ಬೆಂಗಳೂರು, 31 ಜುಲೈ, 2022: ಪ್ರತಿಷ್ಠಿತ ಕೆಎಸ್ಸಿಎ ಶ್ರೀರಾಮ್ ಕ್ಯಾಪಿಟಲ್ಸ್ ಮಹಾರಾಜ ಟ್ರೋಫಿ ಟಿ20ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ರಾಜ್ಯದ ಉತ್ತಮ ಆಟಗಾರರನ್ನೊಳಗೊಂಡ ಆರು ತಂಡಗಳನ್ನು ಆಯ್ಕೆ ಮಾಡಿದ್ದು, ಆಗಸ್ಟ್ 7ರಿಂದ ಮೈಸೂರಿನಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ.
ತಂಡಗಳ ಪ್ರಾಯೋಜಕರು ತಮಗೆ ಬೇಕಾದ ತರಬೇತಿ ಸಿಬ್ಬಂದಿಯನ್ನೂ ಡ್ರಾಫ್ಟ್ ಪದ್ಧತಿ ಮೂಲಕ ಆಯ್ಕೆ ಮಾಡಿದರು. ಈ ಸಿಬ್ಬಂದಿಯು ಎ, ಬಿ, ಸಿ ಮತ್ತು ಡಿ ವಿಭಾಗಗಳಲ್ಲಿರುವ ಆಟಗಾರರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಕೆಎಸ್ಸಿಎ ಅಧ್ಯಕ್ಷರಾ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ. ಅಭಿರಾಮ್, ಕಾರ್ಯದರ್ಶಿ ಸಂತೋಷ್ ಮೆನನ್, ಜಂಟಿ ಕಾರ್ಯದರ್ಶಿ ಶವೀರ್ ತಾರಾಪುರ್ ಮತ್ತು ಖಜಾಂಚಿ ವಿನಯ್ ಮೃತ್ಯುಂಜಯ ಹಾಜರಿದ್ದರು.
ಎ ವಿಭಾಗದಲ್ಲಿರುವ ಹೆಚ್ಚಿನ ಆಟಗಾರರು ಭಾರತ ತಂಡದಲ್ಲಿ ಮತ್ತು ಐಪಿಎಲ್ನಲ್ಲಿ ಆಡಿರುವುದರಿಂದ ಆಯ್ಕೆ ಪ್ರಕ್ರಿಯೆಯು ಕೆಲವು ಕುತೂಹದಲ ಕ್ಷಣಗಳಿಗೆ ಸಾಕ್ಷಿಯಾಯಿತು. ಅಂತಾರಾಷ್ಟ್ರೀಯ ಕ್ರಿಕೆಟಿಗ ಕರುಣ್ ನಾಯರ್ ಅವರನ್ನು ಮೈಸೂರು ವಾರಿಯರ್ಸ್ ತಂಡ ಆಯ್ಕೆ ಮಾಡುವ ಮೂಲಕ ಮಹಾ ಡ್ರಾಫ್ಟ್ಗೆ ಚಾಲನೆ ಸಿಕ್ಕಿತು. ನಂತರ ಗುಲ್ಬರ್ಗಾ ಮೈಸ್ಟಿಕ್ಸ್ ಮನೀಶ್ ಪಾಂಡೆ ಅವರನ್ನು ಆಯ್ಕೆ ಮಾಡಿತು. ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್ವಾಲ್ ಅವರನ್ನು ಕರೆ ಮಾಡಿತು. ಶಿವಮೊಗ್ಗ ಸ್ಟ್ರೈಕರ್ಸ್ ಆಲ್ರೌಂಡರ್ ಕೆ. ಗೌತಮ್ ಅವರನ್ನು ಮೊದಲ ಆಯ್ಕೆ ಮಾಡಿಕೊಂಡಿತು. ಮಂಗಳೂರು ಯುನೈಟೆಡ್ ತಂಡ ಅಭಿನವ್ ಮನೋಹರ್ ಅವರನ್ನು ಆಯ್ಕೆ ಮಾಡಿದರೆ, ಹುಬ್ಬಳ್ಳಿ ಟೈಗರ್ಸ್ ಅಭಿಮನ್ಯು ಮಿಥುನ್ ಅವರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿತು.
740 ಆಟಗಾರರು!!
