಲ್ ಪಂದ್ಯ ನಡೆಯಲಿದೆ.” ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿರುವ ವೇಳೆಯೇ ನಾಲ್ಕು ಪಂದ್ಯಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯೋಜಿಸಿದೆ.
ದೇಶದಲ್ಲಿ ಮಹಿಳಾ ಕ್ರಿಕೆಟ್ ಉತ್ತೇಜನ ನೀಡುವ ಭಾಗವಾಗಿ ಈ ಪಂದ್ಯಗಳನ್ನು ಆಯೋಜಿಸಲಾಗಿದೆ. ಆರು ವಿದೇಶಿ ಆಟಗಾರ್ತಿಯರು ವಿವಿಧ ತಂಡಗಳ ಪರ ಆಡಲಿದ್ದಾರೆ. ಈ ಎಲ್ಲ ನಾಲ್ಕು ಪಂದ್ಯಗಳನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಕಳೆದ ವರ್ಷ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಒಂದು ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಸೂಪರ್ ನೋವಾಸ್ ತಂಡ ವಿಕ್ಟೋರಿಯಾಸ್ ತಂಡದ ವಿರುದ್ಧ ಕೊನೆಯ ಎಸೆತದಲ್ಲಿ ರೋಚಕ ಗೆಲುವು ಪಡೆದಿತ್ತು.