Karnataka Sports : ಕ್ರೀಡೆಯ ಸಾರ್ವತ್ರೀಕರಣ ಹಾಗೂ ಕ್ರೀಡೆಯಲ್ಲಿ ಶ್ರೇಷ್ಠತೆಯ ಉತ್ತೇಜನ ನೀಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯದಲ್ಲಿರುವ 29 ಜಿಲ್ಲಾ ಹಾಗೂ 121 ತಾಲೂಕು ಕ್ರೀಡಾಂಗಣಗಳು ಮತ್ತು ಕ್ರೀಡಾ ಹಾಸ್ಟೆಲ್‌ಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೆ ಏರಿಲು ತೀರ್ಮಾನಿಸಿದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಐದು ಸದಸ್ಯರ ಸಮಿತಿ:
ಒಲಿಂಪಿಯನ್ ಹಾಕಿ ಆಟಗಾರ, ಭಾರತ ಹಾಕಿ ತಂಡದ ಮಾಜಿ ನಾಯಕ, ಅರ್ಜುನ ಪ್ರಶಸ್ತಿ ವಿಜೇತ ವಿ.ಆರ್. ರಘುನಾಥ್, ಖ್ಯಾತ ಕಬಡ್ಡಿ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಡಾ, ಹೊನ್ನಪ್ಪ ಗೌಡ, ಖ್ಯಾತ ಕ್ರಿಕೆಟಿಗ, ಕರ್ನಾಟಕ ರಣಜಿ ತಂಡದ ವೇಗದ ಬೌಲರ್ ಎಸ್. ಅರವಿಂದ್, ಭಾರತದ ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್, ಏಕಲವ್ಯ ಪ್ರಶಸ್ತಿ ವಿಜೇತ ಜಿ.ಬಿ. ನಾಗರಾಜ್ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಡಾ. ಜಿತೇಂದ್ರ ಶೆಟ್ಟಿ ಅವರು ಸಮಿತಿಯಲ್ಲಿ ಸೇರಿದ್ದು, ರಾಜ್ಯದ ಜಿಲ್ಲಾ ಕ್ರೀಡಾಂಗಣಗಳಿಗೆ ಭೇಟಿ ಮಾಡಿದ ಸಮಿತಿಯು ಅಗತ್ಯವಿರುವ ಕಾರ್ಯಗಳನ್ನು ನಿರ್ವಹಿಸಲು ಉತ್ತಮ ವರದಿಯೊಂದನ್ನು ಸಲ್ಲಿಸಿದೆ. ಬಹುತೇಕ ಕ್ರೀಡಾಂಗಣಗಳು ದುಸ್ಥಿತಿಯಲ್ಲಿದ್ದು ಉನ್ನತೀಕರಣದ ಅಗತ್ಯ ಇದೆ ಎಂಬುದನ್ನು ವರದಿಯ ಆರಂಭದಲ್ಲೇ ತಿಳಿಸಲಾಗಿದೆ. ಮೂಲಭೂತ ಸೌಕರ್ಯಗಳು, ಕ್ರೀಡಾಂಗಣಗಳ ವಿಕೇಂದ್ರೀಕರಣ ಸೇರಿದಂತೆ ಹಲವಾರು ಅಂಶಗಳನ್ನು ವರದಿಯಲ್ಲಿ ಮಂಡಿಸಿದೆ.
Karnataka Sports : ಕ್ರೀಡಾ ಅಭಿವೃದ್ಧಿಗೆ ಸಮಿತಿಯ ಶಿಫಾರಸ್ಸುಗಳು:
- ನೂತನ ಕ್ರೀಡಾಂಗಣಗಳನ್ನು ನಿರ್ಮಿಸುವಾಗ ಕುಡಿಯುವ ನೀರು, ಶೌಚಾಲಯಗಳು, ಶೌಚಾಲಯಗಳು, ಆವರಣಗೋಡೆ, ಕ್ರೀಡಾ ಸಾಮಗ್ರಿ ಸಂಗ್ರಹಣಾ ಕೊಠಡಿ, ಬಟ್ಟೆ ಬದಲಾಯಿಸುವ ಕೊಠಡಿ, ಪೆವಿಲಿಯನ್ ಕಟ್ಟಡ ಹಾಗೂ ಗ್ಯಾಲರಿ ನಿರ್ಮಾಣ.
- ಲಭ್ಯ ಕ್ರೀಡಾಂಗಣದ ನಿವೇಶನವನ್ನು ಸಮತಟ್ಟುಗೊಳಿಸಲು ಅಪಾರ ಹಣ ವ್ಯಯ ಮಾಡುವ ಬದಲು ಲಭ್ಯವಿರುವ ಸ್ಥಳಾವಕಾಶದ ಅನುಸಾರ ಕ್ರೀಡಾಂಕಣಗಳನ್ನು ನಿರ್ಮಿಸುವುದು ಸೂಕ್ತ.
- ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ರೀಡಾಂಕಣಗಳ ದೈನಂದಿನ ನಿರ್ವಹಣೆಗೆ ನೀರು ಪೂರೈಕೆಗೆ ಆದ್ಯತೆ ನೀಡುವುದು.
- ಕ್ರೀಡಾಂಕಣಗಳಿಗೆ ಪ್ರತ್ಯೇಕ ಚೈನ್‌ಲಿಂಕ್ ಫೆನ್ಸಿಂಗ್‌ಗಳನ್ನು ನಿರ್ಮಿಸಿ ಅಂಕಣಗಳಿಗೆ ರಕ್ಷಣೆ ಒದಗಿಸುವುದು.
- ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಶಾಚಾಲಯ ವ್ಯವಸ್ಥೆ, ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಕಲ್ಪಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಬಳಸಿಕೊಳ್ಳುವಂತೆ ಮಾಡಬಹುದು.
- ವಿಶೇಷಚೇತನ ಕ್ರೀಡಾಪಟುಗಳಿಗೆ ಅಗತ್ಯವಾದ ರಾಂಪ್, ವಿಶೇಷಚೇತನ ಸ್ನೇಹಿ ಶೌಚಾಲಯ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷಚೇತನ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಪಾಲ್ಗೊಳ್ಳಲು ಸಾಧ್ಯ.
- ಸಾಂಪ್ರದಾಯಿಕ ಕ್ರೀಡಾ ಅಂಕಣಗಳು ಮತ್ತು ಸಿಂಥಟಿಕ್ ಕ್ರೀಡಾಅಂಕಣಗಳನ್ನು ಪ್ರತಿವರ್ಷ ನಿರ್ವಹಣೆ ಮಾಡುವುದರಿಂದ ಕ್ರೀಡಾಪಟುಗಳು ಅವುಗಳನ್ನು ವರ್ಷಪೂರ್ತಿ ಬಳಸುವಂತೆ ಮಾಡುವುದು. ಸಿಂಥಟಿಕ್ ಹಾಕಿ ಟರ್ಫ್‌ಗಳ ನಿರ್ವಹಣೆಗೆ ಯಂತ್ರಚಾಲಿತ ಸ್ವಚ್ಛತಾಯಂತ್ರವನ್ನು ಬಳಸುವುದು. ಸಿಂಥಟಿಕ್ ಟ್ರ್ಯಾಕ್‌ಗಳಿಗೆ ರಿ ಸರ್ಫೇಸಿಂಗ್ ಮಾಡುವುದರಿಂದ ಅವುಗಳ ಬಾಳಿಕೆಯ ಅವಧಿಯನ್ನು ಹೆಚ್ಚಿಸಿ ಮಿತವ್ಯಯ ಸಾಧಿಸುವುದು.
- ತಾಲೂಕು ಹಾಗೂ ಗ್ರಾಮಮಟ್ಟದಲ್ಲೂ ಉನ್ನತ ಗುಣಮಟ್ಟದ ಕ್ರೀಡಾ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು.
- ಕ್ರೀಡಾಂಕಣಗಳಿಗೆ ನೀರುಣಿಸುವುದು, ರೋಲ್ ಮಾಡುವುದು, ಮಣ್ಣು ಬದಲಾವಣೆ ಮಾಡುವುದು, ವಿದ್ಯುತ್ ದೀಪಗಳ ನಿರ್ವಹಣೆ ಸೇರಿದಂತೆ ದೈನಂದಿನ, ಮಾಸಿಕ ಹಾಗೂ ವಾರ್ಷಿಕ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಅನುದಾನ ಒದಗಿಸುವುದು.
- ಕ್ರೀಡಾಂಗಣಗಳಲ್ಲಿ ಎಲ್ಲ ಕ್ರೀಡೆಗಳ ತರಬೇತಿಗೆ ಪೂರಕವಾದ ಕ್ರೀಡಾ ಸಲಕರಣೆಗಳಾದ, ವಾಲ್‌ಬಾರ್, ಲ್ಯಾಡರ್, ಬ್ಯಾಲೆನ್ಸಿಂಗ್ ಬೀಮ್, ಪಾಲಿಮೆಟ್ರಿಕ್ ಬಾಕ್ಸ್, ಸ್ವಿಸ್ ಬಾಲ್, ಸ್ಪ್ರಿಂಗ್ ಬೋರ್ಡ್, ಟ್ರಾಂಪೊಲೈನ್, ಸ್ಕಿಪಿಂಗ್ ರೋಪ್, ಥೆರಾ ಬ್ಯಾಂಡ್ಸ್, ಲೂಪ್ ಬ್ಯಾಂಡ್ಸ್, ವೇಟ್ ಟ್ರೈನಿಂಗ್ ಸೆಟ್ಸ್, ಮಶ್ರೂಮ್ ಹರ್ಡಲ್ಸ್, ಬ್ಯಾಲೆನ್ಸಿಂಗ್ ಬಾಲ್ಸ್ ನಂತಹ ಸೌಲಭ್ಯಗಳನ್ನು ಒದಗಿಸುವುದು.
