ಉಡುಪಿ: ಬದುಕನರಸಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೆಲೆಸಿರುವ ಕನ್ನಡಿಗರು (Gulf Kannadiga) ಕ್ರಿಕೆಟ್ ಪ್ರೀತಿಯಿಂದ ದೂರವಾಗಿಲ್ಲ. ತಮ್ಮ ನಿತ್ಯದ ಕೆಲಸದ ಒತ್ತಡಗಳ ನಡುವೆಯೂ ಅಲ್ಲಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿರುವ ಕನ್ನಡಿಗರು ಇದೇ ತಿಂಗಳ 5 ರಿಂದ ತುಳುನಾಡು ಕ್ರಿಕೆಟ್ ಲೀಗ್ (Tulunadu Cricket League) ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದಾರೆ.
ರೇಂಜರ್ ಜನರಲ್ ಟ್ರಾನ್ಸ್ಪೋರ್ಟ್ ಎಲ್ ಎಲ್ ಸಿ, ಯೇಸ್ ಇಂಟೀರಿಯರ್ ಡಿಸೈನ್ & ಡೆಕೊರೇಷನ್ ಎಲ್ ಎಲ್ ಸಿ ಗ್ಲಾಡಿಯೇಟರ್ ಕ್ಲಬ್ ಸಹಯೋಗದಲ್ಲಿ ಇದೇ ಮಾರ್ಚ್ 5ರಂದು ಯುಎಇ (UAE) ರಾಷ್ಟ್ರದ ಅಜ್ಮನ್ ರಾಯಲ್ ಕ್ರಿಕೆಟ್ ಗ್ರೌಂಡ್ಸ್ ಇಲ್ಲಿ ಹತ್ತು ತಂಡಗಳ ಲೀಗ್ ಕಮ್ ನಾಕೌಟ್ ಮಾದರಿಯ ಒಂದು ದಿನದ (Tulunadu Cricket League) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ (TennisBall Cricket Tournament) ನಡೆಯಲಿದೆ.
ತಂಡಗಳ ವಿವರ: ಟೀಮ್ ಎಲಿಗಂಟ್ ಮಂಗಳೂರು, ವರಾಹ ರೂಪ ಮಂಗಳೂರು, ಟೀಮ್ ಎಕ್ಸ್ಪರ್ಟ್ ದಾಫ್ಜ, ಹೀಟ್ ಶೀಲ್ಡ್ ಗ್ಲಾಡಿಯೇಟರ್, ವಿದ್ ಒನ್ ಕಟೀಲ್, ರೇಂಜರ್ಸ್, ಉಡುಪಿ ಫ್ರೆಂಡ್ಸ್, ನವೀನ್ XI, ಕರ್ಮರ್ ಡಿ ಜೆ ಚಾಲೆಂಜರ್ಸ್, ದುಬೈ ಇಂಡಿಯನ್ಸ್.
ತಂಡಗಳ ಪ್ರಮುಖರು:
ರೇಂಜರ್ಸ್ :ತಂಡದ ಮಾಲೀಕರು: ಉದಯ ಶೆಟ್ಟಿ. ತಂಡದ ಮ್ಯಾನೇಜ್ ಪ್ರಶಾಂತ್ ಶೆಟ್ಟಿ, ಐಕಾನ್ ಆಟಗಾರರು ವಿಶ್ವ ಕಾಂತ್ ಹಾಗೂ ಪ್ರದೀಪ್.
ದುಬೈ ಇಂಡಿಯನ್ಸ್: ಮಾಲೀಕರು- ಅನೀಶ್, ಮ್ಯಾನೇಜರ್: ಗಜ ಪೂಜಾರಿ, ಐಕಾನ್ ಆಟಗಾರರು: ಸುಖೇಶ್ ಭಂಡಾರಿ ಮತ್ತು ಪ್ರವೀಣ್ ಆಚಾರ್ಯ.
