ಪ್ರದೀಪ್ ಪಡುಕರೆ, Pradeep Padukare
ಪುಟ್ಬಾಲ್ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಗೆಲ್ಲುವವರು ಯಾರು ಎಂಬ ಕುತೂಹಲಕ್ಕೆ ಕೊನೆಗು ತೆರೆ ಬಿದ್ದಿದೆ. ನಿರೀಕ್ಷೆಯಂತೆ ಅರ್ಜೇಂಟೀನವನ್ನ ವಿಶ್ವಚಾಂಪಿಯನ್ ಪಟ್ಟಕ್ಕೇರಿಸಿದ ಲಿಯೋನೆಲ್ ಮೆಸ್ಸಿ ಎಂಟನೇ ಬಾರಿ Ballon dʼOr ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. Argentinian football legend Lionel Messi receives Ballon d’Or title for eighth time
ತನ್ನದೆ ಹೆಸರಲ್ಲಿದ್ದ ಏಳು ಬ್ಯಾಲನ್ ಡಿ’ಓರ್ ವಿಶ್ವದಾಖಲೆಯನ್ನ ಏಂಟಕ್ಕೆ ವಿಸ್ತರಿಸಿದ್ದಾರೆ. ಮೆಸ್ಸಿ ಸತತ ನಾಲಕ್ಕು ಬಾರಿ ಈ ಪ್ರಶಸ್ತಿಯನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ತನ್ನ 23ನೇ ಹರಯದಲ್ಲಿ ಬ್ಯಾಲನ್ ಡಿ’ಓರ್ ಗೆದ್ದಾಗಲು ಮತ್ತು ಈಗ 36ನೇ ಪ್ರಾಯದಲ್ಲಿ ಇಂದು ಈ ಪ್ರಶಸ್ತಿ ಪಡೆಯುವಾಗ ಸಂಪೂರ್ಣ ಸಭಾಂಗಣ ಎದ್ದು ನಿತ್ತು ಗೌರವ ಸಲ್ಲಿಸಿತು (Standing ovation). ಈ ಮೂಲಕ ಎರೆಡೆರಡು ಬಾರಿ ಈ ಗೌರವ ಪಡೆದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗು ಪಾತ್ರರಾದರು.
ವರ್ಷ ಪೂರ್ತಿ ಅದ್ಭುತ ಫಾರ್ಮ್ ಕಾಯ್ದುಕೊಂಡು ಈ ಕ್ಯಾಲೆಂಡರ್ ವರ್ಷದಲ್ಲಿ ಐವತ್ತಕ್ಕೂ ಹೆಚ್ಚು ಗೋಲು ಸಿಡಿಸಿ ಹಲವು ದಾಖಲೆ ಧೂಳಿಪಟ ಮಾಡಿದ ನಾರ್ವೆ ಮತ್ತು ಮ್ಯಾಂಚೆಸ್ಟರ್ ಸಿಟಿಯ ಫಾರ್‌ವಾರ್ಡ್ ಆಟಗಾರ ಅರ್ಲಿಂಗ್ ಹಾಲೆಂಡ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು ಕೂಡ ವರ್ಷವೊಂದರಲ್ಲಿ ಅತಿ ಹೆಚ್ಚು ಗೋಲ್ ಸಿಡಿಸಿದವರಿಗೆ ನೀಡುವ GERD MULLER ಟ್ರೋಪಿ ಗೆದ್ದು ಸಂಭ್ರಮಿಸಿದರು. ಮ್ಯಾಂಚೆಸ್ಟರ್ ಸಿಟಿ ತನ್ನ ಮೊಟ್ಟ ಮೊದಲ ಚಾಂಪಿಯನ್ಸ್ ಲೀಗ್ ಗೆಲ್ಲುವಲ್ಲಿ, ಪ್ರೀಮಿಯರ್ ಲೀಗ್, FA ಕಪ್ ಗೆದ್ದು ಟ್ರೆಬಲ್ ಸಾಧಿಸುವಲ್ಲಿ ಹಾಲೆಂಡ್ ಪಾತ್ರ ಮಹತ್ತರವಾಗಿತ್ತು.
