Friday, November 22, 2024

‘ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್’ ಪ್ರಾರಂಭಿಸಿದ ಹೀರೋ ಮೋಟೋಕಾರ್ಪ್

ಬೆಂಗಳೂರು: ತನ್ನ ಗ್ರಾಹಕ-ಕೇಂದ್ರಿತ ದೃಷ್ಟಿಕೋನ ಮತ್ತು ದೇಶದ ಯುವಜನತೆಗೆ ಸೂಕ್ತವಾದ ವೇದಿಕೆ ಒದಗಿಸುವ ಗುರಿಯೊಂದಿಗೆ, ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಹಾಗೂ ಸ್ಕೂಟರ್ ಗಳ ಉತ್ಪಾದನಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ಇಂದು ಒಇಎಮ್(ಮೂಲ ಸಾಧನ ಉತ್ಪಾದಕ)ಸಂಸ್ಥೆಯು ನಡೆಸಿಕೊಟ್ಟ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಪ್ರಪ್ರಥಮ ಭಾರತದಾದ್ಯಂತದ ಪ್ರತಿಭಾ ಶೋಧ ‘ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್’(HDBC)ಅನ್ನು ಘೋಷಿಸಿತು.

‘ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್, ತಮ್ಮ ಆಫ್-ರೋಡ್ ರೇಸಿಂಗ್ ಉತ್ಕಟತೆಯನ್ನು ಪೂರೈಸಿಕೊಳ್ಳಬೇಕೆಂದಿರುವ ಮತ್ತು ಈ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಇಚ್ಛಿಸುವ ವಿಕಸನಗೊಳ್ಳುತ್ತಿರುವ ರೈಡರ್ ಗಳು, ಉತ್ಸಾಹಿಗಳು ಹಾಗೂ ಅಮೆಚೂರ್ ಗಳಿಗೆ (ಹವ್ಯಾಸೀ ಸವಾರರು)ಅತ್ಯಂತ ನಿರೀಕ್ಷಿತ ವೇದಿಕೆಯನ್ನು ಒದಗಿಸುವ ಗುರಿ ಹೊಂದಿದೆ.

ದೇಶದ ಮೂಲೆಮೂಲೆಯನ್ನು ತಲುಪುವ ಮೂಲಕ ನಿಜವಾಗಿಯು ಭಾರತದಾದ್ಯಂತದ ಕಾರ್ಯಕ್ರಮವನ್ನಾಗಿ ಮಾಡಬೇಕೆಂದಿರುವ HDBC,  ಭಾರತದ ಅಗ್ರಮಾನ್ಯ ಆಫ್-ರೋಡ್ ಸವಾರರನ್ನು ಶೋಧಿಸಲು ಸುಮಾರು 45 ನಗರಗಳನ್ನು ತಲುಪಲಿದೆ. ವಿಜೇತರು ಹಾಗೂ ಇಬ್ಬರು ರನ್ನರ್-ಅಪ್‍ಗಳು ಸುಪ್ರಸಿದ್ಧವಾದ ಹೀರೋ XPULSE 200 4V ಮೋಟಾರುಸೈಕಲ್ ಮತ್ತು ಹೀರೋ ಮೋಟೋಕಾರ್ಪ್‍ನಿಂದ ರೂ. 20 ಲಕ್ಷ ಮೌಲ್ಯದ ಪ್ರಾಯೋಜಕತ್ವದ ಒಪ್ಪಂದವನ್ನು ಪಡೆಯುವರು.

