Friday, November 22, 2024

ಮಿಲಾಗ್ರಿಸ್‌ ಕಾಲೇಜು ಕಬಡ್ಡಿ ತಂಡದ ಜೆರ್ಸಿ ಬಿಡುಗಡೆ

 sportsmail:

ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಮಿಲಾಗ್ರಿಸ್‌ ಸ್ಪೋರ್ಟ್ಸ್‌ ಅಕಾಡೆಮಿಯ ಕಬಡ್ಡಿ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ನಡೆಯಿತು.

ಪ್ಲಾನೆಟ್‌ ಮಾರ್ಸ್‌ ಅವರ ಪ್ರಾಯೋಜಕತ್ವದಲ್ಲಿ ಈ ಜೆರ್ಸಿಯನ್ನು ನೀಡಲಾಯಿತು.

ಕಾಲೇಜಿನ 1988ನೇ ಬ್ಯಾಚ್‌ನ ವಿದ್ಯಾರ್ಥಿ ರಾಜ್‌ ಬೆಂಗ್ರೆ ಅವರು ಅಕಾಡೆಮಿಯ ಕ್ರೀಡಾ ಅಭಿವೃದ್ಧಿಗೆ ಸುಮಾರು 8 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದು, ಆ ಮೂಲಕ ಅಕಾಡೆಮಿಯ ಕ್ರೀಡಾ ಚಟುವಟಿಕೆಗಳು ಸಾಂಗವಾಗಿ ನಡೆಯುತ್ತಿವೆ.

ವಾಲಿಬಾಲ್‌, ಅಥ್ಲೆಟಿಕ್ಸ್‌, ಕಬಡ್ಡಿ, ಕ್ರಿಕೆಟ್‌ ಮತ್ತು ಟೇಬಲ್‌ ಟೆನ್ನಿಸ್‌ ಕ್ರೀಡೆಯಲ್ಲಿ ಕಾಲೇಜಿನ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ. ರಾಜ್ಯ ಮಟ್ಟದ ನುರಿತ ತರಬೇತುದಾರರನ್ನು ನಿಯೋಜಿಸಿ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತಿದೆ. ರಾಜ್‌ ಬೆಂಗ್ರೆ ಅವರ ಈ ಸೇವೆಗೆ ಕಾಲೇಜು ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿಗಳು ಚಿರ ಋಣಿಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ, ವಿನ್ಸೆಂಟ್‌ ಆಳ್ವಾ ಅವರು ತಿಳಿಸಿದ್ದಾರೆ.

ರಾಜ್‌ ಬೆಂಗ್ರೆ ಅವರು ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಈಗ ವಿದೇಶದಲ್ಲಿ ನೆಲೆಸಿದ್ದರೂ ಕಾಲೇಜಿನ ಕ್ರೀಡಾ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.

ಕಾಲೇಜಿನ ಕ್ರೀಡಾಚಟುವಟಿಕೆಗಳು ಮಿಲಾಗ್ರಿಸ್‌ ಕಾಲೇಜಿನ ಸಂಚಾಲಕರಾದ ಅತಿ ವಂದನೀಯ ವಲೇರಿಯನ್‌ ಮೆಂಡೊನ್ಸಾ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಿಖಿಲ್‌ ಡಿʼಸೋಜಾ ಅವರ ನೇತೃತ್ವದಲ್ಲಿ ಅಥ್ಲೆಟಿಕ್ಸ್‌ ಕೋಚ್‌ ಕಿಶೋರ್‌, ಕಬಡ್ಡಿ ಕೋಚ್‌ ಸುಮನ್‌, ಟೇಬಲ್‌ ಟೆನ್ನಿಸ್‌ಲ್ಲಿನ ಅಶ್ವಿನ್‌ ಕುಮಾರ್‌ ಪಡುಕೋಣೆ, ವಾಲಿಬಾಲ್‌ ಕೋಚ್‌ ಮನೋಜ್‌ ಕುಮಾರ್‌ ಮತ್ತು ಕ್ರಿಕೆಟ್‌ನಲ್ಲಿ ಮಿತುನ್‌ ಸತೀಶ್‌ ಮತ್ತು ಸುಶಾಂತ್‌ ಮೆಂಡನ್‌ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ.

Related Articles