ಚೆನ್ನೈ: ಒಂದು ಗಂಡು ಮತ್ತು ಒಂದು ಹೆಣ್ಣು ಒಂದು ಬಾರಿ ಮದುವೆಯಾಗುವುದು ಸಹಜ. ಆದರೆ ಎರಡೆರಡು ಬಾರಿ ಮುದುವೆಯಾಗಲು ಸಾಧ್ಯವೇ? ಕ್ರಿಕೆಟ್ ಅಂಗಣಲ್ಲಿ ಸೋಲಿನ ಹಾದಿ ಹಿಡಿದ ಪಂದ್ಯವನ್ನು ದ್ವಿಶತಕ ಗಳಿಸಿ ಗೆಲ್ಲಿಸಿಕೊಡಲಾಗುತ್ತದೆ. ಹಾಗಿರುವಾಗ ಮದುವೆಯನ್ನು ಎರಡೆರಡು ಬಾರಿ ಆಗಲು ಸಾಧ್ಯವಿಲ್ಲವೇ? ಎನ್ನುತ್ತಾರೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಅವರ ಪತ್ನಿ ವಾಣಿ ರಾಮನ್. Interesting story about Glenn Maxwell and Vani Raman Marriage.
ಕ್ರಿಕೆಟ್ ಆಟವನ್ನು ಜಗತ್ತೇ ಪ್ರೀತಿಸುತ್ತಿದೆ. ಅದೇ ರೀತಿ ಕ್ರಿಕೆಟಿಗರನ್ನು ಕೂಡ. ಚಿಕ್ಕಂದಿನಿಂದಲೇ ಸಾಕಷ್ಟು ಹಣ ಸಂಗ್ರಹವಾಗಿರುವುದರಿಂದ ಲಲನೆಯರು ಕ್ರಿಕೆಟಿಗರ ಪ್ರೀತಿಯಲ್ಲಿ ಬೇಗನೆ ಬೀಳುತ್ತಾರೆ.ಆದರೆ ಮ್ಯಾಕ್ಸ್‌ವೆಲ್ ಭಾರತದ ಹುಡುಗಿ ವಾಣಿ ಅವರ ಪ್ರೀತಿಯ ಕತೆ ಕುತೂಹಲವಾದುದು.
ವಾಣಿ ಹಿಂದೂ, ಮ್ಯಾಕ್ಸ್‌ವೆಲ್ ಕ್ರಿಶ್ಚಿಯನ್. ಪ್ರೀತಿಗೆ ಜಾತಿ ಇಲ್ಲ. ವಾಣಿಯ ಹೆತ್ತವರು ಇರುವುದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ. ವಾಣಿ ವೃತ್ತಿಯಲ್ಲಿ ಫಾರ್ಮಾಸಿಸ್ಟ್. ಆಸ್ಟ್ರೇಲಿಯಾದಲ್ಲೇ ಹುಟ್ಟಿ ಬೆಳೆದವಳು. ಗೆಳೆಯರೊಬ್ಬರಿಂದ ಮ್ಯಾಕ್ಸ್‌ವೆಲ್‌ಗೆ ವಾಣಿ ರಾಮನ್ ಅವರ ಪರಿಚಯವಾಯಿತು. ಪರಿಚಯ ಪ್ರೀತಿಗೆ ತಿರುಗಿ, ಪ್ರೀತಿಗೆ ನಾಲ್ಕು ವಸಂತ ಕಳೆಯಿತು. ಕೊನೆಗೆ ಮ್ಯಾಕ್ಸ್‌ವೆಲ್ ಮುದುವೆಯಾಗುವ ಆಶಯವನ್ನು ವಾಣಿಗೆ ತಿಳಿಸಿದರು. ವಾಣಿಗೆ ಎಲ್ಲಿಲ್ಲದ ಸಂಭ್ರಮ.
ಆದರೆ ಮದುವೆಗೆ ಮುಂಚೆ ಇಬ್ಬರೂ ಒಂದು ಷರತ್ತಿಗೆ ಒಪ್ಪಿಕೊಂಡರು. ಆಸ್ಟ್ರೇಲಿಯಾದಲ್ಲಿ ನಡೆಯುವ ಮದುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆಯುತ್ತದೆ ಎಂದು ಮ್ಯಾಕ್ಸ್‌ವೆಲ್ ಕೇಳಿಕೊಳ್ಳುತ್ತಾರೆ. ಅದಕ್ಕೆ ವಾಣಿ ಸೇರಿದಂತೆ ಆಕೆಯ ಹೆತ್ತವರೂ ಒಪ್ಪಿಕೊಳ್ಳುತ್ತಾರೆ. ಅದೇ ರೀತಿ ಚೆನ್ನೈನಲ್ಲಿ ತಮಿಳು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಕಾರ್ಯ ನಡೆಯಬೇಕೆಂದು ವಾಣಿಯ ಕಡೆಯಿಂದ ಬೇಡಿಕೆ. ಅದಕ್ಕೆ ಮ್ಯಾಕ್ಸ್‌ವೆಲ್ ಕುಟುಂಬವೂ ಒಪ್ಪಿಕೊಳ್ಳುತ್ತದೆ. ಎರಡೂ ಕುಟುಂಬದವರಿಗೂ ಖುಷಿ.
2022ರ ಮಾರ್ಚ್ 18ರಂದು ಆಸ್ಟ್ರೇಲಿಯಾದಲ್ಲಿ ಮ್ಯಾಕ್ಸ್‌ವೆಲ್ ಹಾಗೂ ವಾಣಿ ಮದುವೆ ಕ್ರೈಸ್ತ ಸಂಪ್ರದಾಯದಂತೆ ನಡೆಯಿತು. ಬಳಿಕ ಮಾರ್ಷ್ 27 ರಂದು ಚೆನ್ನೈನಲ್ಲಿ ತಮಿಳು ಸಂಪ್ರದಾಯದಂತೆ ನಡೆಯಿತು. ಈಗ ಮ್ಯಾಕ್ಸ್‌ವೆಲ್ ದಂಪತಿಗೆ ಒಂದು ಗಂಡು ಮಗುವಿದೆ. ಹೆಸರು ಲೊಗಾನ್ ಮಾರ್ವಿಕ್ ಮ್ಯಾಕ್ಸ್‌ವೆಲ್. ಮ್ಯಾಕ್ಸ್‌ವೆಲ್ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಆಸೀಸ್ ಸೆಮಿಫೈನಲ್ ತಲಪುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವಾಣಿ ಈಗ ಪುಟ್ಟ ಲೊಗಾನ್ ಮಾರ್ವಿಕ್ ಜೊತೆ ಅಂಗಣದಿಂದ ಅಂಗಣಕ್ಕೆ ತಿರುಗುತ್ತಿದ್ದಾರೆ.