- ಸಣ್ಣ ವಿಸ್ತೀರ್ಣದ ಲಭ್ಯ ಸರಕಾರ ನಿವೇಶನಗಳಲ್ಲಿ 1 ರಿಂದ 3 ಕ್ರೀಡೆಗಳನ್ನು ಆಯೋಜಿಸಲು ಅನುಕೂಲವಾಗುಂತೆ ಆಯಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ಉತ್ತೇಜ ನೀಡುವುದು.
- ಸ್ಥಳೀಯ ಯೋಜನಾ ಪ್ರಾಧಿಕಾರಗಳು ನಿರ್ಮಿಸಿರುವ ಬಡಾವಣೆಗಳಲ್ಲಿ ಲಭ್ಯವಿರುವ ಕಡಿಮೆ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಷನಗಳನ್ನು ಯುವಜನ ಸೇವಾ ಕ್ರೀಡಾ ಇಲಾಖೆ ಪಡೆದು ಕ್ರೀಡಾ ಮೂಲಸೌಖರ್ಯಗಳನ್ನು ನಿರ್ಮಿಸುವುದು.
- 400 ಮತ್ತು 200 ಮೀ ಓಟದ ಸಿಂಥಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಸೂಕ್ತ ಅಳತೆಯ ಇಲಾಖೆಯ ನಿವೇಶನ ಲಭ್ಯವಿಲ್ಲದ ಸ್ಥಳಗಳಲ್ಲಿ ಸರಕಾರಿ ಸ್ವಾಮ್ಯದ ಇತರೇ ಮೈದಾನಗಳಲ್ಲಿ ಸುಸಜ್ಜಿತ ಅಥ್ಲೆಟಿಕ್ ಟ್ರ್ಯಾಕ್‌ಗಳನ್ನು ಕ್ರೀಡಾ ಇಲಾಖೆಯ ವತಿಯಿಂದ ಅಭಿವೃದ್ಧಿಪಡಿಸುವುದು.
- ಹಳ್ಳಿಗೊಂದು ಆಟದ ಮೈದಾನ ಮತ್ತು ಬಡವಾಣೆಗೊಂದು ಆಟದ ಮೈದಾನ ಯೋಜನೆಯನ್ನು ಜಾರಿಗೆ ತರುವುದು.
- ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮತ್ತು ನಿರ್ವಹಣೆ. ಬೆಳಿಗ್ಗೆ 5:30 ರಿಂದ 8 ಮತ್ತು ಸಂಜೆ 4:30ರಿಂದ 6:30ರ ವರೆಗೆ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ನೀಡುವುದು.
- ಒಳಾಂಗಣ ಕ್ರೀಡಾಂಗಣಲ್ಲಿ ಇಂಧನ ಉಳಿತಾಯ ಮಾಡುವ ಉದ್ದೇಶದಿಂದ ಅರೆ ಪಾರದರ್ಶಕ ಛಾವಣಿ ನಿರ್ಮಾಣ ಮಾಡುವುದು.
- ಕ್ರೀಡಾಂಗಣಗಳ ಸುತ್ತಮುತ್ತಲಿನ ಅಂಗಡಿ ಕೋಣೆಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ತಂಬಾಕು ಮತ್ತಿತರ ಮಾದಕ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡುವಂತಿಲ್ಲ.
ಹೀಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕ್ರೀಡಾಭಿವೃದ್ಧಿಗೆ ಹೊಸ ರೂಪ ಸಿಗಲಿದ್ದು, ಉತ್ತಮ ಗುಣ ಮಟ್ಟದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೊಸ ಯೋಜನೆ ರೂಪುಗೊಂಡಿದೆ. ಈ ಸಮಿತಿಯಲ್ಲಿ ಮಾಜಿ ಕ್ರೀಡಾಪಟುಗಳೇ ಇರುವುದು ವಿಶೇಷ.
ಇದನ್ನೂ ಓದಿ : Wrestlers’ protests: ಮಾನಕ್ಕಿಂತ ಪದವಿ ಮುಖ್ಯವಾದಾಗ ಪಿಟಿ ಉಷಾ ಮಾತನಾಡುತ್ತಾರೆ!
ಇದನ್ನೂ ಓದಿ : Boxing Viraj Mendon : ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಲ್ಪೆಯ ಕಣ್ಣಿ ಹುಡುಗ ವಿರಾಜ್ ಮೆಂಡನ್