Monday, December 30, 2024

ದೇಶಕ್ಕೆ ಕೀರ್ತಿ ತಂದ ತಿಪಟೂರಿನ ಓಟಗಾರ ಶರತ್‌

ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Tiptur Blind runner Sharath won the silver medal in Asian Para Games

ಹುಟ್ಟಿನಿಂದ ದೃಷ್ಟಿ ದಿವ್ಯಾಂಗರಾಗಿ ಹುಟ್ಟಿದ್ದ ಶರತ್‌ ಅವರ ಈ ಸಾಧನೆ ಮುಂದಿನ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸ್ಫೂರ್ತಿಯಾಗಿದೆ. ಶಂಕರಪ್ಪ ಹಾಗೂ ಭಾಗ್ಯಮ್ಮ ಅವರ ಮಗನಾಗಿರುವ ಶರತ್‌ ಈ ಹಿಂದೆಯೂ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಚೀನಾದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ನ 1500 ಮೀಟವನ್ನು 4 ನಿಮಿಷ ಹಾಗೂ 13 ಸೆಕೆಂಡುಗಳಲ್ಲಿ ಓಡಿ ಗುರಿ ಬೆಳ್ಳಿಯ ಪದಕ ಗೆದ್ದರು.

ಸಹಾಯ ಪಡೆಯದೆ ಓಟ: ಸಾಮಾನ್ಯವಾಗಿ ದೃಷ್ಠಿ ವಿಶೇಷಚೇತನರು ಬೇರೆಯವರ ಸಹಾಯ ಪಡೆದು ಓಡುತ್ತಾರೆ. ಆದರೆ ಶರತ್‌ ಯಾರ ಸಹಾಯವನ್ನೂ ಪಡೆಯದೆ 1500 ಮೀ. ಓಟವನ್ನು ಪೂರ್ಣಗೊಳಿಸಿರುವುದು ವಿಶೇಷ. “ಸಹಾಯಕರನ್ನು ಪಡೆಯಬಹುದು, ಆದರೆ ಪಡೆಯಲೇಬೇಕೆಂಬ ಕಡ್ಡಾಯವಿಲ್ಲ. ಅಂದಾಜಿನಲ್ಲಿ ಓಡಬಹುದು. ನಾನು ಹುಟ್ಟಿನಿಂದ ದೃಷ್ಟಿಹೀನ. 95% ಕಾಣುವುದಿಲ್ಲ,” ಎಂದು sportsmail ಜೊತೆ ಮಾತನಾಡಿದ ಶರತ್‌ ಹೇಳೀದ್ದಾರೆ.

ಆಶಾಕಿರಣ ಬ್ಲೈಂಡ್‌ ಸ್ಕೂಲ್‌ನಲ್ಲಿ 1-10ರ ತನಕ ಓದಿದ್ದ ಶರತ್‌ ನಂತರ ಉದಯ ಭಾರತಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು. ಬಳಿಕ ಕೆಆರ್‌ಪುರಂ ಪದವಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿರುತ್ತಾರೆ.

ಶರತ್‌ ಅವರ ಕ್ರೀಡಾ ಬದುಕಿನಲ್ಲಿ ರಾಹುಲ್‌ ಬಾಲಕೃಷ್ಣ ಅವರ ಪಾತ್ರ ಪ್ರಮುಖವಾಗಿತ್ತು. ಜೊತೆಯಲ್ಲಿ ತರಬೇತುದಾರರಾದ ಸತ್ಯನಾರಾಯಣ ಹಾಗೂ ಶಿವಾನಂದ ಅವರನ್ನು ಶರತ್‌ ಸದಾ ಸ್ಮರಿಸುತ್ತಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿರುವ ಶರತ್‌, ಈ ಹಿಂದಿನ ಏಷ್ಯನ್‌ ಪ್ಯಾರಾ ಗೇಮ್ಸ್‌ಗೆ ಆಯ್ಕೆಯಾಗಿದ್ದರು, ಆದರೆ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಆದರೆ ಈ ಬಾರಿ ಬೆಳ್ಳಿ ಪದಕ ಗೆದ್ದಿರುವ ಶರತ್‌, ಪ್ಯಾರಿಸ್‌ ಪ್ಯಾರಾಲಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.

Related Articles