ಬೆಂಗಳೂರು: ಕೊನೆಯ ಎರಡೂ ಕ್ವಾರ್ಟರ್ನಲ್ಲಿ ಅಮೋಘ ಪ್ರದರ್ಶನ ತೋರಿದ ಮುಂಬೈ ಚೆ ರಾಜೇ ತಂಡ, ಹರಿಯಾಣ ಹೀರೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೊಚ್ಚಲ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ನ ಮೊದಲ ಪಂದ್ಯದಲ್ಲಿ ಹರಿಯಾಣ, ಮುಂಬೈ ಚೆ ರಾಜೇ ರೇಡಿಂಗ್ ಹಾಗೂ ಟ್ಯಾಕಲ್ನಲ್ಲಿ ಪ್ರಾಬಲ್ಯ ಮೆರೆಯಿತು.
ಲೀಗ್ ಹಂತ ಮುಕ್ತಾಯಕ್ಕೆ ಇನ್ನೂ ಕೆಲವೇ ಪಂದ್ಯಗಳು ಬಾಕಿ ಇರುವಾಗ ಕಬಡ್ಡಿ ಪಂದ್ಯಾವಳಿಗೆ ರೋಚಕತೆ ದೊರಕಿದೆ. ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಆದರೂ ಮೊದಲ ಕ್ವಾರ್ಟರ್ನ ಆರಂಭದಲ್ಲಿ ಮುಂಬೈ ತಂಡ, ಹರ್ಯಾಣ ಆಟಗಾರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುವ ಮೂಲಕ ಅಂಕಗಳಿಕೆಯಲ್ಲಿ ಏರಿಕೆ ಕಂಡಿತು.
ಮೊದಲ ಕ್ವಾರ್ಟನ್ ನ ಅಲ್ಪ ಮುನ್ನಡೆಯಿಂದ ಸೂರ್ತಿ ಪಡೆದ ಹರಿಯಾಣ ತನ್ನ ಪರಿಣಾಮಕಾರಿ ಆಟವನ್ನು ಪಣಕ್ಕಿಟ್ಟಿತು. ಅದರಲ್ಲೂ ಟ್ಯಾಕಲ್ ಮತ್ತು ರೇಡಿಂಗ್ ವಿಭಾಗದಲ್ಲಿ ಪ್ರಾಬಲ್ಯ ಮೆರೆದ ಹೀರೋಸ್ 14-8ರಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಒಟ್ಟಾರೆ ಮುನ್ನಡೆಯಲ್ಲಿ ಇನ್ನಷ್ಟು ಅಂತರ ಕಾಯ್ದುಕೊಂಡರು.
ದ್ವಿತೀಯ ಕ್ವಾರ್ಟರ್ನಲ್ಲಿ ಉತ್ತಮ ಆಟವನ್ನು ಮುಂದುವರೆಸಿದ ಹರ್ಯಾಣ ಮುಂಬೈ ತಂಡವನ್ನು ಆಲೌಟ್ಗೆ ಗುರಿ ಪಡಿಸಿ ಅಂಕಗಳಿಕೆಯಲ್ಲಿ ಏರಿಕೆ ಕಂಡಿತು.
ಆದರೆ ತೃತೀಯ ಕ್ವಾರ್ಟರ್ನಲ್ಲಿ ಮುನ್ನಡೆ ಹೊರತಾಗಿಯೂ ಹರಿಯಾಣ ಎದುರಾಳಿ ತಂಡದ ದಿಟ್ಟ ಪ್ರತಿರೋಧಕ್ಕೆ ಬೆಚ್ಚಿತು. ಅರುಲ್ ಮತ್ತು ಮಗ್ದಮ್ ಅವರ ಮಿಂಚಿನ ಪ್ರದರ್ಶನದಿಂದಾಗಿ ಮುಂಬಯಿ 10-2ರಲ್ಲಿ ತಿರುಗೇಟು ನೀಡಿತು. ಹೀಗಾಗಿ ಪಂದ್ಯದಲ್ಲಿ ಮೊದಲ ಬಾರಿ 34-33ರಲ್ಲಿ ಮುನ್ನಡೆ ಕಂಡುಕೊಂಡಿತು. ಈ ಕ್ವಾರ್ಟರ್ನಲ್ಲಿ ಹರಿಯಾಣ 2 ಬಾರಿ ಆಲೌಟ್ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು. ಮತ್ತೆ ರೇಡಿಂಗ್ ವಿಭಾಗದಲ್ಲಿ ಕಂಗೊಳಿಸಿದ ಮುಂಬೈ ತಂಡ 17-4, 21-6ರಲ್ಲಿ ಸಂಪೂರ್ಣ ಪಾರಮ್ಯ ಮರೆಯುವ ಮೂಲಕ ಒಟ್ಟಾರೆ ಮುನ್ನಡೆಯನ್ನು 47-38ಕ್ಕೆ ಹೆಚ್ಚಿಸಿಕೊಂಡಿತು.
ಜಿದ್ದಾಜಿದ್ದಿನ ಹೋರಾಟ:
ನಾಕೌಟ್ ಹಂತವನ್ನು ಬಹುತೇಕ ಕಳೆದುಕೊಂಡಿರುವ ಹರಿಯಾಣ ಹೀರೋಸ್ ಮತ್ತು ಮುಂಬೈ ಚೇ ರಾಜೆ ತಂಡಗಳು ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ತೋರಿದವು. ಎ ಗುಂಪಿನಲ್ಲಿರುವ ಹರಿಯಾಣ ಈಗಗಾಲೇ ಆಡಿದ 9 ಪಂದ್ಯಗಳಿಂದ ಕೇವಲ 5 ಅಂಕ ಸಂಪಾದಿಸಿರುವ ಕಾರಣ ಪ್ರಶಸ್ತಿ ಹಾದಿಯಿಂದ ಹೊರಬಿದ್ದಿದೆ. ಹೀಗಾಗಿ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವ ಇರಾದೆಯೊಂದಿಗೆ ಕಣಕ್ಕಿಳಿಯಿತು.
ಅತ್ತ ಬಿ ಗುಂಪಿನಲ್ಲಿ ಒಟ್ಟು 8 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿರುವ ಮುಂಬೈ ಚೆ ರಾಜೆ ತಂಡ ಕೂಡ ಇದೇ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿಯಿತು. ಹೀಗಾಗಿ ಮೊದಲ ಕ್ವಾರ್ಟರ್ ಉಭಯ ತಂಡಗಳಿಂದ ತೀವ್ರ ಹೋರಾಟ ಕಂಡು ಬಂತು. ಹರಿಯಾಣ ತಂಡದ ಸತ್ನಾಮ್ ಸಿಂಗ್ ಮತ್ತು ಮುಂಬೈ ತಂಡದ ಮಹೇಶ್ ಮಗ್ದಮ್ ಅವರ ಹೋರಾಟ ಫಲವಾಗಿ ಮೊದಲ ಕ್ವಾರ್ಟರ್ ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ ಮುಂಬೈ, ಹರಿಯಾಣ ವಿರುದ್ಧ 16 ಅಂಕಗಳ ಅಂತರದಲ್ಲಿ ಜಯದ ನಗೆ ಬೀರಿತು.
ಮೇಯರ್ ಗಂಗಾಂಬಿಕೆ ಚಾಲನೆ: