ಕೋಲ್ಕೊತಾ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಪಂದ್ಯಗಳು ಕೋಲ್ಕೊತಾದ ಈಡನ್ ಗಾರ್ಡನ್‌ನಲ್ಲಿ ವಿಶ್ವಕಪ್ ಪಂದ್ಯವನ್ನಾಡುವಾಗ ಪ್ಯಾಲಿಸ್ತೇನ್ ಧ್ವಜ ಹಾರಿಸಿದ ನಾಲ್ವರು ಕ್ರಿಕೆಟ್ ಅಭಿಮಾನಿಗಳನ್ನು ಪೊಲೀಸರು ಬಂಧಿಸಿದ್ದಾರೆ. Four people detained for waving Palestinian Flag during Pak-Bangladesh Match
ನಾಲ್ವರಲ್ಲಿ ಇಬ್ಬರು ಜಾರ್ಖಂಡ್ ಮೂಲದವಾದರೆ ಇಬ್ಬರು ಕೋಲ್ಕೊತಾ ಇಕ್ಬಾಲ್‌ಪುರ ಹಾಗೂ ಹೌರಾದವರು ಎಂದು ಪೊಲೀಸರು ತಿಳಿಸಿದ್ದಾರೆ. “6ನೇ ನಂಬರ್‌ನ ಗೇಟ್‌ನಲ್ಲಿ ಇಬ್ಬರು ಪ್ಯಾಲಿಸ್ತೇನ್ ಧ್ವಜ ಹಾರಿಸುತ್ತಿರುವುದನ್ನು ಗಮನಿಸಿ ಬಂಧಿಸಿದ್ದೇವೆ, ಇನ್ನಿಬ್ಬರನ್ನು ಬ್ಲಾಕ್ ಜಿ1ರಲ್ಲಿ ಬಂಧಿಸಿದ್ದೇವೆ. ಅವರ ಉದ್ದೇಶ ಏನೆಂಬುದನ್ನು ಇನ್ನೂ ತಿಳಿಯಬೇಕಾಗಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
“ಗೇಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಈ ಕ್ರಿಕೆಟ್ ಅಭಿಮಾನಿಗಳು ಯಾವ ಕಾರಣಕ್ಕಾಗಿ ಪ್ಯಾಲಿಸ್ತೇನ್ ಧ್ವಜ ಹಿಡಿದಿದ್ದಾರೆಂದು ಗೊತ್ತಿರಲಿಲ್ಲ. ಮೊದಲು ವಷಕ್ಕೆ ತೆಗೆದುಕೊಂಡಿದ್ದಾರೆ. ಅವರು ಯಾವುದೇ ರೀತಿಯ ಘೋಷಣೆಗಳನ್ನೂ ಕೂಗಿಲ್ಲ,” ಎಂಬುದನ್ನು ಪೊಲೀಸರು ಸ್ಪಷ್ಟಪಿಸಿದ್ದಾರೆ.
ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ನಡೆಯುತ್ತಿರುವುದರಿಂದ ಈ ರೀತಿಯಲ್ಲಿ ಧ್ವಜ ಪ್ರದರ್ಶನ ಮಾಡುವುದು ಸೂಕ್ತವಲ್ಲ. ಅದರಲ್ಲೂ ಅಂತಾರಾಷ್ಟ್ರೀಯ ಪಂದ್ಯವೊಂದರ ವೇಳೆ ವಿವಾದಿತ ರಾಷ್ಟ್ರಗಳ ಧ್ವಜ ಹಾರಿಸುವುದು ಸೂಕ್ತವಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಂದ ಹಾಗೆ ಇಸ್ರೇಲ್‌ನಲ್ಲಿ ಪ್ಯಾಲಿಸ್ತೇನಿನ ಧ್ವಜ ಹಾರಿಸಿದರೆ ಒಂದು ವರ್ಷ ಜೈಲು ಶಿಕ್ಷೆ ಇದೆ.