ಸ್ಪೋರ್ಟ್ಸ್ ಮೇಲ್ ವರದಿ
ಸಾಂಪ್ರದಾಯಿಕ ಕ್ರೀಡೆ ಕುಸ್ತಿಯನ್ನು ಉಸಿರಾಗಿಸಿಕೊಂಡಿರುವ ಧಾರವಾಡದಲ್ಲಿ ಫೆಬ್ರವರಿ 22, 23, 24 ಮತ್ತು 25ರಂದು ಸುಮಾರು 2 ಕೋಟಿ ರೂ, ವೆಚ್ಚದಲ್ಲಿ 2ನೇ ಕರ್ನಾಟಕ ಕುಸ್ತಿ ಹಬ್ಬ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೆರವಿನಿಂದ ಇಲ್ಲಿನ ಕರ್ನಾಟಕ ಕಾಲೇಜು ಅಂಗಣದಲ್ಲಿ ನಡೆಯಲಿದೆ.
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಮುಂದಾಳತ್ವದಲ್ಲಿ ನಡೆಯಲಿರುವ ಈ ಕುಸ್ತಿ ಹಬ್ಬದಲ್ಲಿ ಬಾಲಕೇಸರಿ (ಎರಡು ವಿಭಾಗ), ಕರ್ನಾಟಕ ಕಿಶೋರ, ಕರ್ನಾಟಕ ಕಿಶೋರಿ, ಕರ್ನಾಟಕ ಕೇಸರಿ, ಕರ್ನಾಟಕ ಮಹಿಳಾ ಕೇಸರಿ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ.
16,65,000 ನಗದು ಬಹುಮಾನ!
14 ವರ್ಷ ವಯೋಮಿತಿಯ 52 ಕೆಜಿ ವಿಭಾಗದ ಬಾಲಕರಿಗೆ ಕರ್ನಾಟಕ ಬಾಲ ಕೇಸರಿ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 50,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 35,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 12,500 ರೂ. ನಗದು ಬಹುಮಾನ ನೀಡಲಾಗುವುದು.
14 ವರ್ಷ ವಯೋಮಿತಿಯ 46 ಕೆಜಿ ವಿಭಾಗದ ಬಾಲಕಿಯರಿಗೆ ಕರ್ನಾಟಕ ಬಾಲ ಕೇಸರಿ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 50,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 35,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 12,500 ರೂ. ನಗದು ಬಹುಮಾನ ನೀಡಲಾಗುವುದು.
17 ವರ್ಷ ವಯೋಮಿತಿಯ 60 ಕೆಜಿ ವಿಭಾಗದ ಬಾಲಕರಿಗೆ ಕರ್ನಾಟಕ ಕಿಶೋರ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 75,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 50,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 25,000 ರೂ. ನಗದು ಬಹುಮಾನ ನೀಡಲಾಗುವುದು.
17 ವರ್ಷ ವಯೋಮಿತಿಯ 53 ಕೆಜಿ ವಿಭಾಗದ ಬಾಲಕಿಯರಿಗೆ ಕರ್ನಾಟಕ ಕಿಶೋರಿ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 75,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 50,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 25,000 ರೂ. ನಗದು ಬಹುಮಾನ ನೀಡಲಾಗುವುದು.
86 ಕೆಜಿ ಯಿಂದ 125 ಕೆಜಿ ತೂಕ ಹೊಂದಿರುವ ಪುರುಷರಿಗಾಗಿ ಕರ್ನಾಟಕ ಕೇಸರಿ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 3,50,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 1,50,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 1,00,000 ರೂ. ನಗದು ಬಹುಮಾನ ನೀಡಲಾಗುವುದು.
59 ಕೆಜಿ ಯಿಂದ 76 ಕೆಜಿ ತೂಕ ಹೊಂದಿರುವ ಮಹಿಳೆಯರಿಗಾಗಿ ಮಹಿಳಾ ಕರ್ನಾಟಕ ಕೇಸರಿ ಸ್ಪರ್ಧೆ ನಡೆಯಲಿದ್ದು, ಮೊದಲ ಸ್ಥಾನ ಗಳಿಸುವವರಿಗೆ ರೂ. 1,50,000 ನಗದು, ದ್ವಿತೀಯ ಸ್ಥಾನ ಗಳಿಸುವವರಿಗೆ ರೂ, 1.00,000 ಹಾಗೂ ತೃತೀಯ ಸ್ಥಾನ ಗಳಿಸುವ ಇಬ್ಬರಿಗೆ ತಲಾ 75,000 ರೂ. ನಗದು ಬಹುಮಾನ ನೀಡಲಾಗುವುದು.
ನಾಡಾದಿಂದ ಪರೀಕ್ಷೆ
ಆರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರನ್ನು ಉದ್ದೀಪನಾ ಮದ್ದು ಪರೀಕ್ಷೆಗೆ ಗುರಿ ಪಡಿಸಲಾಗುವುದು, ಅಲ್ಲಿಯ ವರದಿ ಬಂದ ನಂತರವೇ ನಗದು ಬಹುಮಾನ ಮತ್ತು ಬೆಳ್ಳಿ ಗದೆಯನ್ನು ನೀಡಲಾಗುವುದು. ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಇರುತ್ತದೆ, ಕುಸ್ತಿಪಟುಗಳ ದೇಹದ ತೂಕವನ್ನು 22-02-2020ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ತೆಗೆದುಕೊಳ್ಳಲಾಗುವುದು. ಇದು ಮುಕ್ತ ಸ್ಪರ್ಧೆಯಾದ ಕಾರಣ ಆಯಾ ಜಿಲ್ಲೆಗಳಿಂದ ನೇರವಾಗಿ ಬಂದು ಪಾಲ್ಗೊಳ್ಳಬಹುದು. ಇದು ಮಣ್ಣಿನ ಮೇಲೆ ನಡೆಯುವ ಸ್ಪರ್ಧೆಯಾಗಿದ್ದು, ಕರ್ನಾಟಕದ ಕುಸ್ತಿಪಟುಗಳಿಗೆ ಮಾತ್ರ ಅವಕಾಶ ಇರುತ್ತದೆ. ಭಾಗವಹಿಸುವ ಕುಸ್ತಿಪಟುಗಳಿಗೆ ಪ್ರಯಾಣದ ಭತ್ಯೆ, ವಸತಿ ಮತ್ತು ಊಟೋಪಚಾರಗಳನ್ನು ನೀಡಲಾಗುವುದು.
22-02-2020 ರಂದು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೇಂದ್ರ ಬಸ್ಸು ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಿಂದ ಕರ್ನಾಟಕ ಕಾಲೇಜು ಮೈದಾನಕ್ಕೆ ಬಸ್ಸಿನ ಸೌಕರ್ಯ ಮಾಡಲಾಗಿದೆ. ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಧಾರವಾಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘ, ಧಾರವಾಡ ಜಿಲ್ಲಾ ಭಾರತೀಯ ಶೈಲಿಯ ಕುಸ್ತಿ ಸಂಘದ ಸಹಯೋಗದಲ್ಲಿ 2ನೇ ಕರ್ನಾಟಕ ಕುಸ್ತಿ ಹಬ್ಬ ನಡೆಯುತ್ತಿದೆ.
ಹೆಚ್ಚಿನ ವಿವರಗಳಿಗೆ 9448590935, 9964245769, 7892042714, 9481966245 ದೂರವಾಣಿ ಮೂಲಕ ಸಂಪರ್ಕಿಸಬಹುದು.