ಮುಂಬೈ : ಐಪಿಎಲ್ ಆರಂಭದಲ್ಲೇ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ಕೇನ್ ವಿಲಿಯಮ್ಸನ್ (Kane Williamson) ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಐಪಿಎಲ್ 2023 ರಿಂದ ಹೊರಗುಳಿಯಲಿದ್ದಾರೆ. ಇದು ಗುಜರಾತ್ ಟೈಟಾನ್ಸ್ ಭಾರಿ ಹೊಡೆತ ಕೊಟ್ಟಿದೆ. ಈ ಕುರಿತು ಗುಜರಾತ್ ತಂಡದ ಕೋಚ್ ವಿಕ್ರಮ್ ಸೋಲಂಕಿ ಖಚಿತ ಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದ ವೇಳೆಯಲ್ಲಿ ಬೌಂಡರಿ ಲೈನ್ ಬಳಿಯಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದ ವೇಳೆಯಲ್ಲಿ ಕೇನ್ ವಿಲಿಯಂಸನ್ ಎಡವಿ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆಯಲ್ಲಿ ಬದಲಿ ಆಟಗಾರನಾಗಿ ಸಾಯಿ ಸುದರ್ಶನ್ ಕಣಕ್ಕೆ ಇಳಿದಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿಯೇ ಉತ್ತಮ ದಾಖಲೆಯನ್ನು ಹೊಂದಿರುವ ಕೇನ್ ವಿಲಿಯಂಸನ್ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಆಟಗಾರ. ಇದೀಗ ಐಪಿಎಲ್ ಟೂರ್ನಿಯ ಆರಂಭದಲ್ಲಿ ಕೇನ್ ಅವರನ್ನು ಗಾಯದಿಂದ ಕಳೆದುಕೊಂಡಿರುವುದು ದುಃಖಕರವಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ಅವರು ಶೀಘ್ರದಲ್ಲಿಯೇ ತಂಡಕ್ಕೆ ಮರಳಲಿದ್ದಾರೆ ಎಂದು ವಿಕ್ರಮ್ ಸೋಲಂಕಿ ಹೇಳಿದ್ದಾರೆ.
ಗಾಯದ ಚಿಕಿತ್ಸೆಗಾಗಿ ಕೇನ್ ವಿಲಿಯಮ್ಸನ್ (Kane Williamson) ಅವರು ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ಬದಲಿ ಆಟಗಾರನನ್ನು ಇನ್ನೂ ಘೋಷಣೆ ಮಾಡಿಲ್ಲ. ಕೇನ್ ವಿಲಿಯಮ್ಸನ್ ಅವರ ಗಾಯದ ಕುರಿತು ತಪಾಸಣೆ ನಡೆಸಲಾಗುತ್ತಿದೆ. ಕಳೆದ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಕೇನ್ ವಿಲಿಯಮ್ಸನ್ ಗಾಯಗೊಂಡಿರುವುದು ನ್ಯೂಜಿಲೆಂಡ್ ತಂಡಕ್ಕೆ ಕೂಡ ಚಿಂತೆ ತರಿಸಿದೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಿಂದಲೂ ಹೊರಬೀಳುತ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ.
ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು ?
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಸಿಕ್ಸರ್ ಬಾರಿಸಲು ಮುಂದಾಗಿದ್ದರು. ಈ ವೇಳೆಯಲ್ಲಿ ವಿಲಿಯಮ್ಸನ್ ಕ್ಯಾಚ್ ಪಡೆಯಲು ಮುಂದಾಗಿದ್ದರು. ಆದರೆ ಅವರ ಮೊಣಕಾಲು ನೆಲಕ್ಕೆ ಬಡಿದಿದ್ದು, ಗಾಯಗೊಂಡಿದ್ದಾರೆ. ಕೂಡಲೇ ಮೈದಾನಕ್ಕೆ ಆಗಮಿಸಿದ್ದ ಫಿಸಿಯೋ ಅವರನ್ನು ಕೂಡ ಮೈದಾನದ ಹೊರಗೆ ಸಾಗಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿನ ಕಳಪೆ ಪ್ರದರ್ಶನದ ನಂತದ ಕೇನ್ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಐಪಿಎಲ್ ಹರಾಜಿನಲ್ಲಿ ಮೊದಲ ಸುತ್ತಿನಲ್ಲಿ ಅವರನ್ನು ಯಾವುದೇ ತಂಡಗಳು ಖರೀದಿ ಮಾಡಿರಲಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಎರಡು ಕೋಟಿ ರೂಪಾಯಿಗಳಿಗೆ ಅವರನ್ನು ಖರೀದಿ ಮಾಡಿತ್ತು.
ಇದನ್ನೂ ಓದಿ : Punjab Kings : ಪಂಜಾಬ್ ಕಿಂಗ್ಸ್ ಗೆ 7 ರನ್ ಗೆಲುವು, ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ ಮಳೆ ಅಡ್ಡಿ
ಇದನ್ನೂ ಓದಿ : BCCI Contract List: ಕೆ.ಎಲ್. ರಾಹುಲ್ ಈಗ ಬಿ ಗ್ರೇಡ್ ಆಟಗಾರ