Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿರಾಟ್‌ ಕೊಹ್ಲಿಯ ಒಂದು ಪೋಸ್ಟ್‌ಗೆ 11 ಕೋಟಿ ರೂ. ಸುಳ್ಳಾ?

ಎರಡು ತಿಂಗಳ ಹಿಂದೆ ಸುದ್ದಿಯೊಂದು ಪ್ರಕಟವಾಗಿತ್ತು. ವಿರಾಟ್‌ ಕೊಹ್ಲಿ Virat Kohli ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಾಕಿದರೆ 11 ಕೋಟಿ ರೂ. ಸಂಭಾವನೆ ಸಿಗುತ್ತದೆ ಎಂದು. ಆದರೆ ಇದು ಸತ್ಯಕ್ಕೆ ದೂರವಾದುದೇ? Virat Kohli’s Instagram earnings is not True?

ವಿರಾಟ್‌ ಕೊಹ್ಲಿ ಅವರನ್ನು ಸೋಷಿಯಲ್‌ ಮೀಡಿಯಾದಲ್ಲಿ  25 ಕೋಟಿಗೂ ಹೆಚ್ಚು ಜನರು ಫಾಲೊವರ್ಸ್‌ ಇದ್ದಾರೆ. ಆದ್ದರಿಂದ ಅವರಿಗೆ ಒಂದು ಪೋಸ್ಟ್‌ಗೆ 13,84,000 ಡಾಲರ್‌ ಸಿಗುತ್ತದೆ ಎಂದು ಪ್ರಕಟವಾಗಿತ್ತು. ಇನ್‌ಸ್ಟಾಗ್ರಾಮ್‌ ಶ್ರೀಮತರ ಪಟ್ಟಿಯಲ್ಲಿ 14ನೇ ಸ್ಥಾನ ಎಂದೂ ತಿಳಿಸಿತ್ತು. ಆದರೆ ವಿರಾಟ್‌ ಕೊಹ್ಲಿ “ ನನಗೆ ಸೋಷಿಯಲ್‌ ಮೀಡಿಯಾದಿಂದ ಬರುತ್ತಿದೆ ಎನ್ನಲಾದ ಸಂಭಾವನೆ ಸತ್ಯಕ್ಕೆ ದೂರವಾದುದು,” ಎಂದು ಸ್ಪಷ್ಟನೆ ನೀಡಿದ್ದಾರೆ.

ವಿರಾಟ್‌ ಕೊಹ್ಲಿ ಸದ್ಯ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ಕ್ರೀಡಾಟುಗಳಲ್ಲಿ ಒಬ್ಬರು. ಅಂದಾಜು ಸಾವಿರ ಕೋಟಿ ಒಡೆಯ. ವರ್ಷಕ್ಕೆ 16 ಕೋಟಿ ವೇತನವೇ ಇದೆ. ಜಾಹೀರಾತಿನಿಂದ 532 ಕೋಟಿ ಗಳಿಕೆಯಾಗಿದೆ. Audi, MRF, PUMA ಮೊದಲಾದ ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ವಿರಾಟ್‌ ಕೊಹ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದ್ದಾರೆ. ಮೊದಲ ಎರಡು ಸ್ಥಾನ ಸಚಿನ್‌ ತೆಂಡೂಲ್ಕರ್‌ ಹಾಗೂ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಿನಲ್ಲಿದೆ.  


administrator