ಉಡುಪಿ:
ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಮಾಜಿ ಆಟಗಾರ, ಕ್ರೀಡಾ ಪ್ರೋತ್ಸಾಹಕ, ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಇದರ ಅಧ್ಯಕ್ಷರಾಗಿರುವ ಗೌತಮ್ ಶೆಟ್ಟಿ ಕುಂದಾಪುರ ಅವರು ಆಯ್ಕೆಯಾಗಿದ್ದಾರೆ.
ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳನ್ನು ಆಯೋಜಿಸಿ ಕ್ರೀಡೆಗೆ ತನ್ನದೇ ಆದ ಪ್ರೋತ್ಸಾಹ ನೀಡುತ್ತಿರುವ ಗೌತಮ್ ಶೆಟ್ಟಿ ಅವರು ಹಿಂದೆ ಜಿಲ್ಲೆಯ ಪ್ರತಿಷ್ಠಿತ ಟಾರ್ಪೆಡೋಸ್ ಕ್ರಿಕೆಟ್ ಕ್ಲಬ್ ನ ಆಟಗಾರರಾಗಿ, ನಾಯಕರಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದವರು. ಈಗಲೂ ಕ್ರಿಕೆಟ್ ಮಾತ್ರವಲ್ಲದೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ಹಲವಾರು ಟೂರ್ನಿಗಳನ್ನು ಆಯೋಜಿಸಿರುತ್ತಾರೆ. ಜಿಲ್ಲೆಯಲ್ಲಿ ನಡೆಯುವ ಇತರ ಕ್ರೀಡಾಕೂಟಗಳಿಗೂ ತನ್ನಿಂದಾದ ನೆರವನ್ನು ನೀಡುತ್ತಿದ್ದಾರೆ.
ಮಣಿಪಾಲದ ಡಾ, ವಿನೋದ್ ನಾಯಕ್ ಅವರು ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು:
ಗೌರವ ಅಧ್ಯಕ್ಷರು: ಶರತ್ ಶೆಟ್ಟಿ ಪಡುಬಿದ್ರಿ, ಶ್ರೀಪಾದ್ ಉಪಾಧ್ಯ, ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ, ದಯಾನಂದ ಬಂಗೇರ, ಉದಯ್ ಕಟಪಾಡಿ, ಗಿರೀಶ್ ಬೈಂದೂರು.
ಅಧ್ಯಕ್ಷರು: ಗೌತಮ್ ಶೆಟ್ಟಿ ಕುಂದಾಪುರ.
ಉಪಾಧ್ಯಕ್ಷರು: ಉದಯ್ ಕಿನ್ನಿಮೂಲ್ಕಿ, ಅಮರನಾಥ್ ಭಟ್ ಉಡುಪಿ, ಜಗದೀಶ್ ಕಾಮತ್ ಕಟಪಾಡಿ, ಸಫ್ತಾರ್ ಶಿರ್ವಾ, ನಾರಾಯಣ ಶೆಟ್ಟಿ ಕುಂದಾಪುರ. ಪ್ರವೀಣ್ ಕುಮಾರ್ ಬೈಲೂರು.
ಕಾರ್ಯದರ್ಶಿ: ಡಾ, ವಿನೋದ್ ನಾಯಕ್ ಮಣಿಪಾಲ.
ಜೊತೆ ಕಾರ್ಯದರ್ಶಿ: ಚೇತನ್ ದೇವಾಡಿಗ, ಉಡುಪಿ.
ಸಲಹೆಗಾರರು: ಅಜಿತ್ ಕೋಟ
ಖಜಾಂಚಿ: ಪ್ರವೀಣ್ ಕುಮಾರ್ ಪಿತ್ರೋಡಿ.
ಟೂರ್ನಮೆಂಟ್ ಸಮಿತಿ: ಯಾದವ್ ನಾಯ್ಕ್, ರಮೇಶ್ ಶೇರಿಗಾರ್, ಶ್ರೀಧರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಜಾನ್ ಪ್ರೇಮ್ ಕುಮಾರ್, ಮೋಹನ್ ಅಮ್ಮಣ್ಣ. ಸದಾನಂದ ಶಿರ್ವ. ಇಬ್ರಾಹಿಂ ಅತ್ರಾಡಿ.
ನಿರ್ದೇಶಕರ ಮಂಡಳಿ: ಸಚಿಂದ್ರ ಶೆಟ್ಟಿ, ಮನೋಜ್ ನಾಯರ್, ಪ್ರದೀಪ್ ವಾಜ್, ಪ್ರೇಮೇಂದ್ರ ಶೆಟ್ಟಿ, ಸಂದೇಶ್ ಪರ್ಕಳ, ಸುಭಾಶ್ ಕಾಮತ್, ದಿನೇಶ್ ಬೈಂದೂರು, ಕೆ.ಪಿ. ಸತೀಶ್, ಸತೀಶ್ ಕೋಟ್ಯಾನ್, ನಿತಿನ್ ಮೂಲ್ಕಿ, ಕಿರಣ್ ಶೆಟ್ಟಿ, ಬಾಲಕೃಷ್ಣ ಪರ್ಕಳ, ರಂಜಿತ್ ಶೆಟ್ಟಿ, ವಿಷ್ಣುಮೂರ್ತಿ, ಭಾಸ್ಕರ್ ಆಚಾರ್ಯ, ಉಮೇಶ್ ಬ್ರಹ್ಮಗಿರಿ, ಪ್ರವೀಣ್ ಕೊರೆ, ರಾಜೇಶ್ ಆಚಾರ್ಯ, ಕಿಶೋರ್ ಸನ್ನಿ. ನಾರಾಯಣ ಬೈಂದೂರು. ಪ್ರಸನ್ನ ಆಚಾರ್.