ಈ ಸಂದರ್ಭದಲ್ಲಿ ಮಾತನಾಡಿದ ಹೀರೋ ಮೋಟೋಕಾರ್ಪ್‍ನ ಚೀಫ್ ಗ್ರೋತ್ ಆಫಿಸರ್(ಸಿಜಿಒ) ರಂಜೀವ್‍ಜಿತ್ ಸಿಂಗ್, “ಹೀರೋ ಮೋಟೋಕಾರ್ಪ್‍ನ ರ್‍ಯಾಲಿ ರೇಸಿಂಗ್ ತಂಡವಾದ ಹೀರೋ ಮೋಟೋಸ್ಪೋರ್ಟ್ಸ್ ತಂಡ ರ್‍ಯಾಲಿಯು, ಅಂತರರಾಷ್ಟ್ರೀಯ ರ್‍ಯಾಲಿ  ರೇಸಿಂಗ್‍ನಲ್ಲಿ ಭಾರತದ ಧ್ವಜಗ್ರಾಹಿಯಾಗಿದ್ದು(ಫ್ಲ್ಯಾಗ್-ಬೇರರ್) ಆಗಿದ್ದು HDBC ಮೂಲಕ ಈಗ ನಾವು ಆ ನೈಪುಣ್ಯತೆಯನ್ನು ಭಾರತದ ಯುವಜನತೆಗೆ ತರುತ್ತಿದ್ದೇವೆ. ಇದು ದೇಶದ ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಇನ್ನಷ್ಟು ವರ್ಧಿಸಲಿದೆ. ಹೀರೋ XPULSE 200 4V  ಮೋಟಾರುಸೈಕಲ್‍ನ ಕಾರಣದಿಂದಾಗಿ ಯುವಜನರು ಆಫ್-ರೋಡ್ ರೈಡಿಂಗ್‍ನ ತಮ್ಮ ಉತ್ಕಂಟತೆಯನ್ನು ಪೂರೈಸಿಕೊಳ್ಳುವುದಕ್ಕೆ ಅವಕಾಶವಾಗಿದೆ. ದೇಶದ ಈ ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಪ್ರಪ್ರಥಮ ಉಪಕ್ರಮವು ರೈಡಿಂಗ್ ಉತ್ಸಾಹಿಗಳಿಗೆ ಬಾಗಿಲು ತೆರೆದು ಭಾರತಕ್ಕೆ ಅದರ ಭವಿಷ್ಯತ್ತಿನ ಚಾಂಪಿಯನ್‍ಗಳನ್ನು ಒದಗಿಸುತ್ತದೆ ಎಂಬ ಭರವಸೆ ನನಗಿದೆ. ಎಲ್ಲಾ ಸ್ಪರ್ಧಿಗಳಿಗೂ ಒಳಿತಾಗಲಿ.”ಎಂದು ಹಾರೈಸಿದರು.

HDBCದಲ್ಲಿ ಪಾಲ್ಗೊಳ್ಳುವವರಿಗೆ, ಅಗ್ರಮಾನ್ಯವಾದ ಅಂತಾರಾಷ್ಟ್ರೀಯ ತಂಡಗಳ ಪೈಕಿ ಒಂದಾದ ಮತ್ತು ಡಾಕಾರ್ ರ್‍ಯಾಲಿಯಲ್ಲಿ ಪ್ರವೇಶಾವಕಾಶವನ್ನು ಗೆದ್ದ ಭಾರತದ ಏಕೈಕ ತಂಡವಾದ ಹೀರೋ ಮೋಟೋಸ್ಪೋರ್ಟ್ ಟೀಮ್ ರ್‍ಯಾಲಿಯಿಂದ ತರಬೇತಿ ಪಡೆದುಕೊಳ್ಳುವ ಸುವರ್ಣಾವಕಾಶ ದೊರಕಲಿದೆ. ಹೀರೋ ಮೋಟೋಸ್ಪೋರ್ಟ್ ಟೀಮ್ ರ್‍ಯಾಲಿ ಸವಾರರಾದ ರಾಸ್ ಬ್ರ್ಯಾಂಚ್, ಜೋಕಿಮ್ ರಾಡ್ರಿಗ್ಸ್, ಸೆಬಾಸ್ಟಿಯನ್ ಬೂಹ್ಲರ್, ಮತ್ತು ಫ್ರಾಂಕೋ ಕೈಮಿ ಅಗ್ರ ಸ್ಪರ್ಧಿಗಳೊಂದಿಗೆ ಕಾರ್ಯನಿರ್ವಹಿಸಿ ಅವರಿಗೆ ಅಮೂಲ್ಯವಾದ ತರಬೇತಿ ಒದಗಿಸಲಿದ್ದಾರೆ.

ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್‍ಗಾಗಿ ನೋಂದಣಿ ಮಾಡಿಕೊಳ್ಳಲು ಮತ್ತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲು ಆಸಕ್ತ ಸ್ಪರ್ಧಿಗಳು  www.hdbc.in  ಗೆ ಲಾಗ್‍ಆನ್ ಆಗಬಹುದು.

ಆನ್‍ಲೈನ್ ಅರ್ಜಿ ಸಲ್ಲಿಕೆಗಳನ್ನು ಸ್ಕ್ರೀನ್ ಮಾಡಿದ ನಂತರ, 45 ನಗರಗಳಲ್ಲಿ ಅನೇಕ ವಾರಾಂತ್ಯಗಳಲ್ಲಿ ಮೊದಲ ಸುತ್ತುಗಳನ್ನು ನಡೆಸಲಾಗುತ್ತದೆ ಮತ್ತು ಈ ಸುತ್ತಿನಲ್ಲಿ ಶಾರ್ಟ್‍ಲಿಸ್ಟ್ ಆದ ಸ್ಪರ್ಧಿಗಳು 18 ನಗರಗಳಲ್ಲಿ ನಡೆಯುವ ಪ್ರಾದೇಶಿಕ ಸುತ್ತುಗಳಲ್ಲಿ ಭಾಗವಹಿಸುತ್ತಾರೆ.

ಮೊದಲ 100 ಆಯ್ಕೇಯಾದ ಸ್ಪರ್ಧಿಗಳು ಐದು-ದಿನಗಳ ಪ್ರಾದೇಶಿಕ ಬೂಟ್‍ಕ್ಯಾಂಪ್‍ಗೆ ಹೋಗುತ್ತಾರೆ. ಅಲ್ಲಿ ಈ ಬಾರಿ ಅವರಿಗೆ ಸುಪ್ರಸಿದ್ಧ ಭಾರತೀಯ ರೈಡರ್ ಸಿಎಸ್ ಸಂತೋಷ್ ಅವರಿಂದ ತರಬೇತಿ ಪಡೆದುಕೊಳ್ಳುವ ಸುವರ್ಣಾವಕಾಶ ಸಿಗುತ್ತದೆ.

ಬೂಟ್‍ಕ್ಯಾಂಪ್ ರೇಸ್‍ನೊಂದಿಗೆ ಅಂತ್ಯಗೊಳ್ಳುತ್ತದೆ ಮತ್ತು ಮೊದಲ 20 ಸ್ಪರ್ಧಿಗಳು ಅಲ್ಲಿಂದ ಜೈಪುರದಲ್ಲಿರುವ ಹೀರೋ ಮೋಟೋಕಾರ್ಪ್‍ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿರುವ ವಿಶ್ವದರ್ಜೆಯ ಸೆಂಟರ್ ಫಾರ್ ಇನೋವೇಶನ್ ಟೆಕ್ನಾಲಜಿ(ಸಿಐಟಿ)ದಲ್ಲಿ ನಡೆಯುವ ಅಂತಿಮ ಸ್ಪರ್ಧೆಗಳಿಗೆ ಹೋಗುತ್ತಾರೆ.

ಸಿಐಟಿದಲ್ಲಿ ಅಚಿತಿಮವಾಗಿ ಪ್ರತಿಷ್ಠಿತ ಬಹುಮಾನ ವಿಜೇತರನ್ನು ಆಯ್ಕೆ ಮಾಡುವುದಕ್ಕಾಗಿ ನಡೆಯುವ ಅಂತಿಮ ರೇಸ್‍ಗೆ ಮುನ್ನ ಐದು ದಿನಗಳವರೆಗೆ ಅವರು ಹೀರೋ ಮೋಟೋಸ್ಪೋರ್ಟ್ ಟೀಮ್ ರ್‍ಯಾಲಿಯಿಂದ ತರಬೇತಿ ಮತ್ತು ಮಾರ್ಗದರ್ಶನ ಪಡೆದುಕೊಳ್ಳುತ್ತಾರೆ.

Related Articles