Friday, November 22, 2024

 ವಾಂಖೆಡೆಯಲ್ಲಿ ಸಚಿನ್‌ ತೆಂಡೂಲ್ಕರ್‌ ಮೂರ್ತಿ ಅನಾವರಣ

ಮುಂಬೈ: ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ಆಟಗಾರ ಸಚಿನ್‌ ತೆಂಡೂಲ್ಕರ್‌ ಮೂರ್ತಿ ಅವರ ಮನೆಯಂಗಣ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ಅನಾವರಣಗೊಳ್ಳಲಿದೆ. Sachin Tendulkar’s statue to be unveiled at Wankhede Stadium.

ಶ್ರೀಲಂಕಾ ಹಾಗೂ ಭಾರತ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ವತಃ ಸಚಿನ್‌ ತೆಂಡೂಲ್ಕರ್‌ ಅವರೇ ಪಾಲ್ಗೊಳ್ಳಲಿದ್ದಾರೆ. ಜೊತೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಉಪ ಉಮುಖ್ಯಮಂತ್ರಿಗಳೂ ಈ ಸಂದರ್ಭದಲ್ಲಿ ಹಾಜರಿರುತ್ತಾರೆ.

ಸಚಿನ್‌ ತೆಂಡೂಲ್ಕರ್‌ ಅವರ 50 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮುಂಬೈ ಕ್ರಿಕೆಟ್‌ ಸಂಸ್ಥೆ ಈ ಯೋಜನೆಯನ್ನು ರೂಪಿಸಿತ್ತು ಮತ್ತು ಅದನ್ನು 2023ರ ವಿಶ್ವಕಪ್‌ನಲ್ಲಿ ಅನಾವರಣಗೊಳಿಸಲು ತೀರ್ಮಾನಿಸಿತ್ತು. ಭಾರತ ತಂಡ 2011ರ ವಿಶ್ವಕಪ್‌ ಗೆದ್ದಿರುವುದು ವಾಂಖೆಡೆ ಕ್ರೀಡಾಂಗಣದಲ್ಲಿ, ಸಚಿನ್‌ ತೆಂಡೂಲ್ಕರ್‌ 200ನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿ ವಿದಾಯ ಹೇಳಿದ್ದೂ ವಾಂಖೆಡೆ ಕ್ರೀಡಾಂಗಣದಲ್ಲಿ. ಆದ್ದರಿಂದ ಸಚಿನ್‌ ತೆಂಡೂಲ್ಕರ್‌ ಅವರ ಮನೆಯಂಗಣದಲ್ಲಿ ನಾಳೆಯಿಂದ ಅವರ ಮೂರ್ತಿ ರಾರಾಜಿಸಲಿದೆ. ಅಹಮದ್‌ನಗರದ ಶಿಲ್ಪಿ ಪ್ರಮೋದ್‌ ಕಾಂಬ್ಳೆ ಅವರು ಸಚಿನ್‌ ಮೂರ್ತಿಯನ್ನು ನಿರ್ಮಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌ ಅವರ ಮನೆಯಲ್ಲಿ ಬೃಹತ್‌ ಗಾತ್ರದ ಸಿಂಹದ ಶಿರದ ಕೆತ್ತನೆ ಮಾಡಿರುವುದು ಇದೇ ಪ್ರಮೋದ್‌ ಕಾಂಬ್ಳೆ. ಶಿರಡಿಯಲ್ಲಿರುವ 70 ಅಡಿ ಎತ್ತರದ ಸಾಯಿ ಬಾಬಾ ಮೂರ್ತಿಯನ್ನು ನಿರ್ಮಿಸಿರುವುದು ಕೂಡ ಪ್ರಮೋದ್‌ ಕಾಂಬ್ಳೆ.

Related Articles