ಕರ್ಮರ್ ಡಿಜೆ ಚಾಲೆಂಜರ್ಸ್: ಮಾಲೀಕರು- ದೀಪಕ್ ಪೂಜಾರಿ, ಮ್ಯಾನೇಜರ್: ದಿವಿತ್ ದೀಪಕ್, ಐಕಾನ್ ಆಟಗಾರರು: ವಿನಯ್ ಪೂಜಾರಿ, ಸ್ವರೂಪ್ ರೈ.
ವಿದ್ ಒನ್ ಕಟೀಲ್: ಮಾಲೀಕರು ವಿದ್ಯಾನಂದ ಶೆಟ್ಟಿ, ಮ್ಯಾನೇಜರ್; ಜೀವನ್ ಶೆಟ್ಟಿ, ಐಕಾನ್ ಆಟಗಾರರು: ಅಶ್ರಫ್ ಮತ್ತು ಹಮ್ದಾನ್.
ಉಡುಪಿ ಫ್ರೆಂಡ್ಸ್: ಮಾಲೀಕರು ನವಾಜ್, ಮ್ಯಾನೇಜರ್: ಫಿರೋಜ್, ಐಕಾನ್ ಆಟಗಾರರು: ಶಾಬುದ್ದೀನ್ ಮತ್ತು ನವಾಜ್ ಎಸ್.
ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್: ಮಾಲೀಕರು-ಪ್ರೇಮನಾಥ್ ಶೆಟ್ಟಿ, ಮ್ಯಾನೇಜರ್ ವಿವೇಕ್ ಶೆಟ್ಟಿ, ಐಕಾನ್ ಆಟಗಾರರು: ಶಿವಪ್ರಸಾದ್ ಶೆಟ್ಟಿ, ಸೂರ್ಯಕಾಂತ್.
ಇದನ್ನೂ ಓದಿ : Santosh Trophy Football ಸೌದಿ ಅರೇಬಿಯಾದಲ್ಲೇಕೆ ಸಂತೋಷ್ ಟ್ರೋಫಿ ಫುಟ್ಬಾಲ್ ?
ಟೀಮ್ ಎಲಿಗಂಟ್ ಮಂಗಳೂರು: ಮಾಲೀಕರು-ಖಾದರ್ ಶರೀನ್, ಮ್ಯಾನೇಜರ್ ಶಕೀರ್, ಐಕಾನ್ ಆಟಗಾರರು: ಸಮ್ಸು, ಸಫೌನ್.
ನವೀನ್ XI: ತಂಡದ ಮಾಲೀಕರು ಇಮ್ರಾನ್, ಮ್ಯಾನೇಜರ್ ನವೀನ್, ಐಕಾನ್ ಆಟಗಾರರು: ರೊವೆಲ್ ಮತ್ತು ರೋಹನ್.
ಟೀಮ್ ಎಕ್ಸ್‌ಫರ್ಟ್ ಡಾಫ್ಜಾ: ಮಾಲೀಕರು ಶೇಖ್ ಮೊಹಮ್ಮದ್ ಸುಹೈಲ್, ಫೈಜ್ ಕಾಪು ಮ್ಯಾನೇಜರ್, ಮೊಹಮ್ಮದ್ ಆಸೀರ್ ಹಾಗೂ ಶೆಹಜಾನ್ ಅಹಮ್ಮದ್ ಐಕಾನ್ ಆಟಗಾರರು.
ವರಹಾ ರೂಪ ಮಂಗಳೂರು: ಮಾಲೀಕರು ಪ್ರವೀಣ್ ಶೆಟ್ಟಿ, ಮ್ಯಾನೇಜರ್ ಸುನೀಲ್ ಶೆಟ್ಟಿ, ಐಕಾನ್ ಆಟಗಾರರು ಧೀಜರ್ ಪೂಜಾರಿ ಮತ್ತು ಮಿತುನ್ ಶೆಟ್ಟಿ.