ಹಾಗೆ ಈ ಹಿಂದೆ PSG ಯಲ್ಲಿ ಮೆಸ್ಸಿಯ ಜೊತೆಯಲ್ಲಿ ಆಡಿದ್ದು, ವಿಶ್ವಕಪ್ ಫೈನಲ್‌ನಲ್ಲಿ ಮೆಸ್ಸಿಗೆ ಸರಿಸಮವಾಗಿ ಆಡಿ ಹ್ಯಾಟ್ರಿಕ್ ಸಿಡಿಸಿಯು ಪೆನಾಲ್ಟಿಯಲ್ಲಿ ಫೈನಲ್ ಸೋತರು ಕೂಡ ತನ್ನ ಆಕರ್ಷಕ ಆಟದಿಂದ ಪ್ರಪಂಚದಾದ್ಯಂತ ಮನೆಮಾತಾಗಿದ್ದ ಫ್ರಾನ್ಸ್ ಆಟಗಾರ ಕಿಲಿಯನ್ ಎಂಬಪ್ಪೆ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳಾ ಬಾಲ್‌ಆನ್ ಡಿ’ಓರ್ ಪ್ರಶಸ್ತಿಯನ್ನ ಸ್ಪೇನ್ ಮತ್ತು ಬಾರ್ಸಿಲೋನದ ಸ್ಟಾರ್ ಆಟಗಾರ್ತಿ ಪೆಮಿನಿನ್ ಏಟನ ಬೊನ್ಮಟಿ (Feminine Aitana Bonmati) ಮುಡಿಗೇರಿಸಿಕೊಂಡರು. ಅತ್ಯುತ್ತಮ ಗೋಲ್ ಕೀಪರ್‌ಗೆ ಕೊಡ ಮಾಡುವ Yachine Trophy ಯನ್ನ ಅರ್ಜೆಂಟೀನಾ ಪರ ವಿಶ್ವಕಪ್ ಫೈನಲ್ ಕೊನೆಯ ನಿಮಿಷದಲ್ಲಿ ಪವಾಡ ಸದೃಷ ಗೋಲ್ ಸೇವ್ ಮಾಡಿ, ವಿಶ್ವಕಪ್ ತಂದುಕೊಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದ ಎಮಿಲಿನೊ ಮಾರ್ಟೆನೇಜ್ ಪಡೆದುಕೊಂಡರು. ಇಂಗ್ಲೀಷ್ ಕ್ಲಬ್ Aston villa ಪರ ಕೂಡ ಅವರು ಈ ವರ್ಷ ಅದ್ಭುತ ಆಟವಾಡಿದ್ದರು. ಅತ್ಯುತ್ತಮ ಯುವ ಆಟಗಾರನಿಗೆ ನೀಡುವ Kopa Trophy U21 (youth player of the season) ಪ್ರಶಸ್ತಿಯು ಇಂಗ್ಲೆಂಡ್ ಮತ್ತು ರಿಯಲ್ ಮ್ಯಾಡ್ರಿಡ್‌ನ ಜುಡ್ ಬೆಲ್ಲಿಂಗ್‌ಹ್ಯಾಮ್ ಮಡಿಲಿಗೆ ಸೇರಿತು. ಮ್ಯಾಂಚೆಸ್ಟರ್ ಸಿಟಿ ಪುರುಷರ ತಂಡ ಮತ್ತು ಬಾರ್ಸಿಲೋನ ಮಹಿಳಾ ತಂಡ best club of the year ಪ್ರಶಸ್ತಿಯನ್ನು ಬಾಚಿಕೊಂಡಿತು.
ಸಾಕ್ರೆಟೀಸ್ ಅವಾರ್ಡ್ ವಿನ್ಸಿಯಸ್ ಜೂ.ಗೆ
ಫುಟ್ಬಾಲ್ ಆಟಗಾರರಿಗೆ ಸಮಾಜದೆಡೆಗೆ ಇರುವ ತುಡಿತ, ಪ್ರೀತಿ ಮತ್ತು ಮಾನವೀಯತೆಯನ್ನ ಗಮನಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಸಮಾಜದೊಂದಿಗೆ ಸದಾ ಬೆರೆಯುವ ಬ್ರೆಜಿಲ್ ಮತ್ತು ರೀಯಲ್ ಮ್ಯಾಡ್ರಿಡ್‌ನ ಸ್ಟಾರ್ ಸ್ರೈಕರ್ ವಿನ್ಸಿಯಸ್ ಜೂನಿಯರ್ ಈ ವಿಶೇಷ ಗೌರವಕ್ಕೆ ಪಾತ್ರರಾದರು. ಶಾಲಾ ಮಕ್ಕಳಿಗೆ ಫುಟ್ಬಾಲ್‌ನಲ್ಲಿ ಉತ್ತೇಜನ ನೀಡುವ ಸಲುವಾಗಿ ವಿನ್ಸಿಯಸ್ ಇನಸ್ಟಿಟ್ಯೂಟ್ ಹೆಸರಿನಲ್ಲಿ ಬ್ರೇಜಿಲ್‌ನ ಹದಿನೈದು ಶಾಲೆಗಳಲ್ಲಿ ಹತ್ತು ಸಾವಿರ ಸ್ಟೂಡೆಂಟ್ಸ್‌ಗಳಿಗೆ ಉಚಿತ ಶಿಕ್ಷಣ ಮತ್ತು ತರಬೇತಿ ನೀಡುತ್ತಿದ್ದಾರೆ. 500ಕ್ಕೂ ಅಧಿಕ ಶಿಕ್ಷಕರಿಗೂ ಬದುಕು ಕಟ್ಟಿ ಕೊಟ್ಟಿದ್ದಾರೆ. ಈ ಸಮಾಜಮುಖಿ ಕೆಲಸದಲ್ಲಿ ಅವರ ಸ್ನೇಹಿತರು, ಕುಟುಂಬ ಕೂಡ ಅವರಿಗೆ ಸಾಥ್ ನೀಡುತ್ತಿದೆ. ಜೊತೆಗೆ ವರ್ಣ ಬೇಧ ನೀತಿ (apartheid) ವಿರುಧ್ದ ಕೂಡ ಹೊರಾಟ ಮಾಡುತ್ತಿರುವ ಆಟಗಾರ ಇವರು, ಈ ಹೋರಾಟ ನಿಲ್ಲದು ಎಂದು ಪ್ರಶಸ್ತಿ ಪಡೆಯುವ ವೇಳೆಯು ಹೇಳಿದ್ದಾರೆ.