ಎ ವಿಭಾಗದಲ್ಲಿ ಭಾರತ ತಂಡಕ್ಕೆ ಮತ್ತು ಐಪಿಎಲ್ ಆಡಿದ ಆಟಗಾರರು ಸೇರಿರುತ್ತಾರೆ. ಇವರ ಮೌಲ್ಯ 5 ಲಕ್ಷ ರೂ. ಬಿ ವಿಭಾಗದಲ್ಲಿ ಯಾವುದಾದರೂ ಒಂದು ಹಿರಿಯ ಟೂರ್ನಿ (ರಣಜಿ ಟ್ರೋಫಿ, ವಿಜಯ ಹಜಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ) ಆಡಿರುವ ಆಟಗಾರರು ಸೇರಿರುತ್ತಾರೆ. ಇವರ ಮೌಲ್ಯ 2 ಲಕ್ಷ ರೂ. 19 ಮತ್ತು 23 ವರ್ಷ ವಯೋಮಿತಿಯ ಆಟಗಾರರು ಸಿ ವಿಭಾಗದಲ್ಲಿ ಸೇರಿರುತ್ತಾರೆ. ಇವರ ಮೌಲ್ಯ 1 ಲಕ್ಷ ರೂ. ರಾಜ್ಯದ ಉದಯೋನ್ಮುಖ ಆಟಗಾರರು ಡಿ ಗುಂಪಿನಲ್ಲಿದ್ದು ಇವರ ಭತ್ಯೆ 50,000 ರೂ. ಆಗಿರುತ್ತದೆ. ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 740 ಆಟಗಾರರಿದ್ದು, ಎ ವಿಭಾಗದಲ್ಲಿ 14 ಆಟಗಾರರು, ಬಿ ವಿಭಾಗದಲ್ಲಿ 32 ಆಟಗಾರರು, ಸಿ ವಿಭಾಗದಲ್ಲಿ 111 ಆಟಗಾರರು ಮತ್ತು ಡಿ ವಿಭಾಗದಲ್ಲಿ 583 ಆಟಗಾರರು ಸೇರಿದ್ದಾರೆ.
“ಇದೊಂದು ಕುತೂಹಲದ ಆಯ್ಕೆ ಪ್ರಕ್ರಿಯೆಯಾಗಿತ್ತು. ನಾವು ಈಗಾಗಲೇ ಆರು ಮುಖ್ಯ ತರಬೇತುದಾರರನ್ನು ಆಯ್ಕೆ ಮಾಡಿರುತ್ತೇವೆ. ರಾಜ್ಯದ ಒಬ್ಬ ಆಯ್ಕೆಗಾರರು ಸೇರಿದಂತೆ ಅವರು ತಮ್ಮದೇ ಆದ ಸಹಾಯಕ ಸಿಬ್ಬಂದಿ ಹೊಂದಿರುತ್ತಾರೆ. ಅವರು ಸರ್ವ ವಿಧದಲ್ಲೂ ಸಜ್ಜಾಗಿದ್ದಾರೆ. ಪ್ರತಿಯೊಂದು ತಂಡವೂ 18 ಆಟಗಾರರನ್ನು ಆಯ್ಕೆ ಮಾಡಿದೆ. ಅವರ ಪ್ರದೇಶದ ಇಬ್ಬರು ಆಟಗಾರರನ್ನು ಆಯ್ಕೆ ಮಾಡುವುದು ಕಡ್ಡಾಯ. ಟೂರ್ನಿ ಆರಂಭಗೊಳ್ಳಲು ಇನ್ನು ಕೇವಲ ಒಂದು ವಾರ ಬಾಕಿ ಇದ್ದು, ಪ್ರತಿಯೊಬ್ಬರಲ್ಲೂ ಕುತೂಹಲ ಮನೆ ಮಾಡಿದೆ,” ಎಂದು ಕೆಎಸ್ಸಿಎ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ.
ತಂಡಗಳ ವಿವರ:
ಬೆಂಗಳೂರು ಬ್ಲಾಸ್ಟರ್ಸ್: ನಾಸಿರುದ್ದೀನ್ ಟಿ. (ಕೋಚ್), ಕೆ.ಬಿ. ಪವನ್ (ಸಹಾಯಕ ಕೋಚ್), ರಘೋತ್ತಮ್ ನವ್ಲಿ (ಆಯ್ಕೆಗಾರರು), ಪ್ರದೀಪ್ ಕುಮಾರ್ ಎನ್. (ವೀಡಿಯೋ ಅನಾಲಿಸ್ಟ್).
