sportsmail
ಹಿರಿಯ ಬ್ಯಾಡ್ಮಿಂಟನ್ ತಾರೆ, ಕ್ರೀಡಾ ಪ್ರೋತ್ಸಾಹಕ ಸ್ಪೋರ್ಟ್ಸ್ ಡೆನ್‌ನ ಗಣೇಶ್ ಕಾಮತ್ ಅವರ ಮುಂದಾಳತ್ವದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 238ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಚಾಂಪಿಯನ್ಷಿಪ್ ಯಶಸ್ವಿಯಾಯಿತು.
2017ರಿಂದ ಮಂಗಳೂರು ವಿಭಾಗದಲ್ಲಿ ಸತತ ಬ್ಯಾಡ್ಮಿಂಟನ್ ಟೂರ್ನಿಗಳನ್ನು ಆಯೋಜಿಸಿಕೊಂಡು ಬಂದಿರುವ ಗಣೇಶ್ ಕಾಮತ್ ಇದುವರೆಗೂ 25 ರಾಜ್ಯಮಟ್ಟದ ಟೂರ್ನಿಗಳನ್ನು ಆಯೋಜಿಸಿದ್ದಾರೆ. ಪ್ರಾಯೋಜಕರ ಕೊರತೆಯ ನಡುವೆಯೂ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಗಣೇಶ್ ಕಾಮತ್ ಅವರ ಕ್ರೀಡಾ ಸ್ಫೂರ್ತಿ ಇತರರಿಗೆ ಮಾದರಿ.
ವಿವಿಧ ವಿಭಾಗಗಳಲ್ಲಿ ವಿಜೇತರಿಗೆ 5,000 ರೂ ಮೌಲ್ಯದ ಬ್ಯಾಡ್ಮಿಂಟನ್ ರಾಕೆಟ್ ಅನ್ನು ಬಹುಮಾನವಾಗಿ ನೀಡಲಾಯಿತು. ರನ್ನರ್ ಅಪ್ ಸ್ಥಾನ ಪಡೆದವರಿಗೆ 3,000ರೂ. ಬೆಲೆಯ ಬ್ಯಾಡ್ಮಿಂಟನ್ ರಾಕೆಟ್‌ಅನ್ನು ಬಹುಮಾನವಾಗಿ ನೀಡಲಾಯಿತು. ಪ್ರತಿಯೊಬ್ಬ ಆಟಗಾರರಿಗೂ ಪ್ಲೇಯಿಂಗ್ ಜರ್ಸಿ ನೀಡಲಾಗಿತ್ತು. ಮಂಗಳೂರಿನ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಚಾಂಪಿಯನ್ಷಿಪ್‌ನಲ್ಲಿ ಉತ್ತಮ ಗುಣಮಟ್ಟದ ಯೊನೆಕ್ಸ್ ಮಾವಿಸ್350 ನೈಲಾನ್ ಶೆಟ್ಲ್ ಬಳಸಲಾಗಿತ್ತು.
11, 13, 15 ಮತ್ತು 17 ವರ್ಷ ವಯೋಮಿತಿಯಲ್ಲಿ ನಡೆದ ಈ ಚಾಂಪಿಯನ್ಷಿಪ್‌ನ ಉದ್ಘಾಟನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿʼಸೋಜ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ, ಕುಳಾಯಿ ಫೌಂಡೇಷನ್‌ನ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಮಂಗಳೂರು ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ್ ಹೆಗ್ಡೆ ಮತ್ತು ಮಂಗಳ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಕಾರ್ಯದರ್ಶಿ ಶಿವಪ್ರಸಾದ್ ಪ್ರಭು ಕಾರ್ಯಕ್ರಮದ ಗಣ್ಯರಾಗಿದ್ದರು.
ಫಲಿತಾಂಶ:
11ವರ್ಷ ವಯೋಮಿತಿಯ ಬಾಲಕಿಯರು:
ಚಾರ್ವಿ ಪ್ರಥಮ, ತಿನಾ ವೇಗಸ್ ದ್ವಿತೀಯ.
11 ವರ್ಷ ವಯೋಮಿತಿಯ ಬಾಲಕರು:
ಅದಿತಿ ಪ್ರಥಮ, ಎಲ್ಡನ್ ಪಿಂಟೋ ಉಡುಪಿ, ದ್ವಿತೀಯ.
13 ವರ್ಷ ವಯೋಮಿತಿಯ ಬಾಲಕರ ವಿಭಾಗ:
ಸ್ವಸ್ಥಿಕ್ ಪ್ರಭು, ಮಂಗಳೂರು, ಪ್ರಥಮ,
ಯದುನಂದನ್, ಚಿಕ್ಕಮಗಳೂರು, ದ್ವಿತೀಯ.
13 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ:
ಅದಿತಿ ಪ್ರಥಮ, ಖಾಶ್ವಿ ದ್ವಿತೀಯ.
15 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ:
ಅದಿತಿ ಪ್ರಥಮ, ಸಂಜನಾಪ್ರಸಾದ್ ಕಾಸರಗೋಡು, ದ್ವಿತೀಯ.
15 ವರ್ಷ ವಯೋಮಿತಿಯ ಬಾಲಕರ ವಿಭಾಗ:
ಕ್ಷಿತಿಜ್ ದೀಪಕ್ ಉಡುಪಿ ಪ್ರಥಮ, ಪ್ರಥಮ್ ನಾಯಕ್ ದ್ವಿತೀಯ.
17 ವರ್ಷ ವಯೋಮಿತಿಯ ಬಾಲಕರ ವಿಭಾಗ:
ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ ಪ್ರಥಮ, ಪ್ರಥಮ್ ನಾಯಕ್ ದ್ವಿತೀಯ.
17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗ:
ತ್ರಿವ್ಯಾ ವೇಗಸ್ ಪ್ರಥಮ, ನಿಧಿ ವಿಠಲ್ ದ್ವಿತೀಯ,
ಪುರುಷರ ಮುಕ್ತ ವಿಭಾಗ ಡಬಲ್ಸ್:
ಪವನ್ ಮತ್ತು ಯಜ್ಞೇಶ್ ಜೋಡಿ ಪ್ರಥಮ.
ಸುಹಾಗ್ ಮತ್ತು ಆರುಶ್ ಪತ್ರಾವೋ ಜೋಡಿ ದ್ವಿತೀಯ.