Friday, January 3, 2025

ಹೋಗಿ ಬನ್ನಿ ಶೆಟ್ರೇ…ಸಾಹಸಿಗೆ ಸಾವಿಲ್ಲ

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 


ಕಳೆದ 20ಕ್ಕೂ ಹೆಚ್ಚು ವರ್ಷ ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಉಡುಪಿ ಜಿಲ್ಲೆಯ ಬ್ರಹ್ಮಾವರದ ನಡೂರು  ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನವೀನ್ ಶೆಟ್ಟಿ, ಭಾನುವಾರ ಕೇರಳದ ಕೊಜಿಕ್ಕೋಡ್ ನಲ್ಲಿ ಕಯಾಕಿಂಗ್  ಅಭ್ಯಾಸ ಮಾಡುವಾಗ ಕಂಡು ಬಂದ ಅನಿರೀಕ್ಷಿತ ಪ್ರವಾಹದಲ್ಲಿ ದುರಂತ ಸಾವನ್ನಪ್ಪಿದ್ದಾರೆ.


ದುರಂತದಲ್ಲಿರುವವರನ್ನೇ ರಕ್ಷಿಸಿದ ನವೀನ್ ಇಂದು ದುರಂತ ಸಾವನ್ನು ಕಂಡಿದ್ದು ವಿಧಿಯಾಟವೇ ಸರಿ. ಯಾವಾಗಲೂ ಪರ್ವತಾರೋಹಣ, ಕಯಾಕಿಂಗ್, ರಿವರ್ ರಾಫ್ಟಿಂಗ್ ನಂಥ ಸಾಹಸ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನವೀನ್ ಶೆಟ್ಟಿ, ಕಳೆದ ತಿಂಗಳು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಳೆದ ಬಾರಿ ಕೊಡಗಿನಲ್ಲೂ ಮಳೆಹಾನಿಯಾದಾಗ ನವೀನ್ ಶೆಟ್ಟಿ ಅವರು ಸಾಹಸ ತಂಡದಲ್ಲಿದ್ದು ನೆರವಾಗಿದ್ದು.


ಬೆಂಗಳೂರಿನ ಆರ್,ಟಿ. ನಗರದಲ್ಲಿ ನೆಲೆಸಿರುವ ನವೀನ್, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಕಾಲೇಜು ದಿನಗಳಲ್ಲೇ ತಮ್ಮನ್ನು ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡು, ದೇಶದ ಅಪಾಯಕಾರಿ ನದಿಗಳಲ್ಲಿ ಕಯಾಕಿಂಗ್ ಸಾಹಸ ಮಾಡಿದವರು. ಹಲವಾರು ಸಹಾಸಿಗಳಿಗೆ ತರಬೇತಿ ನೀಡಿದವರು. ತಮ್ಮದೇ ಕಂಪೆನಿಯನ್ನು ಸ್ಥಾಪಿಸಿ ಯಶಸ್ಸು ಕಂಡವರು. ಬಿಡುವಿದ್ದಾಗಲೆಲ್ಲ ಗೆಳೆಯರನ್ನು ಕೂಡಿಕೊಂಡು ಯಾವುದಾದರೊಂದು ನದಿಯಲ್ಲಿ ಕಯಾಕ್ ಹಿಡಿದು ಇಳಿಯುತ್ತಿದ್ದರು. ಆದರೆ ಭಾನುವಾರ ಕೊಜಿಕ್ಕೋಡ್ ಸಮೀಪದ ಕಾಡಂತರ ನದಿಯಲ್ಲಿ ಗೆಳೆಯ ಎಲ್ವಿನ್ ಲೊನಾನ್ ಅವರೊಂದಿಗೆ ತರಬೇತಿ ಪಾಲ್ಗೊಂಡಾಗ ದುರಂತ ಸಂಭವಿಸಿದೆ.  ಬೇರೆ ಬೇರೆ ರಾಜ್ಯಗಳಿಂದ ಬಂದ ಐವರು ಸದಸ್ಯರ ಕಯಾಕ್ ತಂಡ ನದಿಗೆ ಇಳಿದಿತ್ತು, ಈ ನದಿಯಲ್ಲಿ ನವೀನ್ ಶೆಟ್ಟಿ ತಂಡ ಹಲವಾರು ವರ್ಷಗಳಿಂದ ಸಾಹಸದಲ್ಲಿ ತೊಡಗಿಕೊಂಡಿತ್ತು. ಆದರೆ ಯಾವುದೇ ದುರಂತ ಸಂ ಭವಿಸಿರಲಿಲ್ಲ. ಇದಕ್ಕಿಂತಲೂ ಕಠಿಣವಾದ ಪ್ರವಾಹದಲ್ಲಿ ಅವರು ಸಾ ಧನೆ ಮಾಡಿದ್ದರು. ಆದರೆ ಭಾನುವಾರ  ಮಧ್ಯಾಹ್ನ ಇದ್ದಕ್ಕಿದ್ದಂತೆ ನೀರಿನ ಮಟ್ಟ ಹೆಚ್ಚಾಗಿ, ಕಯಾಕ್ ದೋಣಿ ಕೊಚ್ಚಿ ಹೋಗಿ ಬಂಡೆಗಳಿಗೆ ಬಡಿಯಿತು. ಸ್ಥಳೀಯರು ಇಬ್ಬರನ್ನು ಹತ್ತಿರದ ಕುಟ್ಟಿಯಾಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರೂ, ಯಾವುದೇ ಪ್ರಯೋಜನವಾಗಲಿಲ್ಲ.


ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೆತ್ನಾ)ದ ಹಲವಾರು ಶಿಬಿರಗಳಲ್ಲಿ ಹಾಗೂ ಸಾಹಸ ಯಾನಗಳಲ್ಲಿ ಜೀವನ್ ಶೆಟ್ಟಿ ಅವರು ಹೆಜ್ಜಿ ಹಾಕಿದರು. ಜೆತ್ನಾದ ಸಾಹಸ ಸಲಹೆಗಾರ ಕೀರ್ತಿ ಪಾಯಸ್ ಅವರು ಜೀವನ್ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದರು. ಕರ್ನಾಟಕ ಮಾತ್ರವಲ್ಲಿ ಭಾರತ ಕೂಡ ಉತ್ತಮ ಸಾಹಸ ಕ್ರೀಡಾಪಟುವೊಬ್ಬರನ್ನು ಕಳೆದುಕೊಂಡು ಅನಾಥವಾಗಿದೆ ಎಂದರು. ನವೀನ್ ಶೆಟ್ಟಿ ಜತೆಯಲ್ಲೇ ಹಲವಾರು ವರ್ಷಗಳಿಂದ ರೆಸ್ಕ್ಯೂ ತಂಡದಲ್ಲಿದ್ದು,  ಸಾಹಸಿ ಶಬ್ಬೀರ್ ಕೂಡ ಗೆಳೆಯನ ಅಗಲುವಿಕೆಯಿಂದ ನೊಂದಿದ್ದಾರೆ. ‘ನವೀನ್ ಬ್ರದರ್ ಇಲ್ಲದೆ ನಮ್ಮ ಯಾವುದೇ ರಕ್ಷಣಾ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಎಲ್ಲರಿಗೂ ಎಚ್ಚರಿಕೆ ಕ್ರಮಗಳ ಬಗ್ಗೆ ಚಾಚೂ ತಪ್ಪದೆ ಹೇಳುವ ಅವರ ಅಗಲುವಿಕೆ ನಿಜವಾಗಿಯೂ ನಮ್ಮನ್ನು ಅತಂತ್ರಗೊಸಿಳಿದೆ. ‘ ಎಂದರು.

Related Articles