ಮಯಾಂಕ್ ಅಗರ್ವಾಲ್, ಸುಚಿತ್ ಜೆ, ಅನಿರುಧ್ ಜೋಶಿ, ಪ್ರದೀಪ್ ಟಿ, ಕ್ರಾಂತಿ ಕುಮಾರ್, ಚೇತನ್ ಎಲ್.ಆರ್, ಅನೀಶ್ ಕೆ.ವಿ, ಕುಮಾರ್ ಎಲ್.ಆರ್. ರಕ್ಷಿತ್ ಎಸ್ (ವಿಕೆಟ್ ಕೀಪರ್), ರಿಶಿ ಬೋಪಣ್ಣ, ಸಂತೋಕ್ ಸಿಂಗ್, ಸೂರಜ್ ಅಹುಜಾ, ಗುರ್ಬಾಂಗ್ ಸಾರಿಯಾ, ಲೋಚನ್ ಗೌಡ, ರೋನಿತ್ ಮೋರೆ, ಸೇನ್ ಇಶಾನ್ ಜೋಸೆಫ್, ಖುಷ್ ಮರಾಠೆ, ತನಯ್ ವಾಲ್ಮೀಕಿ.
ಹುಬ್ಬಳ್ಳಿ ಟೈಗರ್ಸ್: ದೀಪಕ್ ಚೌಗಲೆ (ಕೋಚ್), ರಾಜು ಭಟ್ಕಳ್ (ಸಹಾಯಕ ಕೋಚ್), ಆನಂದ್ ಕಟ್ಟಿ (ಆಯ್ಕೆಗಾರ), ಶಶಿಕುಮಾರ್ (ವೀಡಿಯೋ ಎನಾಲಿಸ್ಟ್).
ಅಭಿಮನ್ಯು ಮಿಥುನ್, ಲವನಿತ್ ಸಿಸೋಡಿಯಾ, ಕೌಶಿಕ್ ವಿ, ಲಿಯಾನ್ ಖಾನ್, ನವೀನ್ ಎಂಜಿ, ಆನಂದ್ ಡಿ, ಶಿವಕುಮಾರ್ ಯುಬಿ, ತುಷಾರ್ ಸಿಂಗ್, ಅಕ್ಷನ್ ರಾವ್, ಜಹೂರ್ ಫರೂಕಿ, ರೋಹನ್ ನವೀನ್, ಸೌರವ್ ಶ್ರೀವಾಸ್ತವ್, ಸಾಗರ್ ಸೊಲಾಂಕಿ, ಗೌತಮ್ ಸಾಗರ್, ರೋಶನ್ ಎ. ರಾಹುಲ್ ಸಿಂಗ್ ರಾವತ್, ಶಿಶಿರ್ ಭವಾನೆ, ಶರಣ್ ಗೌಡ.
ಗುಲ್ಬರ್ಗಾ ಮೈಸ್ಟಿಕ್ಸ್: ಮನ್ಸೂರ್ ಅಲಿ ಖಾನ್ (ಕೋಚ್), ರಾಜಶೇಖರ್ ಶಾನ್ಬಾಲ್ (ಸಹಾಯಕ ಕೋಚ್). ಸಂತೋಷ್ ವಿ. (ಆಯ್ಕೆಗಾರರು), ಸಚ್ಚಿದಾನಂದ (ವೀಡಿಯೋ ಅನಾಲಿಸ್ಟ್).
ಮನೀಶ್ ಪಾಂಡೆ, ದೇವದತ್ತ ಪಡಿಕ್ಕಲ್, ಕಾರ್ತಿಕ್ ಸಿ.ಎ, ಮನೋಜ್ ಭಾಂಗ್ಡೆ, ವಿದ್ವತ್ ಕಾವೇರಪ್ಪ, ಕೆ. ಕೃಷ್ಣ, ಅಭಿಲಾಶ್ ಶೆಟ್ಟಿ, ಕುಶಲ್ ವಾಧ್ವಾನಿ, ಪ್ರಣವ್ ಭಾಟಿಯಾ, ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್), ರಿತೇಶ್ ಭಟ್ಕಳ್, ಮೋಹಿತ್ ಬಿ.ಎ, ರೋಹನ್ ಪಾಟೀಲ್, ಧನುಷ್ ಗೌಡ, ಮೊಹಮ್ಮದ್ ಆಕ್ವಿಬ್ ಜಾವದ್, ಶ್ರೀಶ ಆಚಾರ್ಯ, ಯಶ್ವಂತ್ ಆಚಾರ್ಯ, ಆರೋನ್ ಕ್ರಿಸ್ಟೆ.
