ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಗೆಲ್ಲಲು ಇರುವ ಅನ್ಯ ಮಾರ್ಗಗಳು!
ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಎಂಟನೇ ಸೋಲು.Indian won by 7 wicket against Pakistan ಶನಿವಾರ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 7 ವಿಕೆಟ್ ಅಂತರದಲ್ಲಿ ಗೆದ್ದಿದೆ. ರೋಚಕ ಕದನ, ರಣ ರೋಚಕ, ಸಮರ ಎಂದೆಲ್ಲ ಬರೆದುಕೊಂಡಿದ್ದ ಮಾಧ್ಯಮಗಳಿಗೆ ನಿರಾಸೆಯಾಗಿತ್ತು. ಭಾರತ ಗೆದ್ದಿತ್ತು. ಭಾರತವನ್ನು ಸೋಲಿಸುವುದು ಹೇಗೆ How can Pakistan win against Indian in World Cup? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದಕ್ಕೊಂದು ಪರಿಹಾರ ಇಲ್ಲಿದೆ. ಅದು ಪಾಕಿಸ್ತಾನಕ್ಕೂ ಗೊತ್ತಿರಲಿಕ್ಕಿಲ್ಲ. ನಕ್ಕು ಸುಮ್ಮನಾಗಿ….
ಪಾಕಿಸ್ತಾನ ಹಾಗೂ ಭಾರತ ತಂಡಗಳು ಇದುವರೆಗೂ ಎಂಟು ಬಾರಿ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿವೆ. ಎಂಟರಲ್ಲೂ ಪಾಕ್‌ಗೆ ಸೋಲಿನ ನಂಟು. 2023 ರಲ್ಲಿ ಭಾರತಕ್ಕೆ 7 ವಿಕೆಟ್ ಜಯ, 2019ರಲ್ಲಿ ಭಾರತಕ್ಕೆ 89 ರನ್ ಜಯ, 2015ರಲ್ಲಿ ಭಾರತಕ್ಕೆ 76 ರನ್ ಜಯ. 2011ರಲ್ಲಿ ಭಾರತಕ್ಕೆ 29 ರನ್ ಜಯ, 2003 ರಲ್ಲಿ ಭಾರತಕ್ಕೆ 6 ವಿಕೆಟ್ ಜಯ, 1999ರಲ್ಲಿ ಭಾರತಕ್ಕೆ 47 ರನ್ ಜಯ, 1996ರಲ್ಲಿ ಭಾರತಕ್ಕೆ 39 ರನ್ ಜಯ, 1992ರಲ್ಲಿ ಭಾರತಕ್ಕೆ 43 ರನ್‌ಗಳ ಅಂತರದಲ್ಲಿ ಜಯ.
ಪಾಕಿಸ್ತಾನ ಗೆಲ್ಲಬೇಕಾದರೆ ಹೀಗೆ ಮಾಡಬೇಕು…
ಹೀಗೆ ಭಾರತ ತಂಡ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಆಡಿದ 8 ಪಂದ್ಯಗಳಲ್ಲೂ ಸೋಲಿನ ನಂಟು ಕಂಡಿದೆ. ಆದರೆ ಪಾಕಿಸ್ತಾನ ಈ ಅವಮಾನವನ್ನು ತಡೆಯಲು ಬೇರೆ ದಾರಿಯನ್ನು ಕಂಡುಕೊಳ್ಳಬೇಕಾದ ಅಗತ್ಯ ಇದೆ. ಅದು ಬಹಳ ಸರಳ.
ಅಲ್ಪ ಸಂಖ್ಯಾತ ಕೋಟಾದಲ್ಲಿ ಪಾಕಿಸ್ತಾನಕ್ಕೆ ಇಂತಿಷ್ಟು ರನ್‌ಗಳನ್ನು ಮುಂಚಿತವಾಗಿಯೇ ನೀಡುವುದು.
ಒಬ್ಬ ಆಟಗಾರನಿಗೆ ಎರಡೆರಡು ಬಾರಿ ಆಡುವ ಅವಕಾಶ ಕಲ್ಪಿಸುವುದು.
ಪಂದ್ಯದ ವೇಳಾಪಟ್ಟಿ ಹಾಕುವಾಗ ಸೆಮಿಫೈನಲ್ ವರೆಗೂ ಭಾರತ ತಂಡ ಸಿಗದಂತೆ ನೋಡಿಕೊಳ್ಳಲು ಐಸಿಸಿಗೆ ಮನವಿ ಮಾಡುವುದು.