ಸಂಸ್ಥೆಯ ಉದ್ದೇಶ:
** ಉಡುಪಿ ಜಿಲ್ಲೆಯಲ್ಲಿರುವಷ್ಟು ಟೆನಿಸ್ ಬಾಲ್ ತಂಡಗಳು ರಾಜ್ಯದ ಬೇರೆಡೆ ಎಲ್ಲಿಯೂ ಇದ್ದಂತಿಲ್ಲ. ಇಲ್ಲಿ ಕೊರೋನಾ ಇಲ್ಲದೆ ಇರುತ್ತಿರೆ ನಿತ್ಯವೂ ಕ್ರಿಕೆಟ್ ಹಬ್ಬ. ಲೆದರ್ ಬಾಲ್ ಕ್ರಿಕೆಟ್ ಆಡಬೇಕಾದರೆ ಮೊದಲ ಮೆಟ್ಟಿಲೇ ಟೆನಿಸ್ ಬಾಲ್. ಈಗಲೂ ಪ್ರತಿಯೊಂದು ರಾಷ್ಟ್ರದ ತಂಡಗಳ ಅಭ್ಯಾಸದಲ್ಲಿ ಟೆನಿಸ್ ಬಾಲ್ ಅಭ್ಯಾಸವೂ ಒಂದು ಭಾಗವಾಗಿದೆ. ಆದ್ದರಿಂದ ಟೆನಿಸ್ ಬಾಲ್ ಕ್ರಿಕೆಟ್ ಗೆ ಒಂದು ಉತ್ತಮ ವೇದಿಕೆ ಕಲ್ಪಸಬೇಕೆಂಬುದೇ ಸಂಸ್ಥೆಯ ಉದ್ದೇಶವಾಗಿದೆ.
** ಟೂರ್ನಿಗಳು ಶಿಸ್ತಿನಲ್ಲಿ ನಡೆಯಬೇಕು. ಆಟದಲ್ಲಿ ವೃತ್ತಿಪರತೆ ಹುಟ್ಟು ಹಾಕುವುದು. ಟೆನಿಸ್ ಬಾಲ್ ಕ್ರಿಕೆಟಿಗರಿಗೆ ಅಗತ್ಯವಿರುವ ಸೌಲಭ್ಯ, ಗ್ರಾಮೀಣ ಪ್ರದೇಶದ ತಂಡಗಳಿಗೆ ಪ್ರಾಯೋಜತ್ವ, ಕಿಟ್ ಒದಗಿಸುವುದು, ಮೂಲಭೂತ ಸೌಕರ್ಯ ಕಲ್ಪಿಸುವುದು ಕೂಡ ಸಂಸ್ಥೆಯ ಉದ್ದೇಶವಾಗಿದೆ.
** ಟೂರ್ನಿಗಳ ನಡೆಸಲು ಉತ್ತೇಜನ ನೀಡುವುದು. ಗ್ರಾಮೀಣ ಪ್ರದೇಶಗಳಲ್ಲಿ ಟೂರ್ನಿಗಳು ಉತ್ತಮ ರೀತಿಯಲ್ಲಿ, ಶಿಸ್ತಿನಲ್ಲಿ ನಡೆಸಲು ಸಹಾಯ ಮಾಡುವುದು. ಜಿಲ್ಲೆಯ ತಂಡಗಳನ್ನು ಒಂದೇ ವೇದಿಕೆಯಡಿ ತಂದು ಟೂರ್ನಿಗಳ ನಡೆಸಲು ನೆರವಾಗುವುದು. ತಂಡಗಳು ಮತ್ತು ಆಟಗಾರರನ್ನು ನೋಂದಾಯಿಸುವುದು. ಪ್ರತಿಯೊಂದು ಟೂರ್ನಿಯೂ ಒಂದು ನಿಯಮಕ್ಕನುಗುಣವಾಗಿ ನಡೆಸುವುದು.
* ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಪಳಗಿದ ಯುವ ಪ್ರತಿಭೆಗಳಿಗೆ ಲೆದರ್ ಬಾಲ್ ಕ್ರಿಕೆಟ್ ನಲ್ಲೂ ಅವಕಾಶ ಸಿಗುವ ಬಗ್ಗೆ ವಿವಿಧ ಕ್ಲಬ್ ಗಳ ಜತೆ ಸಂಪರ್ಕ ಕಲ್ಪಿಸುವುದು.
*
ಜಿಲ್ಲೆಯಲ್ಲಿರುವ ಎಲ್ಲ ಟೆನಿಸ್ ಬಾಲ್ ಕ್ರಿಕೆಟ್ ಸಂಸ್ಥೆಗಳು ಮತ್ತು ಕ್ಲಬ್ ಗಳನ್ನು ಒಂದೇ ವೇದಿಕೆಯಲ್ಲಿ ತರುವುದು. ಅವುಗಳನ್ನು ನಿರ್ವಹಣೆಯನ್ನು ನೋಡಿಕೊಳ್ಳುವುದು. ಅಭಿಪ್ರಾಯ ಸಂಗ್ರಹಿಸಿ ನಿಯಮಗಳನ್ನು ರೂಪಿಸುವುದು.