ಬೆಂಗಳೂರು: ಕರ್ನಾಟಕ ಮಿನಿ ಒಲಿಂಪಿಕ್ಸ್‌ನ ಎರಡನೇ ದಿನದ ಸ್ಪರ್ಧೆಯಲ್ಲಿ ಸೈಕ್ಲಿಂಗ್ ವಿಭಾಗದ ಬಾಲಕರ ವೈಯಕ್ತಿಕ 10 ಕಿ.ಮೀ. ಟೈಮ್ ಟ್ರಯಲ್ ವಿಭಾಗದಲ್ಲಿ ತರುಣ್ ವಿಠಲ್ ನಾಯಕ್ 13 ನಿಮಿಷ 02:968 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಎಲ್ಲೇಶ್ ಹುದದ್ ಬೆಳ್ಳಿ ಹಾಗೂ ಮಹೇಶ್ ಬಡಿಗೇರ್ ಕಂಚಿನ ಪದಕ ಗೆದ್ದರು.
ಬಾಲಕಿಯರ 10 ಕಿ.ಮೀ. ವೈಯಕ್ತಿಕ ಟೈಮ್ ಟ್ರಯನ್ ವಿಭಾಗದಲ್ಲಿ ದೀಪಿಕಾ ಸಂಜೀವ್ ಫಡತರೆ 15 ನಿಮಿಷ 4.099 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. 15 ನಿಮಿಷ 11.671 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಕೋಕಿಲ ಚವಾಣ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ವೇಟ್‌ಲಿಫ್ಟಿಂಗ್: 49 ಕೆಜಿ ವಿಭಾಗದ ಬಾಲಕಿಯರ ವೇಟ್‌ಲಿಫ್ಟಿಂಗ್‌ನಲ್ಲಿ ಸಮೀಕ್ಷಾ ಮನ್‌ಮೊದೆ 64ಕೆಜಿ ಭಾರವೆತ್ತಿ ಚಿನ್ನದ ಪದಕ ಗೆದ್ದರು. 60 ಕೆಜಿ ಭಾರವೆತ್ತಿದ ಹಿತೈಶಿನಿ ಬೆಳ್ಳಿ ಗೆದ್ದರು. ಶ್ರೇಯಾ 58 ಕೆಜಿ ಭಾರವೆತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.
55 ಕೆಜಿ ಬಾಲಕಿಯರ ವಿಭಾಗದಲ್ಲಿ ಸಿಂಚನ 89 ಕೆಜಿ ಭಾರವೆತ್ತಿ, ಚಿನ್ನ ಗೆದ್ದರೆ, ಸಾನ್ವಿ ಆನಂದ್ 54 ಕೆಜಿ ಭಾರ ಎತ್ತುವುದರೊಂದಿಗೆ ಬೆಳ್ಳಿ ಗೆದ್ದರು. ಅನುಸಯಾ 51 ಕೆಜಿ ಭಾರವೆತ್ತಿ ಕಂಚಿನ ಪದಕ ಗೆದ್ದರು. ಬಾಲಕಿಯರ 81 ಕೆಜಿ ವಿಭಾಗದಲ್ಲಿ ಹಿಮಾಗೌರಿ ಜಾಮ್ದಾರ್, 52 ಕೆಜಿಯ ಸಾಧನೆ ಮಾಡಿ ಚಿನ್ನ ಗೆದ್ದರು. 38 ಕೆಜಿ ಭಾರವೆತ್ತಿದ ಶ್ರೇಯಾಶ್ರೀ ಬೆಳ್ಳಿ ಹಾಗೂ 38 ಕೆಜಿ ಭಾರವೆತ್ತಿದ ಸಾನಿಕಾ ಎಸ್. ಕಂಚಿನ ಪದಕ ಗಳಿಸಿದರು.
ಬಾಲಕಿಯರ 45ಕೆಜಿ ವಿಭಾಗದಲ್ಲಿ ಸೃಷ್ಟಿ ಸುನಿಲ್ ಮುತಗೇಕರ್ 58 ಕೆಜಿ ಭಾರವೆತ್ತಿ ಚಿನ್ನ ಗೆದ್ದರು. ದಕ್ಷಾ ಶೆಟ್ಟಿ ಹಾಗೂ ಸಂಜನಾ ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.