Wednesday, January 8, 2025

ನೇಯ್ಮಾರ್‌ ವಿರುದ್ಧ ಅತ್ಯಾಚಾರದ ಆರೋಪ.!

ರಿಯೋ ಡಿ ಜನೈರೊ:

ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಹೋಟೆಲ್‌ವೊಂದರಲ್ಲಿ ಬ್ರೆಜಲ್‌ ತಂಡದ ಸ್ಟಾರ್‌ ಸ್ಟ್ರೈಕರ್‌ ನೇಯ್ಮಾರ್‌ ಅವರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದು ಬ್ರೆಜಿಲ್‌ ಮಾಧ್ಯಮಗಳು ವರದಿ ಮಾಡಿವೆ. ಆದರೆ, ನೇಯ್ಮಾರ್‌ ಈ ಆರೋಪವನ್ನು ನಿರಾಕರಿಸಿದ್ದಾರೆ.

ನೇಯ್ಮಾರ್ ಅವರು ಮಹಿಳೆಯ ಒಪ್ಪಿಗೆ ಇಲ್ಲದೆ ಅತ್ಯಾಚಾರ ಮಾಡಿರುವಂತೆ ಸಾವ್‌ಪೌಲೊ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪೊಲಿಸ್‌ ಠಾಣೆಯ ಅಧಿಕಾರಿಗಳು ದೂರಿನ ಪ್ರತಿ ನೀಡಲು ನಿರಾಕರಿಸಿದ್ದಾರೆ.
ಬ್ರೆಜಿಲ್‌ನಲ್ಲಿ ನೆಲೆಸಿರುವ ಅನಧಿಕೃತ ಮಹಿಳೆ ಇನ್‌ಸ್ಟಗ್ರಾಂನಲ್ಲಿ ನೇಯ್ಮಾರ್‌ಗೆ ಪರಿಚಯವಾಗಿದ್ದರು. ನಂತರ ಇವರಿಬ್ಬರ ನಡುವೆ ಸಂದೇಶ ವಿನಿಮಯ ನಡೆದಿತ್ತು. ಬಳಿಕ, ನೇಯ್ಮಾರ್‌ ಅವರು ಪ್ಯಾರಿಸ್‌ ಹೋಟೆಲ್‌ಗೆ ಆಹ್ವಾನಿಸಿದ್ದರು. ಈ ವೇಳೆ ಆಕೆಯ ಮೇಲೆ ಪ್ಯಾರಿಸ್‌ ಸೈಂಟ್‌ ಜರ್ಮನ್‌ ಆಟಗಾರ ಅತ್ಯಾಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ನೇಯ್ಮಾರ್‌ ತಂದೆ ತನ್ನ ಪುತ್ರನ ವಿರುದ್ಧ ಅತ್ಯಾಚಾರದ ಆರೋಪವನ್ನು ನಿರಾಕರಿಸಿದ್ದಾರೆ. ಇದುವರೆಗೂ ತನ್ನ ಪುತ್ರ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗವಹಿಸಿಲ್ಲ. ತನ್ನ ಬಳಿ ಈ ಆರೋಪಕ್ಕೆ ಸಂಬಂಧ ಎಲ್ಲ ಸಾಕ್ಷಿಗಳು ಇದ್ದು, ಈಗಾಗಲೇ ವಕೀಲರಿಗೆ ನೀಡಲಾಗಿದೆ ಎಂದು ಬ್ರೆಜಿಲ್‌ ವಾಹಿನಿಯ ಸಂದರ್ಶನದಲ್ಲಿ ತಿಳಿಸಿದ್ದಾರೆ.

Related Articles