Friday, November 22, 2024

48 ಗಂಟೆಗಳೊಳಗೆ ಭಾರತ ಬಿಟ್ಟು ಹೊರಡಿ ಪಾಕ್‌ ಆಟಗಾರರಿಗೆ ಆದೇಶ

ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್‌ ತಂಡ ತವರಿಗೆ ತಲುಪಿದೆ. ಪಾಕಿಸ್ತಾನ ಕ್ರಿಕೆಟ್‌ ತಂಡ, ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತು ಅಲ್ಲಿನ ಪತ್ರಕರ್ತರು 48 ಗಂಟೆಗಳೊಳಗೆ ಭಾರತವನ್ನು ಬಿಟ್ಟು ಮನೆ ಸೇರಬೇಕು. ಅವರಿಗೆ ಯಾವುದೇ ಕಾರಣಕ್ಕೂ ವೀಸಾ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಇಸ್ಲಾಮಾಬಾದ್‌ನಲ್ಲಿರುವ ಭಾರತ ರಾಯಭಾರಿ ಕಚೇರಿ ಆದೇಶಿಸಿತ್ತು. Pakistan cricketers left early as India denies Visa.

ಪಾಕಿಸ್ತಾನದ ವಿಶ್ವಕಪ್‌ ಅಭಿಯಾನ ನವೆಂಬರ್‌ 11 ಕ್ಕೆ ಮುಗಿದಿದೆ. ಒಂದು ವೇಳೆ ಫೈನಲ್‌ ತಲುಪಿರುತ್ತಿದ್ದರೆ ನವೆಂಬರ್‌ 21 ರ ವರೆಗೂ ವೀಸಾ ಅನುಮತಿ ಇರುತ್ತಿತ್ತು. ಆದರೆ ಈಗ ಪಾಕಿಸ್ತಾನದ ವಿಶ್ವಕಪ್‌ ಹೋರಾಟ ಮುಕ್ತಾಯಗೊಂಡಿದೆ. ಇನ್ನು ವಿಶ್ವಕಪ್‌ನ ಹೆಸರಿನಲ್ಲಿ ಇಲ್ಲೇ ಉಳಿದುಕೊಂಡು ಫೈನಲ್‌ ನೋಡಿಕೊಂಡು, ಇಲ್ಲಿಯ ಸ್ಥಳಗಳಿಗೆ ಭೇಟಿ ನೀಡುತ್ತ ಕಾಲ ಕಳೆಯುವಂತಿಲ್ಲ.

“ಭಾರತದಲ್ಲಿ ನಮಗೆ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ತಂಡದ ಪ್ರತಿಯೊಬ್ಬ ಆಟಗಾರರೂ ಇಲ್ಲಿಯ ಆತಿಥ್ಯವನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ನಮ್ಮಿಂದ ಉತ್ತಮ ಪ್ರದರ್ಶನ ನೀಡಲಾಗಲಿಲ್ಲ,” ಎಂದು ಪಾಕ್‌ ತಂಡದ ನಾಯಕ ಬಾಬರ್‌ ಅಝಾಮ್‌ ಹೇಳಿದ್ದಾರೆ. ಇನ್ನೊಂದೆಡೆ ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌, “ಪಾಕಿಸ್ತಾನ್‌ ಜಿಂದಾಬಾದ್‌, ವಿಮಾನದಲ್ಲಿ ಸುಖಕರವಾಗಿ ಪ್ರಯಾಣಿಸಿ ಸುರಕ್ಷಿತರಾಗಿ ಮನೆ ತಲುಪಿ, …ಬಾಯ್‌ ಬಾಯ್‌ ಪಾಕಿಸ್ತಾನ್‌,” ಎಂದು ಗೇಲಿ ಮಾಡಿದ್ದರು.

ಪ್ರತಿ ಬಾರಿಯೂ ಪಾಕಿಸ್ತಾನದ ಆಟಗಾರರಿಗೆ ಷರತ್ತುಗಳ ಆಧಾರದ ಮೇಲೆ ವೀಸಾ ನೀಡಲಾಗುತ್ತಿತ್ತು. ಟೂರ್ನಿ ಮುಗಿದ ನಂತರ ತಂಡದ ಆಟಗಾರರು, ಆಡಳಿತ ಮಂಡಳಿ ಮತ್ತು ಪತ್ರಕರ್ತರಿಗೆ ಒಂದು ವಾರದ ವರೆಗೆ ಉಳಿದುಕೊಳ್ಳುವ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಪಾಕಿಸ್ತಾನದಿಂದ 60 ಪತ್ರಕರ್ತರು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ 9 ಪತ್ರಕರ್ತರಿಗೆ ಮಾತ್ರ ವೀಸಾ ನೀಡಿದೆ. ಪಾಕಿಸ್ತಾನದ ಅಧಿಕೃತ ಪ್ರಸಾರಕರಾದ ಎ-ಸ್ಪೋರ್ಟ್ಸ್‌ನ ವರದಿಗಾರನಿಗೆ ಮಾತ್ರ ವೀಸಾ ವಿಸ್ತರಣೆ ಮಾಡಲಾಗಿದೆ.

Related Articles