ಭಾರತದ ವಿರುದ್ಧದ ಪಂದ್ಯಗಳಿಗೆ ಪಾಕಿಸ್ತಾನದ ಅಂಪೈರ್‌ಗಳನ್ನೇ ನಿಯೋಜಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನು ವಿನಂತಿಸಿಕೊಳ್ಳುವುದು.
ಭಾರತ-ಪಾಕ್ ಭಾಯಿ ಭಾಯಿ ಎನ್ನುವಂತೆ ಎರಡೂ ತಂಡಗಳ ಉತ್ತಮ ಆಟಗಾರರನ್ನು ಎರಡೂ ತಂಡಗಳಲ್ಲಿ ಸೇರಿಸಿ ತಂಡ ನಿರ್ಮಿಸಿ ಪಂದ್ಯಗಳನ್ನು ಆಯೋಜಿಸುವುದು.
ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ಆಡುವುದೇ ಇಲ್ಲ ಎಂದು ಐಸಿಸಿ ಹಾಗೂ ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸುವುದು.
ಭಾರತವನ್ನು ಹೊರಗಿಟ್ಟು ಪ್ರತ್ಯೇಕವಾದ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುವುದು. ಉಗಾಂಡ, ನಮೀಬಿಯಾ, ಚೀನಾ, ಜಪಾನ್, ಪೋರ್ಚುಗಲ್, ಕಾಂಬೋಡಿಯಾ, ಅರ್ಜೆಂಟೀನಾ, ಸ್ಪೇನ್ ಸೇರಿದಂತೆ ಕ್ರಿಕೆಟ್ ಆಡದ ತಂಡಗಳನ್ನು ಸೇರಿಸಿಕೊಳ್ಳುವುದು.
ಭಾರತ ಹಾಗೂ ಪಾಕಿಸ್ತಾನದ ಪಂದ್ಯವಿರುವಾಗ ಅಂಗಣಕ್ಕೆ ಪ್ರೇಕ್ಷಕರು ಬಾರದಂತೆ ನೋಡಿಕೊಳ್ಳುವುದು. ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತದೆ.
ಭಾರತ ಹಾಗೂ ಪಾಕಿಸ್ತಾನ ಪಂದ್ಯವಿರುವಾಗ ಭಾರತದ ಸೀನಿಯರ್ ತಂಡದ ಬದಲು ಯಾವುದಾರೂ ಲೀಗ್ ತಂಡಗಳನ್ನು ಕಳುಹಿಸಿ ಪ್ರಯೋಗ ಮಾಡುವಂತೆ ಮನವಿ ಮಾಡುವುದು.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಟಾಸ್ ಮೂಲಕ ನಿರ್ಧಾರ ಮಾಡುವುದು. ಭಾರತ ಗೆಲ್ಲುತ್ತದೆ ಎಂಬುದು ಖಚಿತವಾಗಿರುವಾಗ ಸುಮ್ಮನೆ ಹಣ ಖರ್ಚು ಮಾಡುವುದನ್ನು ತಡೆಯಲು.
ಸ್ನೇಹಿತರೇ,
ಈ ಬರಹ ಕೇವಲ ತಮಾಷೆಗಾಗಿ, ಕ್ರಿಕೆಟ್ ಬಗ್ಗೆ ಬಹಳ ಗಂಭೀರವಾಗಿ ಯೋಚಿಸುವವರು ಓದಲಿ ಎಂದು.
ಕ್ರೀಡೆ ನಡೆಯುವುದು ಎರಡು ದೇಶಗಳ ನಡುವೆ ಪ್ರೀತಿ ಸೌಹಾರ್ಧ ಹೆಚ್ಚಿಸುವ ಸಲುವಾಗಿ, ಭಾರತ ಹಾಗೂ ಪಾಕಿಸ್ತಾನ ನಡುವೆ ರಾಜಕಾರಣಿಗಳು ನಡೆಸುವ ದ್ವೇಷ ಒಂದು ಭಾಗ, ಆದರೆ ಕ್ರೀಡೆಯಲ್ಲಿ ಎರಡೂ ದೇಶಗಳ ನಡುವೆ ಸೌಹಾರ್ದತೆ ಇದೆ,