ಮಂಗಳೂರು ಯುನೈಟೆಡ್: ಸ್ಟುವರ್ಟ್ ಬಿನ್ನಿ (ಕೋಚ್), ಸಿ. ರಾಘವೇಂದ್ರ (ಸಹಾಯಕ ಕೋಚ್), ಎಂ.ವಿ. ಪ್ರಶಾಂತ್ (ಆಯ್ಕೆದಾರರು), ಪಿ. ರಾಜೀವ್ (ವೀಡಿಯೋ ಅನಾಲಿಸ್ಟ್).
ಅಭಿನವ್ ಮನೋಹರ್, ಸಮರ್ಥ್ ಆರ್, ವೈಶಾಖ್ ವಿಜಯ ಕುಮಾರ್, ಅಮಿತ್ ವರ್ಮಾ, ವೆಂಕಟೇಶ್ ಎಂ, ಅನೀಶ್ವರ್ ಗೌತಮ್, ಸುಜಯ್ ಸತೆರಿ, ರೋಹಿತ್ ಕುಮಾರ್ ಎಸಿ, ಮೆಕ್ನಿಲ್ ನರೋನ್ಹಾ, ಎಚ್ಎಸ್ ಶರತ್, ಶಶಿಕುಮಾರ್ ಕೆ, ನಿಕಿನ್ ಜೋಸ್, ರಘುವೀರ್, ಅಮೋಘ್ ಎಸ್, ಚಿನ್ಮಯ್ ಎನ್ಎ, ಆದಿತ್ಯ ಸೋಮಣ್ಣ, ಯಶವರ್ಧನ್, ಧೀರಜ್ ಗೌಡ.
ಶಿವಮೊಗ್ಗ ಸ್ಟ್ರೈಕರ್ಸ್: ನಿಖಿಲ್ ಹಲ್ದಿಪುರ (ಕೋಚ್), ಆದಿತ್ಯ ಸಾಗರ್ (ಸಹಾಯಕ ಕೋಚ್), ಎ.ಆರ್. ಮಹೇಶ್ (ಆಯ್ಕೆಗಾರರು), ಶರತ್ (ವೀಡಿಯೋ ಅನಾಲಿಸ್ಟ್).
ಕೆ. ಗೌತಮ್, ಕೆ.ಸಿ. ಕಾರಿಯಪ್ಪ, ರೋಹನ್ ಕದಮ್, ಸಿದ್ಧಾರ್ಥ ಕೆ.ವಿ, ದರ್ಶನ್ ಎಂಬಿ, ಸ್ಟಾಲಿನ್ ಹೂವರ್, ಅವಿನಾಶ್ ಡಿ, ಸಮ್ರಾನ್ ಆರ್. ಶರತ್ ಬಿ.ಆರ್, ರಾಜ್ವೀರ್ ವಾಧ್ವಾ, ರಾಜೇಂದ್ರ, ಉತ್ತಮ್ ಅಯ್ಯಪ್ಪ, ಚೈತನ್ಯ ಎಸ್, ಶ್ರೇಯಸ್ ಬಿ,ಎಂ, ಕೆಎಸ್ ದೇವಯ್ಯ, ವಿನಯ್ ಸಾಗರ್, ಶೇಯಸ್ ಎಸ್ಪಿ, ಪುನೀತ್ ಎಸ್.
ಮೈಸೂರು ವಾರಿಯರ್ಸ್: ಪಿವಿ ಶಶಿಕಾಂತ್ (ಕೋಚ್), ಎಸ್ಎಲ್ ಅಕ್ಷಯ್ (ಸಹಾಯಕ ಕೋಚ್), ಕೆಎಲ್ ಅಶ್ವಥ್ (ಆಯ್ಕೆಗಾರರು), ಕಿರಣ್ ಟಿ. (ವೀಡಿಯೊ ಅನಾಲಿಸ್ಟ್).
ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ, ವಿದ್ಯಾಧರ ಪಾಟೀಲ್, ನಿಹಾಲ್ ಉಳ್ಳಾಲ್, ಪ್ರತೀಕ್ ಜೈನ್, ಲೋಚನ್ ಅಪ್ಪಣ್ಣ, ಚಿರಂಜೀವಿ ಜಿಎಸ್, ನಾಗ ಭರತ್, ಭರತ್ ದೂರಿ, ಶಿವರಾಜ್, ಮೊನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯೆಲ್, ಅಭಿಷೇಕ್ ಅಹಲ್ವಾತ್.
ವೇಳಾಪಟ್ಟಿ
ಆಗಸ್ಟ್ 7: ಹುಬ್ಬಳ್ಳಿ ಟೈಗರ್ಸ್ vs ಮಂಗಳೂರು ಯುನೈಟೆಡ್
ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್ 8: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್
ಆಗಸ್ಟ್ 9: ಗುಲ್ಬರ್ಗ ಮೈಸ್ಟಿಕ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್
ಆಗಸ್ಟ್ 10: ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್
ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಪೈಕರ್ಸ್
ಆಗಸ್ಟ್ 11: ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಯುನೈಟೆಡ್
ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಆಗಸ್ಟ್ 12: ಹುಬ್ಬಳ್ಳಿ ಟೈಗರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್13: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಆಗಸ್ಟ್ 14: ಮೈಸೂರು ವಾರಿಯರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಮಂಗಳೂರು ಯುನೈಟೆಡ್ vs ಗುಲ್ಬರ್ಗ ಮೈಸ್ಟಿಕ್ಸ್
ಆಗಸ್ಟ್15: ಮಂಗಳೂರು ಯುನೈಟೆಡ್ VS ಬೆಂಗಳೂರು ಬ್ಲಾಸ್ಟರ್ಸ್
ಗುಲ್ಬರ್ಗ ಮೈಸ್ಟಿಕ್ಸ್ VS ಹುಬ್ಬಳ್ಳಿ ಟೈಗರ್ಸ್
ಆಗಸ್ಟ್16: ವಿಶ್ರಾಂತಿ ದಿನ
ಆಗಸ್ಟ್17: ಮೈಸೂರು ವಾರಿಯರ್ಸ್ vs ಮಂಗಳೂರು ಯುನೈಟೆಡ್
ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಆಗಸ್ಟ್18: ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್
ಆಗಸ್ಟ್19: ಹುಬ್ಬಳ್ಳಿ ಟೈಗರ್ಸ್ vs ಶಿವಮೊಗ್ಗ ಸ್ಟ್ರೈಕರ್ಸ್
ಮಂಗಳೂರು ಯುನೈಟೆಡ್ vs ಗುಲ್ಬರ್ಗ ಮೈಸ್ಟಿಕ್ಸ್
ಆಗಸ್ಟ್ 20: ಮಂಗಳೂರು ಯುನೈಟೆಡ್ vs ಶಿವಮೊಗ್ಗ ಸ್ಟ್ರೈಕರ್ಸ್
ಮೈಸೂರು ವಾರಿಯರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಆಗಸ್ಟ್ 21: ಮೈಸೂರು ವಾರಿಯರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್ vs ಬೆಂಗಳೂರು ಬ್ಲಾಸ್ಟರ್ಸ್
ಆಗಸ್ಟ್22: ಶಿವಮೊಗ್ಗ ಸ್ಟ್ರೈಕರ್ಸ್ vs ಗುಲ್ಬರ್ಗ ಮೈಸ್ಟಿಕ್ಸ್
ಆಗಸ್ಟ್ 23; ಎಲಿಮಿನೇಟರ್ ಮತ್ತು ಕ್ವಾಲಿಫಯರ್1 ಪಂದ್ಯಗಳು
ಆಗಸ್ಟ್ 24 ವಿಶ್ವಾಂತಿ ದಿನ
ಆಗಸ್ಟ್ 25: ಕ್ವಾಲಿಫಯರ್ 2 ಪಂದ್ಯ
ಆಗಸ್ಟ್ 26: ಫೈನಲ್