Friday, December 27, 2024

1983ರ ವಿಶ್ವಕಪ್‌ ತಂಡಕ್ಕೆ ನೆರವು ನೀಡಲು ಲತಾಜಿ ಆರ್ಕೆಸ್ಟ್ರಾ!

ಬೆಂಗಳೂರು: ಭಾನುವಾರ ನಡೆಯುವ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಚಾಂಪಿಯನ್‌ ತಂಡ 33.30 ಕೋಟಿ ರೂ, ಬಹುಮಾನವನ್ನು ಗಳಿಸಲಿದೆ. ಆದರೆ 1983ರಲ್ಲಿ ಗೆದ್ದ ಕಪಿಲ್‌ ದೇವ್‌ ನೇತ್ರತ್ವದ ತಂಡದ ಬಹುಮಾನದ ಕತೆಯನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಅದರಲ್ಲೂ ಲತಾ ಮಂಗೇಷ್ಕರ್‌ ಅವರ ಕಾಳಜಿಯನ್ನು ಮರೆಯುವಂತಿಲ್ಲ. ಲತಾಜಿ ತಂಡಕ್ಕಾಗಿ 20 ಲಕ್ಷ ರೂ. ಸಂಗ್ರಹಿಸಿರುವುದು ಅವರ ಕ್ರೀಡಾ ಪ್ರೀತಿಗೆ ಉದಾಹರಣೆ. Lata Mangeshkar raised Rs 20 lakh for 1983 world cup Team.

ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್‌ದೇಸಾಯಿ ಹಾಗೂ ಕ್ರಿಕೆಟ್‌ ಇತಿಹಾಸ ತಜ್ಞ ಬೋರಿಯಾ ಮಜುಂದಾರ್‌ ಬಹಳ ಸಮಯದ ಹಿಂದೆ ಆಟಗಾರರ ದಿನ ಭತ್ಯೆಯ ದಾಖಲೆಯನ್ನು ಟ್ವಿಟರ್‌ನಲ್ಲಿ ಬಹಿರಂಗಗೊಳಿಸಿದ್ದರು. ಕಪಿಲ್‌ ದೇವ್‌  ಸೇರಿದಂತೆ ಅನೇಕ ಆಟಗಾರರು ಅಂದಿನ ಕಷ್ಟದ ದಿನಗಳನ್ನು ಕೆಲವೊಮ್ಮೆ ಹೇಳಿಕೊಂಡಿದ್ದುಂಟು.

ಬಿಸಿಸಿಐ ವಿಶ್ವಕಪ್‌ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೂ 25,000 ರೂ. ನೀಡಿತ್ತು. ಆಗಿನ ಕಾಲಕ್ಕೆ ಅದು ಗೌರವಯುತ ಮೊತ್ತವಾಗಿತ್ತು. ಬಿಸಿಸಿಐಗೆ ಆಗ ಆದಾಯದ ಈಗಿರುವಂತೆ ಇರಲಿಲ್ಲ, ಜೊತೆಯಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಹಣದ ಮೌಲ್ಯ ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ವ್ಯತ್ಯಾಸವಿದೆ. ಬಿಸಿಸಿ ನೀಡಿದ ಸಂಭಾವನೆಯಿಂದ ಬೇಸತ್ತ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌ ದೆಹಲಿಯಲ್ಲಿ ಸಂಗೀತ ರಸಂಜರಿ ಕಾರ್ಯಕ್ರಮವನ್ನು ಆಯೋಜಿಸಿ ಸಂಗ್ರಹವಾದ ಹಣವನ್ನು ಆಟಗಾರರಿಗೆ ಹಂಚಿದ್ದರು. ಇದು ಕ್ರಿಕೆಟ್‌ ಬಗ್ಗೆ ಲತಾ ಮಂಗೇಷ್ಕರ್‌ ತೋರಿದ ಪ್ರೀತಿ ಅನ್ನುವುದಕ್ಕಿಂತ ದೇಶಕ್ಕೆ ಗೌರವ ತಂದ ಭಾರತ ತಂಡದ ಬಗ್ಗೆ ಇರುವ ಕಾಳಜಿ.

ಬಿಸಿಸಿಐ ಮೊದಲು ಆಟಗಾರರಿಗೆ ತಲಾ 5 ಸಾವಿರ ರೂ. ನೀಡಲು ಯೋಚಿಸಿತ್ತು. ಆದರೆ ಸುನಿಲ್‌ ಗವಾಸ್ಕರ್‌ ವಿರೋಧಿಸಿದ ಕಾರಣ ಮೊತ್ತವನ್ನು 25,000ಕ್ಕೇ ಏರಿಸಲಾಯಿತು. ಜೊತೆಯಲ್ಲಿ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ರಾಜ್‌ಸಿಂಗ್‌ ದುಂಗ್ರಾಪುರ್‌ ಅವರು ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುವಂತೆ ವಿನಂತಿಸಿಕೊಂಡರು. ಲತಾಜಿ ಒಪ್ಪಿಕೊಂಡರು. ಆ ಕಾರ್ಯಕ್ರಮಕ್ಕೆ “ಭಾರತ ವಿಶ್ವ ವಿಜೇತ” ಎಂದು ಹೆಸರಿಡಲಾಯಿತು. ಸುಮಾರು 20ಲಕ್ಷ ರೂ. ಸಂಗ್ರಹವಾಯಿತು. ಆಟಗಾರರಿಗೆ ತಲಾ 1.5 ಲಕ್ಷ ರೂ.ನೀಡಲಾಯಿತು. 1983 ಆಗಸ್ಟ್‌ 17ರಂದು ಈ ಕಾರ್ಯಕ್ರಮ ನಡೆದಿತ್ತು.

Related Articles